ಸಂಕ್ರಾಂತಿ ಹಬ್ಬಕ್ಕೆ ಧನಂಜಯ್ 25ನೇ ಚಿತ್ರದ ಟೈಟಲ್ ರಿವೀಲ್: ಬೆಳಗಾವಿಗೂ ಈ ಚಿತ್ರಕ್ಕೂ ಏನು ಸಂಬಂಧ?

ಸ್ಯಾಂಡಲ್‌ವುಡ್‌ನ ನಟರಾಕ್ಷಸ ಧನಂಜಯ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿತ್ತಿವೆ. 'ರತ್ನನ್ ಪ್ರಪಂಚ', 'ಪುಷ್ಪ',' ಬಡವ ರಾಸ್ಕಲ್' ಹೀಗೆ ಕಳೆದ ವರ್ಷ ಈ ಮೂರು ಸಿನಿಮಾಗಳನ್ನು ನೋಡಿ ಸಿನಿಪ್ರಿಯರು ಭೇಷ್ ಅಂದಿದ್ದಾರೆ. ಇತ್ತೀಚೆಗೆ ತೆರೆ ಕಂಡಿರುವ 'ಬಡವ ರಾಸ್ಕಲ್' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಚಿಂದಿ ಉಡಾಯಿಸಿದೆ. ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ನಟನೀಗ ಮತ್ತೊಂದು ಸಿನಿಮಾದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

Recommended Video

ಡಾಲಿ ಧನಂಜಯ್ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದು ಏನು?

ಸಂಕ್ರಾಂತಿ ಹಬ್ಬಕ್ಕೆ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತವೆ. ಸ್ಯಾಂಡಲ್‌ವುಡ್‌ನಲ್ಲಿ ಈ ಬಾರಿ ಕೊಂಚ ಕಡಿಮೆ ಅಂತ ಅನಿಸಿದರೂ ಧನಂಜಯ್ ಹೊಚ್ಚ ಹೊಸ ಸಿನಿಮಾ ಟೇಕ್ ಆಫ್ ಆಗಿದೆ. ಈ ಚಿತ್ರಕ್ಕೆ 'ಹೊಯ್ಸಳ' ಎನ್ನುವ ಟೈಟಲ್ ಕೂಡ ಫಿಕ್ಸ್ ಆಗಿದೆ. ಸುಗ್ಗಿ ಸಂಭ್ರಮದಲ್ಲಿ 'ರತ್ನನ್ ಪ್ರಪಂಚ' ತಂಡವೇ ಸೇರಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಟೈಟಲ್ ಅನಾವರಣಗೊಳಿಸಿ ಸಂಭ್ರಮಿಸಿದೆ.

ಸಂಕ್ರಾಂತಿಗೆ ಹೊಯ್ಸಳ ಫಸ್ಟ್‌ ಲುಕ್

ಸಂಕ್ರಾಂತಿಗೆ ಹೊಯ್ಸಳ ಫಸ್ಟ್‌ ಲುಕ್

'ಹೊಯ್ಸಳ' ಇದು ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಎರಡನೇ ಸಿನಿಮಾ. 'ರತ್ನನ್ ಪ್ರಪಂಚ' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೆ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಕೊರೊನಾ ಕಾರಣದಿಂದ ಇನ್ನೂ ಜನರು ಥಿಯೇಟರ್‌ಗೆ ಬರಲು ಹಿಂದೇಟು ಹಾಕುತ್ತಿದ್ದರಿಂದ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಚಿತ್ರಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ಉತ್ಸಾಹದಲ್ಲೇ ಧನಂಜಯ್ ಜೊತೆ ಎರಡನೆ ಸಿನಿಮಾಗೆ ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಕೈ ಹಾಕಿದ್ದಾರೆ.

ನಟ ರಾಕ್ಷಸನ 25ನೇ ಚಿತ್ರ

ನಟ ರಾಕ್ಷಸನ 25ನೇ ಚಿತ್ರ

'ಹೊಯ್ಸಳ' ಧನಂಜಯ್ ನಟಿಸುತ್ತಿರುವ 25ನೇ ಸಿನಿಮಾ. ಇದು ಸ್ಯಾಂಡಲ್‌ವುಡ್ ನಟರಾಕ್ಷಸನ ವೃತ್ತಿ ಬದುಕಿನಲ್ಲೊಂದು ಮೈಲಿಗಲ್ಲು. ಸದಾ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಧನಂಜಯ್ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚುಕೊಂಡಿದ್ದಾರೆ. ಡಾಲಿಯಿಂದ ಯಶಸ್ಸಿನ ಮೆಟ್ಟಿಲನ್ನು ಹಂತ ಹಂತವಾಗಿ ಏರುತ್ತಿರುವ ಧನಂಜಯ್, ಖಳನಾಯಕನಾಗಿ, ಕಮರ್ಷಿಯಲ್ ಪಾತ್ರಗಳ ಹೀರೊ ಆಗಿ, ರತ್ನನ್ ಪ್ರಪಂಚ ಅಂತಹ ವಿಭಿನ್ನ ಸಿನಿಮಾಗಳ ಪಾತ್ರವಾಗಿ ಮಿಂಚಿದ್ದಾರೆ. ನಿಧಾನವಾಗಿ ಯಶಸ್ಸಿನ ರುಚಿ ನೋಡುತ್ತಿರುವ ಧನಂಜಯ್ ಈಗ 'ಹೊಯ್ಸಳ'ನಾಗಿ 25ನೇ ಚಿತ್ರದ ಗಡಿಯೊಳಗೆ ಕಾಲಿಟ್ಟಿದ್ದಾರೆ.

'ಹೊಯ್ಸಳ' ಚಿತ್ರಕ್ಕಿದೆ ಬೆಳಗಾವಿ ನಂಟು

'ಹೊಯ್ಸಳ' ಚಿತ್ರಕ್ಕಿದೆ ಬೆಳಗಾವಿ ನಂಟು

'ಹೊಯ್ಸಳ' ಸಿನಿಮಾದ ಚಿತ್ರೀಕರಣ ಬಹುತೇಕ ಬೆಳಗಾವಿಯಲ್ಲಿ ನಡೆಯಲಿದೆ. ಇಲ್ಲೇ ಯಾಕೆ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೊಂದು ಕಾರಣವಿದೆ. ಇದು ಬೆಳಗಾವಿಯ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕತೆ. ಹೀಗಾಗಿಯೇ ಇಡೀ ಸಿನಿಮಾವನ್ನು ಕರ್ನಾಟಕದ ಗಡಿ ಭಾಗಗಳಲ್ಲಿಯೇ ಚಿತ್ರೀಕರಣ ಮಾಡಲಿದೆ. ಕೊರೊನಾ ಮೂರನೇ ಅಲೆ ಕಡಿಮೆಯಾಗಿ ಚಿತ್ರೀಕರಣ ಮಾಡುವುದು ಸೇಫ್ ಎನಿಸಿದ ಕೂಡಲೇ ಚಿತ್ರೀಕರಣ ಆರಂಭ. ಏಪ್ರಿಲ್ ತಿಂಗಳಿನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದು ಕೆಆರ್‌ಜಿ ಸ್ಟುಡಿಯೋ ಹೇಳಿಕೊಂಡಿದೆ. ಸದ್ಯ ಧನಂಜಯ್ ಸಿನಿಮಾಗೆ ಆಯ್ಕೆ ಆಗಿದ್ದು, ಇನ್ನುಳಿದ ಪಾತ್ರ ವರ್ಗದ ಬಗ್ಗೆ ಮಾತುಕತೆ ನಡೆಯುತ್ತಿದೆ.

'ಹೊಯ್ಸಳ' ಚಿತ್ರಕ್ಕೆ ತಮನ್ ಮ್ಯೂಸಿಕ್

'ಹೊಯ್ಸಳ' ಚಿತ್ರಕ್ಕೆ ತಮನ್ ಮ್ಯೂಸಿಕ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಚಿತ್ರಕ್ಕೆ ಸಂಗೀತ ನೀಡಿದ್ದ ಎಸ್ ಎಸ್ ತಮನ್ 'ಹೊಯ್ಸಳ'ಕ್ಕೂ ಟ್ಯೂನ್ ಹಾಕುತ್ತಿದ್ದಾರೆ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ 'ಗೀತಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವಿಜಯ್ 'ಹೊಯ್ಸಳ' ಸಿನಿಮಾದ ನಿರ್ದೇಶಕ. ಉಳಿದಂತೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. 'ರತ್ನನ್ ಪ್ರಪಂಚ'ದಂತಹ ಕ್ಲಾಸ್ ಸಿನಿಮಾ ನಿರ್ಮಾಣ ಮಾಡಿದ್ದ ಸಂಸ್ಥೆ ಈಗ ಮಾಸ್ ಸಿನಿಮಾಗೆ ಕೈ ಹಾಕಿದ್ದು, ರಿಲೀಸ್ ಆಗಿರುವ ಪೋಸ್ಟರ್ ಸಿನಿಮಾ ರಗಡ್ ಆಗಿರುತ್ತೆ ಎನ್ನುವ ಸೂಚನೆ ನೀಡಿದೆ.

More from Filmibeat

English summary
KRG Studios Revealed Dhananjay Starrer 25th film title as Hoysala. It is the story of a strict police officer from Belagum, how he faces the critical situation. S S Thaman will score the music.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X