ಡಿಕೆ ಶಿವಕುಮಾರ್-ರವಿಚಂದ್ರನ್ ಓದಿದ ಸ್ಕೂಲ್ ಒಂದೇ: 3 ಬಾರಿ 'ಪ್ರೇಮಲೋಕ' ವೀಕ್ಷಿಸಿದ್ದ ಡಿಕೆಶಿ!

ಚುನಾವಣೆ ಹತ್ತಿರ ಬರುತ್ತಿದೆ. ರಾಜಕೀಯ ಮುಖಂಡರು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಒತ್ತಡದ ಸಂದರ್ಭದಲ್ಲೂ ಡಿಕೆ ಶಿವಕುಮಾರ್ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.

ಪವನ್ ಒಡೆಯರ್ ನಿರ್ದೇಶಿಸಿ, ಇಶಾನ್ ನಟಿಸಿದ ಸಿನಿಮಾ 'ರೇಮೊ' ಪ್ರಿ-ರಿಲೀಸ್ ಇವೆಂಟ್ ಇಂದು (ನವೆಂಬರ್ 20) ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಅವರಿಗೂ ಆಹ್ವಾನ ನೀಡಲಾಗಿತ್ತು. ಈ ವೇಳೆ ಚಿತ್ರರಂಗದ ಜೊತೆಗಿನ ತಮ್ಮ ನಂಟನ್ನು ನೆನಪಿಸಿಕೊಂಡಿದ್ದಾರೆ.

ಇದೇ ವೇಳೆ 'ಪ್ರೇಮಲೋಕ' ಸಿನಿಮಾ ವೀಕ್ಷಿಸಿದ್ದು, ಟೂರಿಂಗ್ ಟಾಕೀಸ್ ಮಾಡಿದ್ದು, ಮುಂದೆ ಥಿಯೇಟರ್‌ಗಳನ್ನು ನಿರ್ಮಿಸುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆ ವಿಷಯಗಳನ್ನು ಹಂಚಿಕೊಂಡಿದ್ದಾರೆ.

'ನಾನು-ರವಿಚಂದ್ರನ್ ಬಾಲ್ಯದ ಸ್ನೇಹಿತರು'

'ನಾನು-ರವಿಚಂದ್ರನ್ ಬಾಲ್ಯದ ಸ್ನೇಹಿತರು'

'ರೇಮೊ' ಸ್ಯಾಂಡಲ್‌ವುಡ್‌ನ ಮ್ಯೂಸಿಕಲ್ ಸಿನಿಮಾ. ಪವನ್ ಒಡೆಯರ್, ಆಶಿಕಾ ರಂಗನಾಥ್ ಹಾಗೂ ಇಶಾನ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಸಿನಿಮಾವಿದು. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಪ್ರಿ-ರಿಲೀಸ್ ಇವೆಂಟ್‌ ಅನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಡಿಕೆ ಶಿವಕುಮಾರ್ ತಮ್ಮ ಹಾಗೂ ಕ್ರೇಜಿಸ್ಟಾರ್ ನಡುವಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. "ನಾನು ಹಾಗೂ ರವಿಚಂದ್ರನ್ ಬಾಲ್ಯದ ಸ್ನೇಹಿತರು. ನಾವಿಬ್ಬರೂ ಇಬ್ಬರೂ ಒಂದೇ ಸ್ಕೂಲ್‌ನಲ್ಲಿ ಓದಿದವರು." ಎಂದು ವೇದಿಕೆ ಮೇಲೆ ಅನೌನ್ಸ್ ಮಾಡುತ್ತಿದ್ದಂತೆ ಎಲ್ಲರ ಮುಖದಲ್ಲಿ ಅಚ್ಚರಿ ಕಾದಿತ್ತು.

'ರೇಮೊ'ನಾ 'ಪ್ರೇಮಲೋಕ'ಕ್ಕೆ ಹೋಲಿಸಿದ ಡಿಕೆಶಿ

'ರೇಮೊ'ನಾ 'ಪ್ರೇಮಲೋಕ'ಕ್ಕೆ ಹೋಲಿಸಿದ ಡಿಕೆಶಿ

ಡಿಕೆ ಶಿವಕುಮಾರ್ ಹಾಗೂ ನೆರೆದಿದ್ದ ಗಣ್ಯರ ಮುಂದೆ 'ರೇಮೊ' ತುಣುಕುಗಳನ್ನು ಪ್ರದರ್ಶನ ಮಾಡಲಾಗಿತ್ತು. 'ರೇಮೊ' ನೋಡಿದ ಬಳಿಕ 'ಪ್ರೇಮಲೋಕ' ಸಿನಿಮಾ ನೋಡಿದಂತೆ ಆಗುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. "ರೇಮೊ ನೋಡಿದ ಕೂಡಲೇ ಪ್ರೇಮಲೋಕ ನೆನಪಾಗುತ್ತಿದೆ. ನಾನು ಪ್ರೇಮಲೋಕವನ್ನು ಮೂರು-ನಾಲ್ಕು ಬಾರಿ ನೋಡಿದ್ದೇನೆ. ಕಪಾಲಿ ಥಿಯೇಟರ್‌ಗೆ ಹೋಗಿ ಸಿನಿಮಾವನ್ನು ನೋಡುತ್ತಿದ್ದೆ." ಎಂದು ಹಿಂದಿನದ್ದನ್ನು ನೆನಪಿಸಿಕೊಂಡಿದ್ದಾರೆ.

'20 ಹೆಚ್ಚು ಥಿಯೇಟರ್ ಓಪನ್ ಮಾಡಲಿರೋ ಡಿಕೆಶಿ'

'20 ಹೆಚ್ಚು ಥಿಯೇಟರ್ ಓಪನ್ ಮಾಡಲಿರೋ ಡಿಕೆಶಿ'

"ಈಗ ರವಿಚಂದ್ರನ್ ಕೇಳುತ್ತಿದ್ದ ಯಾವಾಗ ನಿನ್ನ ಥಿಯೇಟರ್‌ ಓಪನ್ ಅಂತ. ಮುಂದಿನ ತಿಂಗಳು ಅಂತ ಹೇಳಿದ್ದೇನೆ. ಮುಂದಿನ ತಿಂಗಳು ಗ್ಲೋಬಲ್ ಮಾಲ್‌ನಲ್ಲಿ ಥಿಯೇಟರ್‌ಗಳು ಪ್ರಾರಂಭ ಆಗುತ್ತಿದೆ. ಮೈಸೂರು ರಸ್ತೆಯ ಡಿವಿನಿಟಿಯಲ್ಲಿ 7 ಥಿಯೇಟರ್ ಓಪನ್ ಆಗುತ್ತಿದೆ. ಹಾಗೇ ಸೋರ್ಸ್ ಬಿಜ್ 4 ಸೇರಿಕೊಳ್ಳುತ್ತಿದೆ. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಅಂದ್ರೆ, ನಾನು ಮೊದಲು ಒಬ್ಬ ಪ್ರದರ್ಶಕ. ನಾನು ಫಿಲ್ಮ್ ಚೇಂಬರ್‌ನಲ್ಲಿ ಡೈರೆಕ್ಟರ್ ಆಗಿದ್ದವನು. ಎಂಎಲ್‌ಎಗಿಂತ ಮುಂಚೆ ಇದು. ಎಂಎಲ್‌ಎ ಆದ್ಮೇಲೆ ಇದನ್ನೆಲ್ಲ ಬಿಟ್ಟು ಬಿಟ್ಟೆ. ನಾನು ಬಿಟ್ಟರೂ, ಚಿತ್ರರಂಗ ಬಿಡುತ್ತಿಲ್ಲ ಅನ್ನೋದಕ್ಕೆ ಇವತ್ತಿನ ಕಾರ್ಯಕ್ರಮವೇ ಸಾಕ್ಷಿ." ಎಂದು ಮುಂದೆ ಓಪನ್ ಆಗಲಿರೋ ಸುಮಾರು 20ಕ್ಕೂ ಹೆಚ್ಚು ಥಿಯೇಟರ್‌ ಬಗ್ಗೆ ಮಾಹಿತಿ ನೀಡಿದ್ದಾರೆ.

'ನಾನು 5 ಟೂರಿಂಗ್ ಟಾಕೀಸ್ ಇಟ್ಟಿದ್ದೆ'

'ನಾನು 5 ಟೂರಿಂಗ್ ಟಾಕೀಸ್ ಇಟ್ಟಿದ್ದೆ'

"ಇತ್ತೀಚೆಗಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ರಾಷ್ಟ್ರದ ಗಮನವನ್ನು ಸೆಳೆಯುತ್ತಿದೆ. ನಾನು ಐದು ಟೂರಿಂಗ್ ಟಾಕೀಸ್ ಇಟ್ಟಿದ್ದೆ. ನಾನೇ ಸಿನಿಮಾವನ್ನು ನೋಡುತ್ತಿದ್ದೆ. ಆ ಮೇಲೆ ನನ್ನ ತಮ್ಮ ನೋಡಲು ಶುರು ಮಾಡಿದ. ನಮ್ಮ ಅಪ್ಪ ನೋಡಲು ಶುರು ಮಾಡಿದರು. ನಾನು ಸಿನಿಮಾ ಡಬ್ಬವನ್ನು ಬಸ್ ಮೇಲೆ ಹಾಕಿ ಊರಿಗೆ ಕಳುಹಿಸುತ್ತಿದ್ದಂತಹ ಕಾಲ. ಈಗ ಅವೆಲ್ಲ ಇಲ್ಲ. ದುಡ್ಡು ಕಟ್ಟಿದರೆ ನಮ್ಮ ಮನೆ ಸ್ಕ್ರೀನ್‌ನಲ್ಲೇ ನೋಡವಂತಹ ಕಾಲ. " ಎಂದು ರಾಜಕೀಯ ಬಿಟ್ಟು ಸಿನಿಮಾ ಬಗ್ಗೆ ಮಾತಾಡಿದ್ದಾರೆ.

More from Filmibeat

English summary
KPCC President DK Shivakumar Says He And Ravichandran are School Mates, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X