ಮಲಯಾಳಂನಲ್ಲೂ ಕೆಆರ್‌ಜಿ ಆಟ ಆರಂಭ: ಕೊಚ್ಚಿಯಲ್ಲಿ ಮೊದಲ ಸಿನಿಮಾ 'ಪಡಕ್ಕಳಂ'ಗೆ ಮುಹೂರ್ತ

ಸ್ಯಾಂಡಲ್‌ವುಡ್‌ನ ನಿರ್ಮಾಣ ಸಂಸ್ಥೆ ಕೆಆರ್‌ಜಿ ಕನ್ನಡದ ಹಲವು ಸಿನಿಮಾಗಳನ್ನು ನಿರ್ಮಿಸಿದೆ. ಹಾಗೇ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದೆ. ಇಂದಿಗೂ ಕನ್ನಡದಲ್ಲಿ ಬಹು ನಿರೀಕ್ಷಿತ ಸಿನಿಮಾ 'ಉತ್ತರಕಾಂಡ' ಸಿನಿಮಾಗೆ ಬಂಡವಾಳ ಹೂಡಿದೆ. ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಬಳಿಕ ಕೆಆರ್‌ಜಿ ಸ್ಟುಡಿಯೋ ಈಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ.

ಕೆಆರ್‌ಜಿ ಸ್ಟೂಡಿಯೋಸ್ ಹಾಗೂ ಫ್ರೈಡೇ ಫಿಲಂ ಹೌಸ್‌ ಜಂಟಿಯಾಗಿ ಮಲಯಾಳಂ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಇದು ಕೆಆರ್‌ಜಿ ಬ್ಯಾನರ್‌ ಕೈಗೆತ್ತಿಕೊಂಡಿರುವ ಮೊದಲ ಮಲಯಾಳಂ ಸಿನಿಮಾ ಕೂಡ ಹೌದು. ಸದ್ಯಕ್ಕೆ 'ಪಡಕ್ಕಳಂ' ಅನ್ನುವ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದು, ಈ ಚಿತ್ರಕ್ಕೆ ಮುಹೂರ್ತ ಮೂಲಕ ಚಾಲನೆ ಸಿಕ್ಕಿದೆ.

KRG Studios first Malayalam cinema Padakkalam

ಕೆಆರ್‌ಜಿ ಸಂಸ್ಥೆಯ ನಿರ್ಮಿಸುತ್ತಿರುವ ಈ ಮಲಯಾಳಂ ಸಿನಿಮಾ ಕೊಚ್ಚಿಯಲ್ಲಿ ಮುಹೂರ್ತ ಮಾಡಿದೆ. ಹಾಗೇ ಸಿನಿಮಾದ ಒಂದು ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, ಮಲಯಾಳಂ ಸಿನಿಮಾವನ್ನು ಅಧಿಕೃತವಾಗಿ ಆರಂಭಿಸಿದೆ.

ಕೆಆರ್‌ಜಿ ಸ್ಟುಡಿಯೋ ಈಗಾಗೇ 'ರತ್ನನ್ ಪ್ರಪಂಚ', 'ಹೊಯ್ಸಳ'ದಂತಹ ಸಿನಿಮಾಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ಹಾಗೇ 'ಪೌಡರ್', 'ಉತ್ತರಕಾಂಡ' ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಇದರ ಜೊತೆಗೆ ಈಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ಹೊಂಬಾಳೆ ಫಿಲಂಸ್ ಬಳಿಕ ಕನ್ನಡದ ಮತ್ತೊಂದು ನಿರ್ಮಾಣ ಸಂಸ್ಥೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಂತೆ ಆಗಿದೆ.

ಕೇರಳ ಕೊಚ್ಚಿಯಲ್ಲಿ 'ಪಡಕ್ಕಳಂ' ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗವಹಿಸಿತ್ತು. 'ಪಡಕ್ಕಳಂ' ಹಾಸ್ಯ ಭರಿತ ಫ್ಯಾಂಟಸಿ ಸಿನಿಮಾ. ಈ ಸಿನಿಮಾವನ್ನು ಮನು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮನು ಸ್ವರಾಜ್ ಅವರ ಮೊದಲ ಸಿನಿಮಾ. ಕೆಆರ್‌ಜಿಯ ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆಆರ್‌ಜಿ ಸ್ಟೂಡಿಯೋಸ್ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಅವರ ಫ್ರೈಡೇ ಫಿಲಂ ಹೌಸ್ ಮೂಲಕ ನಿರ್ಮಿಸುತ್ತಿದ್ದಾರೆ.

'ಪಡಕ್ಕಳಂ' ಸಿನಿಮಾದಲ್ಲಿ ಸೂರಜ್ ವೆಂಜರಮೂಡು, ಶರಫ್ ಯು ಧೀನ್, ಸಂದೀಪ್ ಪ್ರದೀಪ್, ನಿರಂಜನ ಅನೂಪ್, ಸಾಫ್ಬೋಯಿ, ಅರುಣ್ ಪ್ರದೀಪ್, ಅರುಣ್ ಅಜಿಕುಮಾರ್, ಇಶಾನ್ ಶೌಕತ್, ಮತ್ತು ಪೂಜಾ ಮೋಹನರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ರಾಜೇಶ್ ಮುರುಗೇಸನ್ ಸಂಗೀತ ನೀಡಿದ್ದಾರೆ. ಅನು ಮೂತೇದತ್ ಛಾಯಾಗ್ರಹಣ, ನಿಧಿನ್ ರಾಜ್ ಅರೋಲ್ ಎಡಿಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

More from Filmibeat

English summary
KRG Studios first Malayalam cinema, Padakkalam, officially commenced in Kochi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X