ಹಸೆಮಣೆ ಏರಲು ಸಜ್ಜಾದ 'ಶೇಕ್ ಇಟ್ ಪುಷ್ಪವತಿ'ಯ ನಿಮಿಕಾ ರತ್ನಾಕರ್; ವರ ಯಾರು?

ಸ್ಯಾಂಡಲ್‌ವುಡ್‌ನಲ್ಲಿ 'ಶೇಕ್ ಇಟ್ ಪುಷ್ಪವತಿ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಜ್ಜೆ ಹಾಕಿದ್ದ ನಟಿ ನಿಮಿಕಾ ರತ್ನಾಕರ್. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವು ರಿಲೀಸ್ ಆಗಬೇಕಿದೆ. ಸಿನಿಮಾರಂಗದಲ್ಲಿ ಬೆಳೆಯುತ್ತಿರುವಾಗಲೇ ನಿಮಿಕಾ ರತ್ನಾಕರ್ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

ನಿಮಿಕಾ ರತ್ನಾಕರ್ ನಟಿಯಾಗುವುದಕ್ಕೂ ಮುನ್ನ ಮಾಡೆಲ್ ಆಗಿ ಮಿಂಚಿದವರು. ಆ ಬಳಿಕ ನಟನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಾಡೆಲಿಂಗ್ ಕ್ರೇತ್ರದಲ್ಲಿ ಹೆಸರು ಮಾಡಿದ್ದ ನಿಮಿಕಾ ನಟಿಸಿದ ಮೊದಲ ಸಿನಿಮಾ 'ರಾಮಧಾನ್ಯ'. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

Kranti movie Shake it Pushpavathi dancer Nimika Ratnakar getting married to businessman

ಆದರೆ, ಹೆಸರು ಕೊಟ್ಟಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ. ದರ್ಶನ್ ಜೊತೆ "ಶೇಕ್ ಇಟ್ ಪುಷ್ಪವತಿ" ಎಂದು ಹೆಜ್ಜೆ ಹಾಕಿದ್ದರು. ಈ ಹಾಡಿನ ಮೂಲಕ ನಿಮಿಕಾ ರತ್ನಾಕರ್ ಕನ್ನಡಿಗರ ಮನೆ ಮನ ತಲುಪಿದ್ದರು. 'ವೈಲ್ಡ್ ಟೈಗರ್ ಸಫಾರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ವೇಳೆ ನಿಮಿಕಾ ಅವರಿಂದ ಮದುವೆ ಸುದ್ದಿ ಹೊರಬಿದ್ದಿದೆ.

ಚಿತ್ರರಂಗದಲ್ಲಿ ಈಗಷ್ಟೇ ನೆಲೆಯೂರಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನಿಮಿಕಾ ರತ್ನಾಕರ್ ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಹಂತದಲ್ಲಿದೆ. ಇಂತಹ ಸಮಯದಲ್ಲಿಯೇ ನಿಮಿಕಾ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಇದೇ ಏಪ್ರಿಲ್ 6ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಮದುವೆ ತಯಾರಿಯಲ್ಲಿ ನಿಮಿಕಾ ರತ್ನಾಕರ್ ಬ್ಯುಸಿಯಾಗಿದ್ದಾರೆ.

ಅಷ್ಟಕ್ಕೂ ನಿಮಿಕಾ ವಿವಾಹವಾಗುತ್ತಿರುವ ವರ ಯಾರು? ಅನ್ನೋ ಪ್ರಶ್ನೆ ಮೂಡುವುದು ಸಹಜ. ಅಂದ್ಹಾಗೆ ನಿಮಿಕಾ ರತ್ನಾಕರ್ ಮುಂಬೈ ಮೂಲದ ಉದ್ಯಮಿಯನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಮದುವೆ ಆಗುತ್ತಿರುವ ವಿಷಯ ಹೊರಬಿದ್ದಿದ್ದು, ವಿವಾಹ ಎಲ್ಲಿ ನಡೆಯಲಿದೆ? ವಿವಾಹವಾಗುತ್ತಿರುವ ಆ ಉದ್ಯಮಿ ಯಾರು? ಇನ್ನಿತ್ತರ ಮಾಹಿತಿಗಳನ್ನು ಅವರೇ ಬಹಿರಂಗ ಪಡಿಸುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ನಿಮಿಕಾ ರತ್ನಾಕರ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್ ಆಟಗಾರ ಪೃಥ್ವಿ ಷಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಮಿಕಾ ರತ್ನಾಕರ್ ಕಾಣಿಸಿಕೊಂಡಿದ್ದರು. ತಮ್ಮ ಇಡಿ ಕುಟುಂಬದೊಂದು ಕ್ರಿಕೆಟರ್ ನಿಶ್ವಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅದಕ್ಕಿಂತ ಹೆಚ್ಚಾಗಿ ಭಾರತದ ಮತ್ತೊಬ್ಬ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.

ನಿಮಿಕಾ ರತ್ನಾಕರ್‌ಗೆ ಕೇವಲ ಸಿನಿಮಾ, ನಟನೆ ಅಷ್ಟೇ ಅಲ್ಲ. ಕ್ರಿಕೆಟ್‌ನಲ್ಲಿಯೂ ಆಸಕ್ತಿಯಿದೆ. ಆಗಾಗ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವುದಕ್ಕೆ ಬೇರೆ ಬೇರೆ ಊರುಗಳಿ ಪಯಣ ಬೆಳೆಸುತ್ತಾರೆ. ಕಳೆದ ಬಾರಿ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುವುದಕ್ಕೆ ನಿಮಿಕಾ ಅಹಮದಾಬಾದ್‌ಗೆ ತೆರಳಿದ್ದರು. ಅಲ್ಲದೆ ಮಾಡಲಿಂಗ್ ಕ್ಷೇತ್ರದಲ್ಲಿ ಇರುವುದರಿಂದ ನಿಮಿಕಾಗೆ ಕ್ರಿಕೆಟ್ ಕ್ಷೇತ್ರದಲ್ಲೂ ಗೆಳೆಯರಿದ್ದಾರೆ. ಇವರ ಮದುವೆಗೆ ಸಿನಿಮಾ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರು ಆಗಮಿಸುವ ಸಾಧ್ಯತೆಯಿದೆ.

More from Filmibeat

English summary
Kranti movie Shake it Pushpavathi dancer Nimika Ratnakar getting married to businessman.
Read more about: actress marriage sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X