ದರ್ಶನ್ ಬಂಧನ-ಉಮಾಪತಿ ಆರೋಪ; ಕೋಡಿಮಠದ ಸ್ವಾಮೀಜಿ ನುಡಿದ ಭವಿಷ್ಯವೇನು?
ದರ್ಶನ್ ಬಂಧನದ ಬಳಿಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇನ್‌ಸ್ಟಾಗ್ರಾಂ ಸ್ಟೋರಿನಲ್ಲಿ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಅದೇ ಪೋಸ್ಟ್ ಬಳಿಕ ದರ್ಶನ್ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ದರ್ಶನ್‌ರಿಂದ ಬೆದರಿಕೆಗಳನ್ನು ಎದುರಿಸಿದ್ದೆ ಎಂದು ಹೇಳಿದ್ದಾರೆ.
ಈ ಕಾರಣಕ್ಕೆ ದರ್ಶನ್ ವಿರುದ್ಧ ಉಮಾಪತಿ ಶ್ರೀನಿವಾಸ್ ಗೌಡ ಅವರ ಆರೋಪಗಳು ಇನ್ನೂ ನಿಂತಿಲ್ಲ. ಒಂದೊಂದು ಸಂದರ್ಶನದಲ್ಲಿ ಹೊಸ ಹೊಸ ಆರೋಪಗಳು ಹೊರಬರುತ್ತಿವೆ. ಈ ಮಧ್ಯೆ ಇವರಿಬ್ಬರ ಬಗ್ಗೆ ಕೋಡಿಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ದೇಶದ ಬಗ್ಗೆ, ಸರ್ಕಾರಗಳ ಬಗ್ಗೆ ಮಾತಾಡುವ ವೇಳೆನೇ ದರ್ಶನ್ ಬಗ್ಗೆನೂ ಮಾತಾಡಿದ್ದಾರೆ. ಆ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೋಡಿ ಮಠದ ಸ್ವಾಮೀಜಿಗಳು ದೇಶದಲ್ಲೀಗ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಹೀಗಾಗಿ ಶುಭ ಸಮಾಚಾರಗಳಿಗಿಂತ ಹೆಚ್ಚಾಗಿ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ ಎಂದಿದ್ದಾರೆ. ಹಾಗೆಯೇ ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ, ವಾಯು ಕಂಟಕ ಕೂಡ ಹೆಚ್ಚಾಗಿ ಸಂಭವಿಸಲಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಕಾರ್ಯಕ್ರಮ ನಿಮಿತ್ತ ತೆರಳಿದ್ದ ಸ್ವಾಮೀಜಿಗಳು ಮಾಧ್ಯಮದೊಂದಿಗೆ ಮಾತಾಡುವ ವೇಳೆ ದರ್ಶನ್ ಭವಿಷ್ಯವನ್ನು ನುಡಿದಿದ್ದಾರೆ.
ದರ್ಶನ್ ಬಂಧನದ ಬಳಿಕ ನಿರ್ಮಾಪಕ ಉಮಾಪತಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಇಬ್ಬರ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ಗೆ ಕೋಪ ಜಾಸ್ತಿಯಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ತಾಳ್ಮೆ ಜಾಸ್ತಿಯಿದೆ ಎಂದು ಹೇಳಿದ್ದಾರೆ. "ಬೆಳಗ್ಗೆ ಟಿವಿ ನೋಡುತ್ತಿದ್ದೆ ಈ ವೇಳೆ ಉಮಾಪತಿಯೇ ಹೇಳಿದ್ದಾರೆ. ಕೋಡಿಮಠ ಸ್ವಾಮೀಜಿಗಳನ್ನು ಭೇಟಿಯಾಗಿದ್ದೆ. ಆ ವೇಳೆ ಕೋಪ ಕಡಿಮೆ ಮಾಡಿಕೊಳ್ಳಬೇಕು. ತಂದೆ-ತಾಯಿ ಹೇಳಿದಂತೆ ಕೇಳಬೇಕೆಂದು ಹೇಳಿದ್ದರು. ಅದರಂತೆಯೇ ಉಮಾಪತಿ ನಡೆದುಕೊಂಡಿದ್ದಾನೆಂದು" ಹೇಳಿದ್ದಾರೆ.

"ಉಮಾಪತಿ ಈ ರೀತಿ ನಡೆದುಕೊಂಡಿದ್ದರಿಂದಲೇ ಈಗ ಒಳ್ಳೆಯ ಸ್ವಾನಮಾನದಲ್ಲಿದ್ದಾನೆ. ದರ್ಶನ್ ವಿರುದ್ಧ ಗಲಾಟೆ ನಡೆದಾಗ ಕೋಪ ಮಾಡಿಕೊಳ್ಳಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಘಡಗಳು ಸಂಭವಿಸುತ್ತವೆ ಎಂದು ಉಮಾಪತಿಯೇ ಹೇಳಿದ್ದಾರೆ." ಎಂದು ಕೋಡಿಮಠದ ಸ್ವಾಮಿಗಳು ಹೇಳಿದ್ದಾರೆ.
ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎಂದು ದರ್ಶನ್ ಹಾಗೂ ಉಮಾಪತಿ ನಡುವಿನ ಗಲಾಟೆಯ ಬಗ್ಗೆ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಹೀಗಾಗಿ ದರ್ಶನ್ ಭವಿಷ್ಯ ಏನಾಗುತ್ತೆ? ಉಮಾಪತಿ ಆರೋಪ ಯಾವಾಗ ತಣ್ಣಗಾಗುತ್ತೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಪೊಲೀಸ್ ಕಸ್ಟಡಿ ಮುಗಿಯುತ್ತೆ. ಆಮೇಲೆ ದರ್ಶನ್ ಭವಿಷ್ಯ ಏನಾಗುತ್ತೆ? ಅನ್ನೋದು ಗೊತ್ತಾಗಲಿದೆ. ಮತ್ತೆ ಪೊಲೀಸರು ಕಸ್ಟಡಿಗೆ ಕೇಳುತ್ತಾರಾ? ಇಲ್ಲ ನ್ಯಾಯಾಂಗ ಬಂಧನ ಆಗುತ್ತಾ? ಅನ್ನೋದು ಇನ್ನೇನು ಹೊರಬೀಳುತ್ತೆ.


Click it and Unblock the Notifications










