'ಕೊರಗಜ್ಜ' ಸಿನಿಮಾ 2ನೇ ಹಾಡು ಹೇಗಿದೆ? ಶ್ರೇಯಾ ಘೋಷಾಲ್-ಅರ್ಮಾನ್ ಮಲಿಕ್ ಹಾಡಿನ ಸಂಪೂರ್ಣ ಸಾಹಿತ್ಯ ಇಲ್ಲಿದೆ.

ಕರಾವಳಿ ಭಾಗದ ದೈವದ ಕಥೆ ಈಗ ಇಡೀ ಭಾರತಕ್ಕೆ ಪರಿಚಯವಾಗಿದೆ. 'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1' ಎರಡೂ ಸಿನಿಮಾಗಳು ಇಂತಹದ್ದೊಂದು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಈ ಎರಡು ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದಂತೆ ಮತ್ತೊಂದು ದೈವದ ಕುರಿತಾದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಕೊರಗಜ್ಜ'.

ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ನಿರ್ಮಿಸುತ್ತಿರುವ 'ಕೊರಗಜ್ಜ' ಸಿನಿಮಾ ಮೊದಲ ಹಾಡು "ಗುಳಿಗಾ..ಗುಳಿಗಾ.." ಹಾಡು ದೇಶಾದ್ಯಂತ ಭಕ್ತಿಯ ಅಲೆಯನ್ನು ಎಬ್ಬಿಸಿತ್ತು. ಈ ಹಾಡು ಚರ್ಚೆಯಾಗುತ್ತಿದ್ದಂತೆ, 2ನೇ ಹಾಡು ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ಹಾಡನ್ನು ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿದ್ದಾರೆ.

Koragajja Kannada movie 2nd song Gaali Gandha sung by Shreya Ghoshal and Armaan Malik Lyrics goes like this

'ಕೊರಗಜ್ಜ' ಸಿನಿಮಾದ 2ನೇ ಹಾಡು ಜೀ ಮ್ಯೂಸಿಕ್‌ನಲ್ಲಿ ರಿಲೀಸ್ ಆಗಲಿದ್ದು. "ರಿಚ್ ಪೊಯೆಟಿಕ್" ಸಾಲುಗಳಿವೆ ಎಂದು ಹಾಡಿನ ಇಡೀ ಸಾಹಿತ್ಯವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಹಾಗೂ ಈ ಸಿನಿಮಾ ನಿರ್ದೇಶಕ ಸುಧೀರ್ ಅತ್ತಾವರ್ ಬರೆದ ಈ ಹಾಡಿನ ಕಾವ್ಯಮಯ ಸಾಹಿತ್ಯವನ್ನು 'ಕೊರಗಜ್ಜ' ತಂಡ ರಿಲೀಸ್ ಮಾಡಿದೆ. ಆ ಹಾಡಿನ ಸಾಲುಗಳು ಹೀಗಿವೆ.

ಇಲ್ಲಿದೆ ಈ ಅಪರೂಪದ ಸಾಹಿತ್ಯ...

(ಶ್ರೇಯಾ ಘೋಷಾಲ್)
ಗಾಳಿ ಗಂಧ... ತೀಡಿ ತಂದಾ...
ಶಬ್ದವಿರದ ಮಾತೂ... !
(ಅರ್ಮಾನ್ ಮಲಿಕ್):
ಕೇಳಿದಂತಾ....
ಜೋಡಿಯಿಂದಾ.....
ಮುಗ್ಧ ವಿರಹ ಹಾಡೂ....!!

ಗಾಳಿ ಗಂಧ.. ತೀಡಿ ತಂದಾ..
ಶಬ್ದವಿರದ ಮಾತೂ..

(ಶ್ರೇಯಾ ಘೋಷಲ್ )
ಮೂಗುದಾಣ ಹಾಕಲೇನು ಪ್ರೀತಿ..
ಸಾಕು ಗಿಣಿಯೇ..?
ಮೂರು ದಾರ ಕಟ್ಟಿ ನಾನು ಬಂಧಿ..
ಸಾಕು ಪ್ರಿಯನೇ.....!

(ಅರ್ಮಾನ್ ಮಲಿಕ್):
ಕಾಡಿಬಂದ ನಿನ್ನ ನೆನಪು..
ಕಾಡಿನಲ್ಲೆ ಸೆಳೆಯಿತೂ..!

(ಶ್ರೇಯಾ ಘೋಷಾಲ್)
ಹೇಳದಂತ ನನ್ನ ಮಾತು..
ಮಾಧುರ್ಯ ತುಂಬಿದಿಂಚರಾ..

ದಾಟಿ ಬಂದ‌ ಮೌನ ಕಲಹ..!
ಧಾಟಿಯಾಯ್ತು ಕಾವ್ಯಕೇ..!

(ಅರ್ಮಾನ್ ಮಲಿಕ್):
ತಾಳದಂತ ನನ್ನ ಪುಳಕ..
ಮಾರ್ಧನಿಸಿ ನಿಶಾಚರಾ..!

(ಶ್ರೇಯಾ ಘೋಷಾಲ್ )
IIಮೂಗು ದಾಣII

(ಅರ್ಮಾನ್ ಮಲಿಕ್):
ಮೌನ ಬೇಲಿ ಹಾರಿಬಂದಾ
ಮೋಹದಲ್ಲಿ ಸದ್ದೇ..!?

(ಶ್ರೇಯಾ ಘೋಷಾಲ್)
ಮೌನ ಬೇಲಿ ಹಾರಿಬಂದಾ
ಮೋಹದಲ್ಲಿ ಸದ್ದೇ..!?

Koragajja Kannada movie 2nd song Gaali Gandha sung by Shreya Ghoshal and Armaan Malik Lyrics goes like this

(ಕೋರಸ್)
ತಾರೆ ತಂತೀಗ ತಂತೀ..
ತಾಳ ಮೇಳಾ.. ತಂಪೂ ನಾದಾ..
ಬಾರೆ ಬಂತೀಗ ಬಂತೀ..
ಢಾಳ ಡೋಲೀ..
ಡೌಲು ಡೋಲೂ..
ಸೇರೆ ಸೇವಂತಿ ಸೋನೇ.. ಮಳೆಯಲ್ಲೀ..

(ಶ್ರೇಯ ಘೋಷಾಲ್)
IIಮೂಗು ದಾಣII

(ಅರ್ಮಾನ್ ಮಲಿಕ್):
ಲಜ್ಜೆ ಸದ್ದು ಕಾನನಕ್ಕೂ..
ಮತ್ತು ತಂತು ತುಸುನಕ್ಕೂ..!
ಕತ್ತಲನ್ನು ಹೊದ್ದು ಮಲಗಿ..
ಕಾಡು ಕೂಡ ಕನಲಿತೂ..!!

(ಶ್ರೇಯಾ ಘೋಷಾಲ್ )
ಹೆಜ್ಜೆ ಕದ್ದ ಕಾಜಣವೂ...
ಗೆಜ್ಜೆ ಕಟ್ಟಿತು ಹಾಡುತಾ...!
ಮುಗ್ಧ ಪ್ರೀತಿ ಕಂಡು ಹೇಳಿತು..
ಕೆಂಪಾಗದಿರು ಕಾದಂಬಿನಿಯೇ....!!

(ಶ್ರೇಯಾ ಘೋಷಾಲ್)
IIಮೂಗು ದಾಣII

(ಅರ್ಮಾನ್ ಮಲಿಕ್)
ಜೌಗು ಮನದ ಜಾರೋ ಕನಸು....
ಮೈಯ ಬಿಸಿಗೆ.....ಒದ್ದೇ.....!

(ಶ್ರೇಯಾ ಘೋಷಾಲ್)
ಜೌಗು ಮನದ ಜಾರೋ ಕನಸು....
ಮೈಯ ಬಿಸಿಗೆ.....ಒದ್ದೇ.....!

(ಕೋರಸ್)
IIತಾರೆ ತಂತೀಗ ತಂತೀ...II

'ಕೊರಗಜ್ಜ' ಸಿನಿಮಾದ ಈ ಅದ್ಭುತ ಸಾಲುಗಳಿಗೆ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ರಾಗ ಟ್ಯೂನ್ ಹಾಕಿದ್ದಾರೆ. ಕೊರಗಜ್ಜ ಸಿನಿಮಾ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. 'ಕಾಂತಾರ' ಸಿಕ್ಕಂತಹ ಯಶಸ್ಸು ಈ ಸಿನಿಮಾಗೂ ಸಿಗುತ್ತಾ? 'ಕೊರಗಜ್ಜ'ನಿಂದ ಚಿತ್ರತಂಡಕ್ಕೆ ಆಶೀರ್ವಾದ ಸಿಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Koragajja Kannada movie 2nd song Gaali Gandha sung by Shreya Ghoshal and Armaan Malik Lyrics goes like this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X