'ಕೊರಗಜ್ಜ' ಸಿನಿಮಾದಲ್ಲಿ ಗುಳಿಗ ದೈವಗೆ ಅಪಪ್ರಚಾರ;ಜ್ಯೋತಿಷ್ಯದ ಮೊರೆ ಹೋದ ನಿರ್ದೇಶಕರಿಗೆ ಗೊತ್ತಾದ ಸತ್ಯವೇನು?
'ಕಾಂತಾರ ಚಾಪ್ಟರ್ 1' ಬಳಿಕ ಮತ್ತೊಂದು ತುಳುನಾಡಿನ ದೈವ ಬಗ್ಗೆ ಇನ್ನೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ ಸುಧೀರ್ ಅತ್ತಾವರ್ ನಿರ್ದೇಶಿಸಿದ 'ಕೊರಗಜ್ಜ'. ಇತ್ತೀಚೆಗಷ್ಟೇ ಸಿನಿಮಾ ತಂಡ ಪ್ರಚಾರವನ್ನು ಆರಂಭಿಸಿದೆ. 'ಕಾಂತಾರ' ಮೆಗಾ ಹಿಟ್ ಆಗಿದ್ದರಿಂದ 'ಕೊರಗಜ್ಜ' ಸಿನಿಮಾದ ಬಳಿಕ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಇತ್ತೀಚೆಗಷ್ಟೇ ಈ ಸಿನಿಮಾದ "ಗುಳಿಗ.. ಗುಳಿಗ" ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು. ತುಳುನಾಡಿನ ಮತ್ತೊಂದು ದೈವದ ಕುರಿತಾದ ಈ ಹಾಡಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಎದುರು ನೋಡುತ್ತಿದ್ದ ಪ್ರೇಕ್ಷಕರಿಗೆ "ಗುಳಿಗ.. ಗುಳಿಗ" ಇಷ್ಟ ಆಗಿತ್ತು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನೆಗೆಟಿವ್ ಕಮೆಂಟ್‌ಗಳನ್ನು ಮಾಡಿದ್ದಾರೆ.

ಹೀಗಾಗಿ ನಿರ್ದೇಶಕ ಸುಧೀರ್ ಅತ್ತಾವರ್ "ಗುಳಿಗ" ದೈವಗೆ ಅಪಪ್ರಚಾರ ಆಗಿದೆಯಾ? ಎಂಬ ಅನುಮಾನದಿಂದ ಜ್ಯೋತಿಷ್ಯದ ಮೊರೆ ಹೋಗಿದ್ದರು. ಹೀಗೆ ಕೇರಳದ ಸುಪ್ರಸಿದ್ಧ ಜ್ಯೋತಿಷಿಯ ಮೊರೆ ಹೋಗಿದ್ದ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಅಲ್ಲಿ ಸಿಕ್ಕಿದ ಉತ್ತರವೇನು? ಗುಳಿಗ ದೈವಗೆ ಚಿತ್ರ ಅಪಮಾನ ಮಾಡಿದೆಯೇ? ಇಲ್ಲ ಖುಷಿ ಪಡಿಸಿದೆಯೇ? ತಿಳಿಯುವುದಕ್ಕೆ ಮುಂದೆ ಓದಿ.
'ಕೊರಗಜ್ಜ' ಸಿನಿಮಾದ "ಗುಳಿಗ.. ಗುಳಿಗ.. ಘೋರಾ ಗುಳಿಗ" ಎಂಬ ಹಾಡನ್ನು ಬಾಲಿವುಡ್ ಗಾಯಕ ಜಾವೆದ್ ಅಲಿ ಹಾಗೂ ಸ್ವತ: ಸುಧೀರ್ ಅತ್ತಾವರ್ ಹಾಡಿದ್ದಾರೆ. ಮಲಯಾಳಂನ ಜನಪ್ರಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಸಿನಿಮಾ ಮ್ಯೂಸಿಕ್ ಕೊಟ್ಟಿದ್ದಾರೆ. ಈ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೊಂದು ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದರಿಂದ ಭಯಂಕರ ಉಗ್ರ ರೂಪದ ಕಾರಣಿಕದ "ಗುಳಿಗದೈವ" ಈ ಹಾಡಿನಿಂದ ಕ್ರೋಧ ಗೊಂಡಿರಬಹುದೇ ಅಥವ ದೈವಕ್ಕೆ ಅಪಚಾರಾಗಿರಬಹುದೇ ಎಂಬ ಎಂಬ ಸಂಶಯ ನಿರ್ದೇಶಕರನ್ನು ಕಾಡುತ್ತಿತ್ತು.
ಈ ಕಾರಣಕ್ಕಾಗಿ ನಿರ್ದೇಶಕ ಸುಧೀರ್ ಅತ್ತಾವರ್ ಕೇರಳದ ತ್ರಿಶೂರ್‌ನಲ್ಲಿರುವ ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷ್ಯ ವಿಧ್ವಾನ್ ವರುಣ್ ಭಟ್ ಅವರ ಬಳಿ ಪ್ರಶ್ನೆ ಇಟ್ಟು ಕೇಳಿಸಿದ್ದಾರೆ. ಈ ವೇಳೆ ಅವರು ಚಿಂತನ-ಮಂತನ ನಡೆಸಿ, ವೈಶ್ಚಿಕ ರಾಶಿ, ಒಂಭತ್ತರಲ್ಲಿ ಗುರು, ಐದರಲ್ಲಿ ಗುಳಿಗ, ಶನಿ ಎಲ್ಲಾ ಇರುವುದರಿಂದ ಗುಳಿಗನಿಗೆ ಸಂಪೂರ್ಣ ತೃಪ್ತಿ ಹಾಗೂ ಸಂತೋಷ ಆಗಿದೆ. 'ಕೊರಗಜ್ಜ'ನಿಗೂ ಈ ಹಾಡಿನ ಬಗ್ಗೆ ಸಂತೋಷವಿದೆ. ಇಷ್ಟೇ ಅಲ್ಲದೆ ದೇವರ ಆಶಿರ್ವಾದವೂ ಇದೆಯೆಂದು ಹೇಳಿದ್ದಾರೆ.

ಜ್ಯೋತಿಷ್ಯದ ಮೂಲಕ ಪ್ರಶ್ನೆ ಕೇಳಿಸಿದಾಗ ಗುಳಿಗನಿಗೆ ತೃಪ್ತಿ ಇರುವ ವಿಚಾರ ಕೇಳಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಸಕ್ಸಸ್ ಫಿಲ್ಮ್ಸ್ ನ ವಿದ್ಯಾಧರ್ ಶೆಟ್ಟಿ ಖುಷಿಯಾಗಿದ್ದಾರೆ. ಜನರು ಅನಗತ್ಯವಾದ ಕೆಟ್ಟ ಕಮೆಂಟ್ ಹಾಕಿ ಕಿರಿ ಕಿರಿ ಮಾಡದೆ, ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ , ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಕೊರಗಜ್ಜ' ಸಿನಿಮಾ ಜನವರಿ ತಿಂಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆಯೆಂದು ಚಿತ್ರತಂಡ ಹೇಳಿದೆ.


Click it and Unblock the Notifications











