ಮೇಘನಾ ರಾಜ್ 'ತತ್ಸಮ ತದ್ಬವ'ಕ್ಕೆ 'ಕಿರಿಕ್ ಪಾರ್ಟಿ' ಅರವಿಂದ್ ಅಯ್ಯರ್, 'ಗಟ್ಟಿಮೇಳ' ನಟಿ ಮಹತಿ!
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಪತ್ನಿ ಮೇಘನಾ ರಾಜ್ ಸಿನಿಮಾರಂಗಕ್ಕೆ ರೀ-ಎಂಟ್ರಿ ಕೊಡುತ್ತಿದ್ದಾರೆ. ನಟನೆಗೆ ಕಮ್‌ಬ್ಯಾಕ್ ಮಾಡಿರೋ ಮೇಘನಾ ಎಂತಹ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರಬಹುದು ಅನ್ನೋ ನಿರೀಕ್ಷೆಯಿತ್ತು. ಅದೀಗ ಕುತೂಹಲ ಕೆಲವೇ ದಿನಗಳ ಹಿಂದಷ್ಟೇ ದೂರವಾಗಿದೆ. ತಮ್ಮ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಮಾಡಿ ಸಿನಿಪ್ರಿಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಅಂದ್ಹಾಗೆ ಮೇಘನಾ ರಾಜ್ ಕಮ್‌ಬ್ಯಾಕ್ ಮಾಡುತ್ತಿರುವ ಹೊಸ ಸಿನಿಮಾದ ಹೆಸರು 'ತತ್ಸಮ ತದ್ಬವ'.
ಮೇಘನಾ ರಾಜ್ ಫಸ್ಟ್ ಲುಕ್ ನೋಡಿದರೆ, ಇದು ರೆಗ್ಯೂಲರ್ ಸಿನಿಮಾ ಅಲ್ಲ ಅನ್ನೋದು ಗೊತ್ತಾಗಿದೆ. 'ತತ್ಸಮ ತದ್ಬವ' ಸಿನಿಮಾ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ಆತ್ಮೀಯ ಗೆಳೆಯನಾಗಿರೋ ಪನ್ನಗಾಭರಣ ಹಾಗೂ ಸ್ನೇಹಿತರು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾದಲ್ಲಿ ಒಂದೊಂದೇ ಪಾತ್ರಗಳನ್ನು ಚಿತ್ರತಂಡ ರಿವೀಲ್ ಮಾಡುತ್ತಿದೆ.

ತತ್ಸಮ ತದ್ಬವ ಸಿನಿಮಾದಲ್ಲಿ ಕಿರಿಕ್ ಪಾರ್ಟಿ
'ಕಿರಿಕ್ ಪಾರ್ಟಿ' ಸಿನಿಮಾ ನೋಡಿದವರಿಗೆ ರಕ್ಷಿತ್ ಶೆಟ್ಟಿ ಅಷ್ಟೇ ಅಲ್ಲ, ಅವರಿಗೆ ವಿರುದ್ಧವಾಗಿ ನಿಂತಿದ್ದ ಇನ್ನೊಂದು ಪಾತ್ರ ಕೂಡ ಇಷ್ಟ ಆಗಿತ್ತು. ಅವರೇ ಅರವಿಂದ್ ಅಯ್ಯರ್. ಇತ್ತೀಚೆಗೆ 'ಭೀಮಸೇನ ನಳಮಹಾರಾಜ' ಅನ್ನೋ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಒಳ್ಳೆಯ ಅವಕಾಶಗಳು ಸಿಕ್ಕಿದ್ದರೂ ಹೆಚ್ಚು ಸಿನಿಮಾದಲ್ಲಿ ನಟಿಸುವ ಗೋಜಿಗೆ ಹೋಗಿರಲಿಲ್ಲ. ಆದ್ರೀಗ 'ತತ್ಸವ ತದ್ಬವ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಅರವಿಂದ್ ಅಯ್ಯರ್ 'ತತ್ಸಮ ತದ್ಭವ' ಸಿನಿಮಾದಲ್ಲಿ ಮ್ಯಾಥ್ಯೂ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಫಸ್ಟ್ ಲುಕ್ ನೋಡಿದರೆ, ಅರವಿಂದ್ ಅಯ್ಯರ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಮನವರಿಕೆಯಾಗುತ್ತೆ. ಇತ್ತೀಚೆಗಷ್ಟೇ ಮೇಘನಾ ರಾಜ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಅರವಿಂದ್ ಅಯ್ಯರ್ ಲುಕ್ ಅನ್ನು ಪರಿಚಯಿಸಿದೆ.

'ತತ್ಸಮ ತದ್ಭವ' ಸಿನಿಮಾದಲ್ಲಿ ಮಹತಿ ವೈಷ್ಣವಿ ಭಟ್
ಮೇಘನಾ ರಾಜ್ ಜೊತೆ ನಟಿಸುತ್ತಿರುವ ಇನ್ನೊಬ್ಬ ನಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಗಟ್ಟಿಮೇಳ ' ಹಾಗೂ 'ಗುರು ಶಿಷ್ಯರು ' ಧಾರಾವಾಹಿ ಮೂಲಕ ಜನಪ್ರಿಯರಾಗಿರೋ ಮಹತಿ ವೈಷ್ಣವಿ ಭಟ್ 'ತತ್ಸಮ ತದ್ಭವ' ಸಿನಿಮಾದಲ್ಲಿ ನಿಧಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. 'ತತ್ಸಮ ತದ್ಬವ' ಟೀಮ್ ಇವರ ಫಸ್ಟ್ ಲುಕ್ ಅನ್ನು ಕೂಡ ರಿವೀಲ್ ಮಾಡಿದ್ದಾರೆ.
"ಮಹತಿ ಪ್ರತಿ ಹದಿಹರೆಯದವರಿಗೂ ಅನ್ವಯಿಸುವ ಪಾತ್ರ. ಇದು ಮುಗ್ಧತೆ ಮತ್ತು ಭಾವನೆಗಳ ಮಿಶ್ರಣದ ರೋಲ್ ಎಂದರೂ ತಪ್ಪಾಗಲಾರದು. ಈ ಪಾತ್ರ ನಿರ್ವಹಿಸಿದ ಸವಾಲು ತುಂಬಾ ಇಷ್ಟವಾಯಿತು." ಎಂದು ನಿಧಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ 'ತತ್ಸಮ ತದ್ಬವ' ಸಿನಿಮಾದಲ್ಲಿ ಮೇಘನಾ ರಾಜ್ ಜೊತೆಗೆ ಅರವಿಂದ್ ಅಯ್ಯರ್, ಮಹತಿ ವೈಷ್ಣವಿ ಭಟ್ ಅವರ ಪಾತ್ರಗಳನ್ನು ರಿವೀಲ್ ಮಾಡಿದೆ. ಇವರೊಂದಿಗೆ ಇನ್ನೂ ಯಾವ್ಯಾವ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೋ ಅನ್ನೋ ಕುತೂಹಲ ಹೆಚ್ಚಾಗಿದೆ.


Click it and Unblock the Notifications











