Komal Kumar: ಒಂದೊಂದರಲ್ಲಿ ಒಂದೊಂದು ಗೆಟಪ್.. 'ಎಲಾ ಕುನ್ನಿ' ಚಿಂದಿ, 'ರೋಲೆಕ್ಸ್' ಬಿಂದಾಸ್
ಕಾಮಿಡಿ ಕಿಂಗ್ ಕೋಮಲ್ ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಮೂರನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಆರಂಭದಲ್ಲಿ ಹಾಸ್ಯ ಪಾತ್ರಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಟಿಸಿದ್ದರು. ಒಂದಿಷ್ಟು ಸಿನಿಮಾಗಳ ಬಳಿಕ ನಾಯಕನಾಗಿಯೇ ಪ್ರೇಕ್ಷಕರನ್ನು ರಂಜಿಸಲು ಮುಂದಾದ್ರು.
ಹೀರೋ ಆದ್ಮೇಲೆ ಒಂದಿಷ್ಟು ಸಿನಿಮಾಗಳು ಗೆದ್ದವು. ಕೆಲವು ಸಿನಿಮಾ ಸೋತವು. ಸತತ ಸೋಲುಗಳೇ ಕಂಡ ಕೋಮಲ್ ಕೆಲವು ದಿನಗಳು ನಟನೆಗೆ ಬ್ರೇಕ್ ಕೊಟ್ಟಿದ್ದರು. ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದರು. ಈಗ ಕೋಮಲ್ ಮೂರನೇ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ.

ಇಂದು (ಜುಲೈ 4) ಕೋಮಲ್ ಕುಮಾರ್ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಈಗಾಗಲೇ ಅವರು ನಟಿಸುತ್ತಿರುವ ಎರಡು ಸಿನಿಮಾಗಳ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಎರಡೂ ಲುಕ್‌ಗಳೂ ಅವರ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.
ಸೂಟು ಬೂಟು ತೊಟ್ಟು ಬಂದ ಕೋಮಲ್
ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಇಂದು (ಜುಲೈ 4) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಅವರ ಸಿನಿಮಾ ತಂಡ ಕೂಡ ಅಷ್ಟೇ ಸಂಭ್ರಮದಲ್ಲಿದೆ. ಬರ್ತ್‌ಡೇ ಸಂಭ್ರಮದಂದೇ ಕೋಮಲ್ ನಟಿಸುತ್ತಿರುವ 'ರೋಲೆಕ್ಸ್' ಸಿನಿಮಾದ ಸ್ಪೆಷಲ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಸೂಟು ಬೂಟೂ ತೊಟ್ಟು ಸ್ಟೈಲೀಶ್ ಆಗಿ ಮಿಂಚಿದ್ದಾರೆ ಸೆನ್ಸೇಷನಲ್ ಸ್ಟಾರ್.

ಈ 'ರೋಲೆಕ್ಸ್' ಸಿನಿಮಾಗೆ ಶ್ರೀನಿವಾಸ್ ಮಂಡ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಬಿಲ್ ಗೇಟ್ಸ್' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ 'ಬನಾರಸ್' ನಟಿ ಸೋನಾಲ್ ಮಾಂಟೆರೋ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಜೆಸ್ಸಿ ಗಿಫ್ಟ್ ಮ್ಯೂಸಿಕ್ ನೀಡುತ್ತಿದ್ದಾರೆ. ಈಗಾಗಲೇ ಸುಮಾರು 50ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ.
'ಯಲಾ ಕುನ್ನಿ' ಪೋಸ್ಟರ್ ವೈರಲ್
ಕೋಮಲ್ ಕುಮಾರ್ ಹುಟ್ಟುಹಬ್ಬದಂದೇ ವಜ್ರಮುನಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫಸ್ಟ್ ಲುಕ್ ಪೋಸ್ಟರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಾಕಂದ್ರೆ, ಈ ಪೋಸ್ಟರ್‌ನಲ್ಲಿ ಕೋಮಲ್ ಹಿರಿಯ ನಟ ದಿವಂಗತ ವಹ್ರಮುನಿ ಲುಕ್ ಕೊಟ್ಟು ಮಿಂಚಿದ್ದಾರೆ. ಮಹೇಶ್ ಗೌಡ್ರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಎನ್ ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.
ಈ ಫಸ್ಟ್ ಲಕ್‌ನಲ್ಲಿ ನಟ ಕೋಮಲ್ ಹಿರಿಯ ನಟ ವಜ್ರಮುನಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಸ್ಯಾಂಡಲ್‌ವುಡ್‌ನ ಗೆಳೆಯರು ಕೂಡ ಈ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.
ವಜ್ರಮುನಿ ಮೊಮ್ಮಗ ನಟನೆ
'ಯಲಾಕುನ್ನಿ' ಸಿನಿಮಾದ ಟೈಟಲ್ ಜೊತೆಗೆ "ಮೇರಾ ನಾಮ್ ವಜ್ರಮುನಿ " ಎಂಬ ಟ್ಯಾಗ್ ಲೈನ್ ಹಾಗೂ "ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ" ಎಂಬ ಬರಹದೊಂದಿಗೆ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದೆ. ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಮತ್ತು ವಜ್ರಮುನಿ ಮೊಮ್ಮಗ ಆಕರ್ಶ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದು 'ಯಲಾ ಕುನ್ನಿ' ಮ್ಯಾಟರ್ ಆದರೆ, ಅದೇ ಇನ್ನೊಂದು ಕಡೆ 'ರೋಲೆಕ್ಸ್' ಕೂಡ ಗಮನ ಸೆಳೆಯುತ್ತಿದೆ. ಬಹುಶ: ಎಲಾ ಕುನ್ನಿಗೂ ಮುನ್ನ ರೋಲೆಕ್ಸ್ ರಿಲೀಸ್ ಆಗುವ ಸಾಧ್ಯತೆಯಿದ್ದು, ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











