"ಬೆಲ್ಲದಲ್ಲಿ ಕೊಳೆಯಿರುತ್ತೆ, ಅದರ ಮೇಲಿನ ಕೊಳೆ ತೆಗೆದರೆ ಪಾಯಸಕ್ಕೆ ರುಚಿ"; ದರ್ಶನ್ ಜಾಮೀನ ಬಗ್ಗೆ ಕೋಡಿಮಠ ಶ್ರೀಗಳ ಭವಿಷ್ಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ನೀಡುವುದಕ್ಕೆ ನಿನ್ನೆ (ಅಕ್ಟೋಬರ್ 14) ಕೋರ್ಟ್ ನಿರಾಕರಿಸಿದೆ. ಈ ಬಾರಿ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದರ್ಶನ್‌ಗೆ ನಿರಾಸೆಯಾಗಿದೆ. ಇದೇ ಖುಷಿಯಲ್ಲಿಯೇ ನಿನ್ನೆ ಕೂಡ ಅಭಿಮಾನಿಗಳು ಸಹಸ್ರ ಸಂಖ್ಯೆ ಸೇರಿಕೊಂಡಿದ್ದರು. ಆದರೆ, ಜಾಮೀನಿ ಸಿಗದೇ ಇದ್ದಿದ್ದರಿಂದ ಅವರೂ ಕೂಡ ಬೇಸರದಲ್ಲಿ ಮನೆಗೆ ಹಿಂತಿರುಗಿದ್ದಾರೆ.

ಇನ್ನೊಂದು ಕಡೆ ಕೋಡಿಮಠ ಶ್ರೀಗಳು ಮಾಧ್ಯಮಗಳಿಗೆ ದರ್ಶನ್ ಜಾಮೀನಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಮುಂದೆ ಮಾತಾಡಿದ ಕೋಡಿಮಠ ಶ್ರೀಗಳು ಮಾರ್ಮಿಕವಾಗಿ ದರ್ಶನ್ ಜಾಮೀನು ವಿಚಾರವಾಗಿ ಭವಿಷ್ಯ ಹೇಳಿದ್ದಾರೆ. ಸದ್ಯ ಶ್ರೀಗಳು ನುಡಿದ ಭವಿಷ್ಯ ವಾಣಿ ಬಗ್ಗೆ ಎಲ್ಲೆಡೆ ವೈರಲ್ ಆಗುತ್ತಿದೆ.

Kodi Mutt Sri prediction about Darshan Bail application on renukaswamy case

ದರ್ಶನ್‌ಗೆ 57ನೇ ಸಿಸಿಎಚ್ ನ್ಯಾಯಾಲಯ ಜಾಮೀನು ನೀಡುವುದನ್ನು ನಿರಾಕರಿಸಿದೆ. ಈ ಬೆನ್ನಲ್ಲೇ ರೇಣುಕಾಸ್ವಾಮಿ ಹತ್ಯೆ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ದರ್ಶನ್ ಮುಂದಿನ ನಡೆಯೇನು? ಅನ್ನೋದು ಕುತೂಹಲ ಕೆರಳಿಸಿದೆ. ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿ ದರ್ಶನ್‌ಗೆ ಜಾಮೀನು ಸಿಗುವ ವಿಚಾರವಾಗಿ ಕೋಡಿಮಠ ಶ್ರೀಗಳು ನುಡಿದ ಭವಿಷ್ಯ ಹೀಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದ್ದರು. ಈಗ ಮತ್ತೆ ಜಾಮೀನು ನಿರಾಕರಣೆಯ ಬಳಿಕ ಮಾತಾಡಿಸಿದಾಗ ಪಾಪದ ಬಗ್ಗೆ ಮಾತಾಡಿದ್ದಾರೆ. "ಈ ಬಗ್ಗೆ ಈಗಾಗಲೇ ನಾನು ಹೇಳಿದ್ದೇನೆ. ಪಾಪದ ಪಾಶ ಉಕ್ಕಿದರೆ, ಪಾಯಸದ ರುಚಿ ಆಗುತ್ತೆ. ಬೆಲ್ಲ ಹಾಕಿ ಪಾಯಸ ಮಾಡುತ್ತಾರಲ್ಲ. ಬೆಲ್ಲದಲ್ಲಿ ಏನಿರುತ್ತೆ ಕೊಳೆಯಿರುತ್ತೆ. ಅದು ಉಕ್ಕುತ್ತೆ ಪಾಯಸ. ಅದರ ಮೇಲಿರುವ ಕೊಳೆ ತೆಗೆದರೆ, ಪಾಯಸದ ರುಚಿ ಆಗುತ್ತೆ." ಎಂದು ಕೋಡಿ ಮಠದ ಶ್ರೀಗಳು ಹೇಳಿದ್ದಾರೆ.

ಇದರೊಂದಿಗೆ ಜನರು ಪಾಪ ಮಾಡುವುದಕ್ಕೆ ಹೆದರುತ್ತಿಲ್ಲ. ಅದೇ ಪುಣ್ಯ ಮಾಡುವುದಕ್ಕೆ ಹೆದರುತ್ತಿದ್ದಾರೆಂದು ಹೇಳಿದ್ದಾರೆ. "ಮನುಷ್ಯ ಮಾಡಿದ ಪಾಪ ಹೋಗಬೇಕು. ಪಾಪಾ,ತಾವು ಮಾಡಿದ ಕರ್ಮ ಬಲವಂತವಾದರೆ ಯಾರೇನು ಮಾಡುವರು. ಮನುಷ್ಯ ಪುಣ್ಯ ಮಾಡುವುದಕ್ಕೆ ಹೆದರಬಾರದು. ಪಾಪ ಮಾಡಲಿಕ್ಕೆ ಹೆದರಬೇಕು. ನಾನು ಪಾಪ ಮಾಡುವುದಕ್ಕೆ ಹೆದರುತ್ತಿಲ್ಲ. ಪುಣ್ಯ ಮಾಡುವುದಕ್ಕೆ ಹೆದರುತ್ತಿದ್ದೇವೆ." ಎಂದಿದ್ದಾರೆ. ಈ ಮೂಲಕ ದರ್ಶನ್ ಜಾಮೀನು ಸಿಗುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು ಅನ್ನೋದನ್ನು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆಂದು ಚರ್ಚೆಯಾಗುತ್ತಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜಾಮೀನು ಸಿಗುತ್ತೋ ಇಲ್ಲವೋ ಅನ್ನೋದು ಕಗ್ಗಂಟಾಗಿದೆ. ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ನಿರಾಕರಣೆ ಆದ ಬಳಿಕ ಹೈಕೋರ್ಟ್‌ಗೆ ಅಪೀಲ್ ಹೋಗಲಿದ್ದಾರೆ ಅನ್ನೋ ಮಾತು ಹೇಳಿಬರುತ್ತಿದೆ. ಇನ್ನೂ ದರ್ಶನ್ ಪರ ವಕೀಲರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದು ನಿಗೂಢವಾಗಿಯೇ ಇದೆ.

57ನೇ ಸಿಸಿಎಚ್ ಕೋರ್ಟ್‌ನಲ್ಲಿ ದರ್ಶನ್ ಪರ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಅದೇ ಇನ್ನೊಂದು ಕಡೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದವನ್ನು ಮಂಡಿಸಿದ್ದರು. ಇಬ್ಬರ ವಾದವನ್ನು ಆಲಿಸಿದ ಬಳಿಕ ದರ್ಶನ್‌ಗೆ ಜಾಮೀನನ್ನು ನಿರಾಕರಿಸಲಾಗಿದೆ. ಇವರೊಂದಿಗೆ ಎ 1 ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಅವರಿಗೆ ಬೇಲ್ ನೀಡದಂತೆ 57ನೇ ಸಿಸಿಎಚ್ ಕೋರ್ಟ್ ತೀರ್ಪು ನೀಡಿದೆ.

More from Filmibeat

English summary
Kodi Mutt Sri prediction about Darshan Bail application on renukaswamy case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X