ಕೋಮಲ್ ಕಮ್‌ಬ್ಯಾಕ್ ಸಿನಿಮಾ 'ರೋಲೆಕ್ಸ್ ಕೋಮಲ್' ಶೂಟಿಂಗ್ ಶುರು
ಇತ್ತೀಚೆಗಷ್ಟೇ ಕೋಮಲ್ ಅಭಿನಯದ ಹೊಚ್ಚ ಹೊಸ ಸಿನಿಮಾ 'ರೋಲೆಕ್ಸ್ ಕೋಮಲ್' ಸಿನಿಮಾ ಸೆಟ್ಟೇರಿತ್ತು. ಸೆನ್ಸೇಷನಲ್ ಸ್ಟಾರ್ ಆಗಿ ಹೊರಹೊಮ್ಮಿರೋ ಕೋಮಲ್ ಸಿನಿಮಾದ ಶೂಟಿಂಗ್ ಈಗ ಅದ್ಧೂರಿಯಾಗಿ ಆರಂಭ ಆಗಿದೆ.
ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರೋ 'ರೋಲೆಕ್ಸ್ ಕೋಮಲ್' ಸಿನಿಮಾದಲಲ್ಲಿ ಕೋಮಲ್ ಕುಮಾರ್ ಹಾಗೂ ಸೋನಾಲ್ ಮೊಂಟೆರೋ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಹಾಗೂ ಇದರ ಸುತ್ತಮುತ್ತವೇ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

"ಕೋಮಲ್ ಸರ್ ಈ ಹಿಂದೆ ನಟಿಸಿದ ಸಿನಿಮಾಗಳಿಗಿಂತ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ವಿಭಿನ್ನವಾಗಿದ್ದು, ವಿಭಿನ್ನ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ರಂಗಾಯಣ ರಘು, ಶೋಭರಾಜ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ" ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್ ಇತ್ತೀಚೆಗೆ ನಟಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ರೋಲೆಕ್ಸ್ ಪಾತ್ರದ ಎಲ್ಲ ಗಮನ ಸೆಳೆದಿತ್ತು. ಹಾಗೇ ಕನ್ನಡದಲ್ಲೂ ರೊಲೆಕ್ಸ್ ಸದ್ದು ಮಾಡಲು ಆರಂಭಿಸಿದೆ. ಹಾಗಂತ ಆ ಸಿನಿಮಾಗೂ ಇದ್ದಕ್ಕೂ ಯಾವುದೇ ಸಂಬಂಧವಿಲ್ಲ. "ರೋಲೆಕ್ಸ್ ಅನ್ನೋದು ಒಂದು ಬ್ರ್ಯಾಂಡ್. ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಗುತ್ತೆ ಅನ್ನೋದೇ ಈ ಚಿತ್ರದ ಕಥೆ. ಸಖತ್ ಮನರಂಜನೆ ನೀಡುವ ಸಿನಿಮಾವಿದು. ಕಥೆಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನ್‌ಗಳು ಇವೆ. 'ಗರಗಸ' ಬಳಿಕ ಮತ್ತೆ ವಿಶಿಷ್ಟ ಪ್ರಯೋಗ ಮಾಡುತ್ತಿದ್ದೇನೆ. ಅಭಿನಯಕ್ಕೆ ಸಾಕಷ್ಟು ಅವಕಾಶ ಇದೆ. ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದೆ. ಆಲ್ಬಂ ಹಿಟ್ ಆಗೋ ಎಲ್ಲಾ ಸೂಚನೆ ಇವೆ" ಎನ್ನುತ್ತಾರೆ ಕೋಮಲ್

ಈ ಸಿನಿಮಾವನ್ನು ಅನಿಲ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ, ಜೆಸ್ಸಿ ಗಿಫ್ಟ್ ಸಂಗೀತವಿದೆ.


Click it and Unblock the Notifications











