'777 ಚಾರ್ಲಿ' ಬಳಿಕ ಶ್ವಾನ ಪ್ರಿಯರಿಗಾಗಿ ಮತ್ತೊಂದು ಸಿನಿಮಾ: 'ವಾಲಟ್ಟಿ' ವಿಶ್ವದಾದ್ಯಂತ ರಿಲೀಸ್.. ಕಾರ್ತಿಕ್ ಗೌಡ ಸಾಥ್

'ಕಿರಿಕ್ ಪಾರ್ಟಿ' ರಕ್ಷಿತ್ ಶೆಟ್ಟಿಯ '777 ಚಾರ್ಲಿ' ವಿಶ್ವದಾದ್ಯಂತ ಶ್ವಾನಪ್ರಿಯರಿಗೆ ಇಷ್ಟ ಆಗಿತ್ತು. ಈ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಜನರ ಮೆಚ್ಚುಗೆಯನ್ನೂ ಗಳಿಸಿತ್ತು.

'777 ಚಾರ್ಲಿ'ಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಇಂತಹದ್ದೇ ಸಿನಿಮಾ ರೆಡಿಯಾಗಿದೆ. ಅಂದ್ಹಾಗೆ ಇದು ಕನ್ನಡ ಸಿನಿಮಾ ಅಲ್ಲ. ಪಕ್ಕಾ ಮಲಯಾಳಂ ಸಿನಿಮಾ. ಆದರೆ, ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗುತ್ತಿದೆ.

KRG Studios Karthik Gowda Distributing Malayalam film Valatty Worldwide not in Kerala

ಶ್ವಾನ ಪ್ರಿಯರಿಗಾಗಿ ನಿರ್ಮಾಣ ಮಾಡಿರುವ ಈ ಮಲಯಾಳಂ ಸಿನಿಮಾದ ಹೆಸರು 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್'. ಈ ಸಿನಿಮಾದಲ್ಲಿ ಸಾಕು ನಾಯಿಗಳೇ ಸೂಪರ್‌ ಹೀರೊಗಳು. ಇವುಗಳನ್ನೇ ಮುಂದಿಟ್ಟುಕೊಂಡು ಸಿನಿಮಾ ನಿರ್ಮಾಣ ಆಗಿದ್ದು, ಮುಂದಿನ ತಿಂಗಳು ಬಿಡುಗಡೆ ಸಜ್ಜಾಗಿದೆ.

ಸಾಕು ನಾಯಿಗಳೇ ಹೀರೊ

'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಸಾಕು ನಾಯಿಗಳ ಗ್ಯಾಂಗ್‌ಗಳನ್ನು ಇಟ್ಟುಕೊಂಡು ಹೆಣೆದ ಕಥೆ. ಇದರಲ್ಲೂ ಅದ್ಭುತ ಆಕ್ಷನ್ ಸನ್ನಿವೇಶಗಳಿವ. ಹೀಗಾಗಿ ಆಕ್ಷನ್ ಪ್ರೇಮಿಗಳಿಗೆ ಇಷ್ಟ ಆಗುತ್ತೆ. ಹಾಗಂತ ಭಾವನಾತ್ಮಕ ಸನ್ನಿವೇಶಗಳಿಗೇನು ಕೊರತೆಯಿಲ್ಲ.

'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಸಿನಿಮಾದಲ್ಲಿ ಸಾಕು ನಾಯಿಗಳ ಪಾತ್ರಕ್ಕೆ ಮಲಯಾಳಂನ ಸ್ಟಾರ್ ನಟರು ಧ್ವನಿ ನೀಡಿದ್ದಾರೆ. ನಟ ರೋಷನ್ ಮ್ಯಾಥ್ಯೂ, ಸೌಬಿನ್ ಶಾಹಿರ್, ಇಂದ್ರನ್ಸ್, ಸನ್ನಿ ವೇಯ್ನ್, ಸೈಜು ಕುರುಪ್ ಸೇರಿದಂತೆ ಹಲವು ಕಲಾವಿದರು ನಾಯಿ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಇದು ಈ ಸಿನಿಮಾ ಮತ್ತೊಂದು ಹೈಲೈಟ್.

KRG Studios Karthik Gowda Distributing Malayalam film Valatty Worldwide not in Kerala

ವಿಶ್ವದಾದ್ಯಂತ ಕೆಆರ್‌ಜಿ ಸ್ಟುಡಿಯೋದಿಂದ ರಿಲೀಸ್

ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಕ್ಯಾನೈನ್ ಮತ್ತು ಸಾಕು ಪ್ರಾಣಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸಾಕು ನಾಯಿಗಳ ಸಾಹಸ ಅಷ್ಟೇ ಅಲ್ಲದೆ, ಪ್ರೇಕ್ಷಕರ ಮನಸೆಳೆಯುವ ದೃಶ್ಯಗಳಿರುತ್ತವೆ. ಪ್ರೀತಿ, ಕಾಮಿಡಿ ಹಾಗೂ ಸಾಹಸದ ಸನ್ನಿವೇಶಗಳು ಈ ಸಿನಿಮಾದ ಹೈಲೈಟ್. ಇನ್ನೊಂದು ಹೆಮ್ಮೆಯ ವಿಷಯವೇನಂದ್ರೆ, ಮಲಯಾಳಂ ಸಿನೆಮಾ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಟುಡಿಯೋಸ್ ಕೇರಳವನ್ನು ಹೊರತು ಪಡಿಸಿ ವಿಶ್ವದಾದ್ಯಂತ ರಿಲೀಸ್ ಮಾಡುತ್ತಿದೆ.

ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಈ ವಿಷಯವನ್ನು ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ. " ವಾಲಟ್ಟಿಯಂತಹ ವಿಭಿನ್ನ ಹಾಗೂ ಕ್ಯೂಟ್ ಸಿನಿಮಾವನ್ನು ಕೇರಳ ಬಿಟ್ಟು ಇಡೀ ವಿಶ್ವದಾದ್ಯಂತ ರಿಲೀಸ್ ಮಾಡುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಜುಲೈ 14ರಂದು ಮಲಯಾಲಂನಲ್ಲಿ ಹಾಗೂ ವಾರದ ಬಳಿಕ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ" ಎಂದು ಕಾರ್ತಿಕ್ ಗೌಡ ಟ್ವೀಟ್‌ನಲ್ಲಿ ಹೇಳಿದ್ದಾರೆ.

ದಿಲ್ ರಾಜು, ಅನಿಲ್ ತಡಾನಿ ಸಾಥ್

ಅಂದ್ಹಾಗೆ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಕೂಡ ಪ್ಯಾನ್ ಇಂಡಿಯಾ ಸಿನಿಮಾ. ನಿರ್ಮಾಪಕ ದಿಲ್ ರಾಜು ತೆಲುಗಿನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಅನಿಲ್ ತಡಾನಿ ಹಾಗೂ ಓವರ್ ಸೀಸ್ ಡಿಸ್ಟ್ರಿಬ್ಯುಷನ್ ಅನ್ನು ಹೋಮ್ ಸ್ಕ್ರೀನ್ ಎಂಟರ್‌ಟೈನ್ಮೆಂಟ್‌ ಮಾಡುತ್ತಿದೆ.

'ವಾಲಟ್ಟಿ' ಸಿನಿಮಾಗೆ ಮಲಯಾಳಂ ಚಿತ್ರರಂಗದ ನಟ, ನಿರ್ಮಾಪಕ ವಿಜಯ್ ಬಾಬು ಬೆನ್ನೆಲುಬಾಗಿ ನಿಂತಿದ್ದಾರೆ. ಫ್ರೈಡೇ ಫಿಲ್ಮ್ ಹೌಸ್ ಈ ಸಿನಿಮಾವನ್ನು ನಿರ್ಮಿಸಿದೆ. ನಿರ್ದೇಶಕ ದೇವನ್ ಇದೇ ಮೊದಲ ಬಾರಿಗೆ ಈ ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳಿದ್ದಾರೆ. ಜುಲೈ 14 ರಂದು ಮಲಯಾಳಂನಲ್ಲಿ ರಿಲೀಸ್ ಆಗಲಿದ್ದು, ಒಂದು ವಾರದ ಬಳಿಕ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.

More from Filmibeat

English summary
KRG Studios Karthik Gowda Distributing Malayalam film Valatty Worldwide not in Kerala, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X