Kranti first look: ತಾಯಿ ನುಡಿ ಕಲಿಸಿದ ಕನ್ನಡ ತಾಯಿಗೆ ಚಿರಋಣಿ ಎಂದ ದರ್ಶನ್: ಫಸ್ಟ್ ಲುಕ್ ಟೀಸರ್‌ನಲ್ಲಿ ಅಕ್ಷರ 'ಕ್ರಾಂತಿ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಇಂದು (ಫೆ.16) ಹಬ್ಬ. ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ಕಳೆದ ಎರಡು ವರ್ಷಗಳಿಂದ ನಿರಾಸೆಯಾಗುತ್ತಿದೆ. ಕೊರೊನಾ ಕಾರಣದಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ದರ್ಶನ್ ನಿರ್ಧರಿಸಿದ್ದರು. ಈ ಬಾರಿಗೆ ಕೂಡ ಅಪ್ಪು ನಿಧನದ ಹಿನ್ನೆಲೆ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಆಗದೆ ಇರಲಿ ಎಂದು 'ಕ್ರಾಂತಿ' ತಂಡ ಫಸ್ಟ್ ಲುಕ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ಕಾತುರದಿಂದ ಕಾಯುತ್ತಿರುವ ಸಿನಿಮಾ 'ಕ್ರಾಂತಿ'. ಸಮಾಜಕ್ಕೆ ಸಂದೇಶ ಸಾರುವ ಕತೆನೂ ಇರಬೇಕು. ಮಾಸ್ ಸಿನಿಮಾ ಇಷ್ಟ ಪಡುವ ಪ್ರೇಕ್ಷಕರಿಗೆ ಮಾಸ್ ಕಥೆ ಕೂಡ ಇರಬೇಕು. ಅಂತಹದ್ದೊಂದು ಕಥೆಯೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಮಾಡಲು ಹೊರಟಿದ್ದಾರೆ. ದರ್ಶನ್ ಹುಟ್ಟುಹಬ್ಬದ ದಿನದಂದೇ 'ಕ್ರಾಂತಿ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ದರ್ಶನ್ ಮಾಸ್ ಲುಕ್, ಡೈಲಾಗ್ ಡಿಲೇವರಿ ಕಂಡು ಹೆಚ್ಚೆದ್ದು ಕುಣಿಯುತ್ತಿದ್ದಾರೆ.

ಕನ್ನಡ ತಾಯಿಗೆ ಚಿರಋಣಿ ಎಂದ ದರ್ಶನ್

ಕನ್ನಡ ತಾಯಿಗೆ ಚಿರಋಣಿ ಎಂದ ದರ್ಶನ್

"ನನ್ನ ಶಾಲೆ. ಅಕ್ಷರ ಎದೆಗೆ ಬಿತ್ತಿದ ಶಾಲೆ. ಪ್ರಜ್ಞೆಯ ತಲೆಗೆ ನೂಕಿದ ಶಾಲೆ. ಬದುಕುವ ದಾರಿ ತೋರಿದ ಶಾಲೆ. ಎಲ್ಲರನ್ನೂ ಪ್ರೀತಿಸುವುದ ಕಲಿಸಿದ ಶಾಲೆ. ತಾಯಿ ನುಡಿ ದೇವ ನುಡಿ ಎಂದ ಶಾಲೆ. ಈ ತಾಯಿಗೆ ನನ್ನ ಕನ್ನಡ ತಾಯಿಗೆ, ನಾನು ಚಿರಋಣಿ." ಎಂದು ಫಸ್ಟ್ ಲುಕ್ ಟೀಸರ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈಲಾಗ್ ಹೊಡೆದಿದ್ದಾರೆ. ಫಸ್ಟ್ ಲುಕ್‌ ಪೋಸ್ಟರ್‌ ರಿವೀಲ್ ಮಾಡಿದಾಗ ಹುಟ್ಟಿದ್ದ ಅನುಮಾನಗಳೆಲ್ಲವೂ ಚಿಕ್ಕ ಟೀಸರ್‌ನಿಂದ ರಿವೀಲ್ ಆಗಿದೆ.

'ಕ್ರಾಂತಿ' ಯಲ್ಲಿ ದರ್ಶನ್ ಮಾಸ್ ಲುಕ್

'ಕ್ರಾಂತಿ' ಯಲ್ಲಿ ದರ್ಶನ್ ಮಾಸ್ ಲುಕ್

ದರ್ಶನ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ರೀತಿ ಬದಲಾಗಿದೆ. ದರ್ಶನ್ ಇಮೇಜಿಗೆ ತಕ್ಕಂತ ಕಥೆ ಇರಬೇಕು. ಸಮಾಜಕ್ಕೆ ಒಂದು ಸಂದೇಶ ಇರಬೇಕು. ಹಾಗಂತ ಮಾಸ್ ಪ್ರಿಯರನ್ನು ನಿರಾಸೆನೂ ಮಾಡಬಾರದು. 'ಕ್ರಾಂತಿ' ಚಿತ್ರದ ಫಸ್ಟ್ ಲುಕ್ ಟೀಸರ್ ನೋಡಿದರೆ ದರ್ಶನ್ ಆಲೋಚನೆ ಏನು ಅನ್ನುವುದು ಗೊತ್ತಾಗುತ್ತೆ. 'ಕ್ರಾಂತಿ' ಟೀಸರ್‌ ಕೊನೆಯಲ್ಲಿ ಬರುವ ಒಂದು ಮಾಸ್ ಆಕ್ಷನ್ ಝಲಕ್ ದರ್ಶನ್ ಫ್ಯಾನ್ಸ್‌ಗೆ ಕಿಕ್ ಕೊಡುವುದರಲ್ಲಿ ಅನುಮಾನವೇ ಇಲ್ಲ. ಬೈಕ್ ಹಿಡಿದು ನಡೆದು ಬರುವ ದೃಶ್ಯ ಮಾಸ್ ಪ್ರಿಯರಿಗಾಗಿಯೇ ಇಟ್ಟಂತಿದೆ.

ಅಡುಗೆ ಎಣ್ಣೆ ಕ್ರಾಂತಿ ಬಳಿಕ 'ಅಕ್ಷರ' ಕ್ರಾಂತಿ

ಅಡುಗೆ ಎಣ್ಣೆ ಕ್ರಾಂತಿ ಬಳಿಕ 'ಅಕ್ಷರ' ಕ್ರಾಂತಿ

'ಕ್ರಾಂತಿ' ಸಿನಿಮಾ ನಿರ್ಮಿಸುತ್ತಿರುವ ತಂಡವೇ 'ಯಜಮಾನ' ಚಿತ್ರವನ್ನು ನಿರ್ಮಿಸಿತ್ತು. 'ಯಜಮಾನ' ಸ್ವಾವಲಂಬಿಯ ವ್ಯಕ್ತಿಯ ಹಿನ್ನೆಲೆ ಇಟ್ಕೊಂಡು ಅಡುಗೆ ಎಣ್ಣೆ 'ಕ್ರಾಂತಿ' ಕಥೆ ಹೆಣೆಯಲಾಗಿತ್ತು. ಈ ಬಾರಿ ದರ್ಶನ್ 'ಅಕ್ಷರ' ಕ್ರಾಂತಿ ಮಾಡಲು ಹೊರಟಿದ್ದಾರೆ. ಫಸ್ಟ್ ಲುಕ್ ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಅಕ್ಷರದ 'ಕ್ರಾಂತಿ' ಆಗಲಿದೆ ಎಂದು ಊಹಿಸಬಹುದು. ಟೀಸರ್‌ನಲ್ಲಿ ದರ್ಶನ್ ತಾಯ್ನುಡಿ ಕಲಿಸಿದ ಕನ್ನಡ ತಾಯಿಗೆ ಚಿರಋಣಿ ಎಂದು ಹೇಳಿದ್ದಾರೆ. ಹೀಗಾಗಿ ಕನ್ನಡದ 'ಕ್ರಾಂತಿ' ಆಗಬಹುದೆಂದು ನಿರೀಕ್ಷೆ ಮಾಡಬಹುದು.

'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ

'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ

'ಕ್ರಾಂತಿ' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು ಡಿ ಬಾಸ್ ಅಭಿಮಾನಿಗೆ ಖುಷಿಕೊಟ್ಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ 'ಕ್ರಾಂತಿ' ಫಸ್ಟ್ ಲುಕ್ ಟೀಶರ್ ಸ್ಪೆಷಲ್ ಗಿಫ್ಟ್ ಇದ್ದಂತೆ. ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಹಳ ದಿನಗಳ ಬಳಿಕ ನಟಿಸುತ್ತಿದ್ದಾರೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ಇಬ್ಬರೂ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Kranti Movie First look from unveiled on Challenging Star Darshan birthday. It is special gift for Darshan birthday. Music Director V Harikrishna directing Kranti Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X