»   » ಬೇಕಾಬಿಟ್ಟಿ ಕಾಲ್ ಶೀಟ್ ನೀಡೋದು ಸರೀನಾ ರಾಧಿಕಾ?

ಬೇಕಾಬಿಟ್ಟಿ ಕಾಲ್ ಶೀಟ್ ನೀಡೋದು ಸರೀನಾ ರಾಧಿಕಾ?

Posted By:
Subscribe to Filmibeat Kannada
Komal upset with Radhika Pandit for not given the call sheet
ದುಡ್ಡು ಸಿಗುತ್ತೆ ಎಂದು ಬೇಕಾಬಿಟ್ಟಿ ಕಾಲ್‍ಶೀಟ್ ಕೊಡೋದು ಎಷ್ಟು ಸರಿ ಎಂದು ಗಾಂಧಿನಗರದ ಮಂದಿಗಳು ರಾಧಿಕಾ ಪಂಡಿತ್ ಅನ್ನು ಇನ್ ಡೈರೆಕ್ಟಾಗಿ ಕೇಳುತ್ತಾ ಇದ್ದಾರಂತೆ. ಅಲ್ಲದೇ, ಶೈಲೇಂದ್ರ ಬಾಬು ಮಗ ಸುಮಂತ್ ಜೊತೆ ನಟಿ ರಾಧಿಕಾ ಪಂಡಿತ್ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೇ ನಟ ಕಮ್ ನಿರ್ಮಾಪಕ ಕೋಮಲ್ ಕುಮಾರ್ ಕೆಂಡಾಮಂಡಲವಾಗಿದ್ದಾರಂತೆ!

ಕೋಮಲ್ ಸಿಟ್ಟಾಗಲು ಸಕಾರಣವೊಂದಿದೆ. ಅದೇನಪ್ಪಾ ಅಂದರೆ.. ಇದೇ ಕೋಮಲ್ ಜೊತೆ ನಟಿಸಲು ರಾಧಿಕಾ ಪಂಡಿತ್‍ಗೆ ಅಶೋಕ್ ಕಶ್ಯಪ್ ಹಿಂದೊಮ್ಮೆ ಕೇಳಿಕೊಂಡಿದ್ದರು. 'ಚಮಕಾಯ್ಸಿ ಚಿಂದಿ ಉಡಾಯಿಸಿ' ಚಿತ್ರದಲ್ಲಿ ನಟಿಸುತ್ತಿರಾ ಎಂದು ಸ್ವತಃ ಕೋಮಲ್ ಕೂಡಾ ರಾಧಿಕಾ ಬಳಿ ಕೇಳಿಕೊಂಡಿದ್ದರು.

ಅಗ ರಾಧಿಕಾ ಪಂಡಿತ್ ಟಾಪ್ ನಾಯಕಿಯ ಪಟ್ಟದಲ್ಲಿ ಕೂತಿದ್ದರು. 'ಮೊಗ್ಗಿನ ಮನಸು' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ರಾಧಿಕಾ ನಟನೆ ನೋಡಿ ಚಮಕಾಯಿಸಿ ಚಿಂದಿ ಉಡಾಯಿಸಿ ಚಿತ್ರದಲ್ಲಿ ನಟಿಸುವಂತೆ ಕೋಮಲ್ ಬಳಗ ಕೇಳಿಕೊಂಡಿತ್ತು.

ಆದರೆ ರಾಧಿಕಾ ಪಂಡಿತ್ ಆಗ ಊಹೂಂ ಎಂದು ತಲೆ ಆಡಿಸಿದ್ದರಂತೆ. ಕೋಮಲ್ ಜೊತೆ ನಟಿಸಲು ತನಗೆ ಇಷ್ಟವಿಲ್ಲ ಎನ್ನುವುದನ್ನು ಮಾತಿನಲ್ಲೀ ಹೇಳದೇ, ನಾನು ಪಾತ್ರಗಳನ್ನು ಚ್ಯೂಸಿಯಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಅಡ್ಡ ಗೋಡೆಯ ಮೇಲೆ ಕ್ಯಾಂಡಲ್ ಇಟ್ಟಿದ್ದರು.

ಈಗ ಅದೇ ರಾಧಿಕಾ ಪಂಡಿತ್ ಸುಮಂತ್ ಎಂಬ ಏನೂ ಗೊತ್ತಿಲ್ಲದ, ಕೇವಲ ನಗುವನ್ನಷ್ಟೇ ಬಂಡವಾಳ ಮಾಡಿಕೊಂಡಿರುವ ಹಿರಿಯ ನಿರ್ಮಾಪಕರೊಬ್ಬರ ಮಗನ ಚಿತ್ರದಲ್ಲಿ ನಟಿಸಲು ಸಹಿ ಹಾಕಿರುವುದು ಕೋಮಲ್‍ ಸಿಟ್ಟಿಗೆ ಕಾರಣ.

ಕಾಲ್ ಶೀಟ್ ನೀಡೋದು, ಬಿಡೋದು ಅವರವರ ವಿವೇಚನೆಗೆ ಬಿಟ್ಟ ವಿಷಯವಾದರೂ ರಾಧಿಕಾ ಪಂಡಿತ್ ಇಮೇಜಿಗೆ ಧಕ್ಕೆ ಬರಬಾದು ಅನ್ನೋ ಕನ್ಸರ್ನ್ ಗಾಂಧಿನಗರದ ಗಲ್ಲಿಗಳಿಗೆ ಇದ್ದರೆ ತಪ್ಪಲ್ಲ ಬಿಡಿ..

ರಾಧಿಕಾ ಪಂಡಿತ್ ಫೋಟೋ ಗ್ಯಾಲರಿ

English summary
Komal Kumar upset with actress Radhika Pandit. She has given a call sheet Sailendra Babu to act with his son.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada