ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಭೇಟಿ ಮಾಡಿದ 'ಪುಷ್ಪವತಿ' ನಿಮಿಕಾ ರತ್ನಾಕರ್; ಯಾಕೆ? ಎಲ್ಲಿ?
ಕ್ರಿಕೆಟರ್‌ಗಳಿಗೂ ಸಿನಿಮಾ ತಾರೆಯರಿಗೂ ನಂಟು ಇದ್ದೇ ಇರುತ್ತೆ. ಕ್ರಿಕೆಟರ್‌ಗಳ ಮನೆಯ ಸಮಾರಂಭಗಳಲ್ಲಿ ಸಿನಿಮಾ ತಾರೆಯರು, ಇಲ್ಲಾ ಸಿನಿಮಾ ತಾರೆಯರ ಸಮಾರಂಭದಲ್ಲಿ ಕ್ರಿಕೆಟರ್‌ಗಳು ಕಾಣಿಸಿಕೊಳ್ಳುವುದು ಕಾಮನ್. ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳಿಗೆ ಇದು ಆಗಾಗ ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಇಲ್ಲವೇ ಕ್ರಿಕೆಟ್ ಪಂದ್ಯಗಳಿಗೆ, ಟೀಮ್‌ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿರುತ್ತಾರೆ.
ಕ್ರಿಕೆಟರ್‌ಗಳ ಜೊತೆ ಬಾಲಿವುಡ್ ತಾರೆಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಐಪಿಎಲ್ ಬಳಿಕ ಕನ್ನಡದ ತಾರೆಯರು ಕ್ರಿಕೆಟ್ ಜಗತ್ತಿಗೆ ಮಿಂಚುತ್ತಿದ್ದಾರೆ. ಭಾರತೀಯ ಕ್ರಿಕೆಟರ್‌ಗಳ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಇಂತಹ ಸಾಕಷ್ಟು ಉದಾಹರಣೆಗಳು ಇತ್ತೀಚೆಗೆ ನೋಡುವುದಕ್ಕೆ ಸಿಕ್ಕಿದೆ. ಈಗ ಭಾರತದ ಮತ್ತೊಬ್ಬ ಕ್ರಿಕೆಟ್ ಆಟಗಾರ ಪೃಥ್ವಿ ಶಾ ನಿಶ್ವಿತಾರ್ಥದಲ್ಲಿ ಕನ್ನಡದ ನಟಿ ನಿಮಿಕಾ ರತ್ನಾಕರ್ ಭಾಗಿಯಾಗಿದ್ದಾರೆ.

ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ಪೃಥ್ವಿ ಶಾ ಇತ್ತೀಚೆಗೆ ನಿಶ್ಛಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ನಿಮಿಕಾ ರತ್ನಾಕರ್ ಕುಟುಂಬ ಸಮೇತರಾಗಿ ಭಾಗವಹಿಸಿದ್ದಾರೆ. ಇದೇ ವೇಳೆ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೊಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ದರ್ಶನ್ ನಟಿಸಿದ 'ಕ್ರಾಂತಿ'ದ "ಶೇಕ್ ಇಟ್ ಪುಷ್ಪವತಿ" ಮೂಲಕ ಸಿನಿಮಾರಂಗದಲ್ಲಿ ನಿಮಿಕಾ ರತ್ನಾಕರ್ ಸದ್ದು ಮಾಡಿದ್ದರು. ಈ ಸಿನಮಾಗೂ ಮುನ್ನ 'ರಾಮ ಧನ್ಯ' ಅನ್ನೋ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರೂ ಅದು ಹೆಚ್ಚಾಗಿ ಸದ್ದು ಮಾಡಲಿಲ್ಲ. ಬಳಿಕ ಡಾರ್ಲಿಂಗ್ ಕೃಷ್ಣ ನಟನೆಯ 'ಅಬ್ಬರ' ಸಿನಿಮಾ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ಆದರೆ, 'ಕ್ರಾಂತಿ' ಸಿನಿಮಾದ "ಶೇಕ್ ಇಟ್ ಪುಷ್ಪವತಿ" ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಸದ್ಯ ಕನ್ನಡದಲ್ಲಿ ಹೊಸ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಕನ್ನಡ ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಟಿಯಾಗಿ ಗುರುತಿಸಿಕೊಂಡಿರುವ ನಿಮಿಕಾ ರತ್ನಾಕರ್ ಇದರ ನಡುವೆಯೇ ಬೇರೆ ಬೇರೆ ಕ್ರಿಯಾಶೀಲ ಕೆಲಸಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಅಷ್ಟೇ ಅಲ್ಲದೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಇವರಿಗೆ ಸ್ನೇಹಿತರಿದ್ದಾರೆ. ನಿಮಿಕಾ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಕ್ರಿಕೆಟರ್ ಪೃಥ್ವಿ ಶಾ ಅವರ ಎಂಗೇಜ್ಮೆಂಟ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸ್ಟಾರ್ ಕ್ರಿಕೆಟ್ ಪಟು ಶ್ರೇಯಸ್ ಅಯ್ಯರ್ ಅವರನ್ನು ಭೇಟಿ ಮಾಡಿ, ಜೊತೆಯಲ್ಲಿ ನಿಂತು ಫೋಟೋ ಪೋಸ್ ಕೊಟ್ಟಿದ್ದಾರೆ.

ಕಳೆದ ಭಾನುವಾರ ಮುಂಬೈನಲ್ಲಿ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭಕ್ಕೆ ನಟಿ ನಿಮಿಕಾ ರತ್ನಾಕರ್ ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಪೃಥ್ವಿ ಶಾ ಅವರ ಸ್ನೇಹಿತ ಹಾಗೂ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಕೂಡಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಮತ್ತು ನಿಮಿಕಾ ಅಚಾನಕ್ಕಾಗಿ ಭೇಟಿಯಾಗಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ಜೊತೆ ಫೋಟೋವನ್ನು ತೆಗೆಸಿಕೊಂಡಿದ್ದಾರೆ.
ನಟಿ ನಿಮಿಕಾ ರತ್ನಾಕರ್‌ಗೆ ಕೇವಲ ಸಿನಿಮಾ ಬಗ್ಗೆ ಅಷ್ಟೇ ಆಸಕ್ತಿಯಿಲ್ಲ. ಬದಲಾಗಿ ಕ್ರಿಕೆಟ್ ಪ್ರೇಮಿಯೂ ಕೂಡ ಹೌದು. ಕ್ರಿಕೆಟ್ ಪಂದ್ಯವನ್ನು ಇಷ್ಟ ಪಟ್ಟು ವೀಕ್ಷಿಸುತ್ತಾರೆ. ಕಳೆದ ಬಾರಿ ಆರ್‌ಸಿಬಿ ಫೈನಲ್ ಪಂದ್ಯ ನಡೆದಾಗ ಅಹಮದಾಬಾದ್‌ಗೆ ತೆರಳಿ ಪಂದ್ಯವನ್ನು ವೀಕ್ಷಿಸಿದ್ದರು. ಆರ್‌ಸಿಬಿ ಗೆಲುವಿನ ಖುಷಿಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಕ್ರಿಕೆಟ್ ಜಗತ್ತಿನ ಜೊತೆ ನಿಮಿಕಾ ರತ್ನಾಕರ್ ಅವರು ಅನ್ಯೋನ್ಯ ಬಂಧ ಹೊಂದಿದ್ದಾರೆಂದು ಹೇಳಬಹುದು.


Click it and Unblock the Notifications















