ಕನಸಿನ ರಾಣಿಯ ಕೋರಿಕೆ ಈಡೇರಿಸಿದ ಕೊರಗಜ್ಜ: ಆದಿಸ್ಥಳಕ್ಕೆ ತೆರಳಿ ಹರಕೆ ತೀರಿಸಿದ ಮಾಲಾಶ್ರೀ

ತುಳುನಾಡಿನ ದೈವ ಕೊರಗಜ್ಜನ ಶಕ್ತಿಯ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಿದೆ. ವಿವಿಧ ಕೋರಿಕೆಗಳನ್ನು ಮುಂದಿಟ್ಟುಕೊಂಡು ಕೊರಗಜ್ಜ ಮುಂದೆ ಅಸಂಖ್ಯಾತ ಮಂದಿ ಶರಣಾಗುತ್ತಿದ್ದಾರೆ. ಅದರಲ್ಲೂ ಸ್ಯಾಂಡಲ್‌ವುಡ್ ಮಂದಿ ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಡುವುದು ಹೆಚ್ಚಾಗಿ ಕಂಡು ಬರುತ್ತಿದೆ.

ಒಬ್ಬರಲ್ಲ ಒಬ್ಬ ಕನ್ನಡದ ತಾರೆಯರು ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟು ಕೋರಿಕೆ ಮುಂದಿಡುತ್ತಿದ್ದಾರೆ. ಇತ್ತೀಚೆಗೆ ಕನಸಿನ ರಾಣಿ ಮಾಲಾಶ್ರೀ ಕೂಡ ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಹರಕೆ ಮಾಡಿಕೊಂಡಿದ್ದರು. ಆದಷ್ಟು ಬೇಗ ತನ್ನ ಕೋರಿಕೆಯನ್ನು ಈಡೇರಿಸುವಂತೆ ಬೇಡಿಕೊಂಡು ಬಂದಿದ್ದರು. ಅದರಂತೆ ಕೊರಗಜ್ಜ ಮಾಲಾಶ್ರೀ ಬೇಡಿಕೆಯನ್ನು ಬಹುಬೇಗನೇ ಈಡೇರಿಸಿದ್ದಾರೆ.

Koragajja daiva fulfilled the request of the actress Malashri in within three months

ಕನಸಿನ ರಾಣಿಯ ಕೋರಿಕೆಯನ್ನು ಕೊರಗಜ್ಜ ಮೂರೇ ತಿಂಗಳ ಒಳಗೆ ಈಡೇರಿಸಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಮಾಲಾಶ್ರೀ ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಂದು ಹರಕೆ ತೀರಿಸಿದ್ದಾರೆ. ಅಲ್ಲದೆ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಶಕ್ತಿಗೆ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶರಣಾಗಿದ್ದಾರೆ. ನಟಿ ಮಾಲಾಶ್ರೀ ಜೊತೆ ಪುತ್ರಿ ಅನನ್ಯಾ ಹಾಗೂ ಪುತ್ರ ಕೂಡ ಭೇಟಿ ನೀಡಿದ್ದರು.

"ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆನು. ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು, ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತಿರುತ್ತೇನೆ" ಎಂದು ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ ಬಳಿಕ ಮಾತನಾಡಿದ ನಟಿ ಮಾಲಾಶ್ರೀ ಹೇಳಿದ್ದಾರೆ.

ಇದೇ ವೇಳೆ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್‌ನ ಟ್ರಸ್ಟಿಗಳು ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು. ಕೊರಗಜ್ಜ ದೈವದ ಶಕ್ತಿ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ನಿರಂತರವಾಗಿ ಕೊರಗಜ್ಜ ದೈವ ತನ್ನ ಶಕ್ತಿಯನ್ನು ತೋರಿಸುತ್ತಿದೆ. ಇದೀಗ ಕೊರಗಜ್ಜನ ಪವಾಡ ಕ್ಕೆ ಸ್ಯಾಂಡಲ್‌ವುಡ್‌ನ ನಟಿ ಮಾಲಾಶ್ರೀ ಕೂಡ ಶರಣಾಗಿದ್ದಾರೆ.

Koragajja daiva fulfilled the request of the actress Malashri in within three months

ಮಾಲಾಶ್ರೀ ಒಬ್ಬರೇ ಅಲ್ಲ ಈ ಹಿಂದೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪತ್ನಿ ಗೀತಾ ಹಾಗೂ ಕುಟುಂಬ ಸಮೇತ ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ್ದರು. ಹಾಗೇ ರಕ್ಷಿತಾ ಪ್ರೇಮ್ ಬೇಡಿಕೆ ಈಡೇರಿದ್ದಕ್ಕೆ ಬಂದು ಹರಕೆ ತೀರಿಸಿ ಕೊರಗಜ್ಜನ ಮಹಿಮೆಯನ್ನು ಹೊಗಳಿಕೊಂಡಾಡಿದ್ದರು. ಕೆಲವು ತಿಂಗಳ ಹಿಂದಷ್ಟೇ ನಟಿ ಪ್ರೇಮ ಇದೇ ಸ್ಥಳಕ್ಕೆ ಭೇಟಿ ನೀಡಿ ಕೋರಿಕೆ ಸಲ್ಲಿಸಿದ್ದರು.

ಕೊರಗಜ್ಜನ ಮಹಿಮೆಯನ್ನು ಜಗತ್ತಿಗೆ ತಿಳಿಸಲೆಂದೇ ಸ್ಯಾಂಡಲ್‌ವುಡ್‌ನ ನಿರ್ದೇಶಕ ಸುಧೀರ್ ಅತ್ತಾವರ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Koragajja daiva fulfilled kannada actress Malashri request
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X