ಮುಂದುವರಿಯಲಿದೆ 'ಕರ್ವ' ಹಾರರ್: ಚಿತ್ರತಂಡದ ಹೊಸ ಪ್ರಯೋಗ
ಒಂದು ಸಿನಿಮಾ ಹಿಟ್ ಆದ ಬಳಿಕ ಅದರ ಮುಂದುವರಿದ ಭಾಗ ಮಾಡುವುದು ಹೊಸತೇನಲ್ಲ. ಕೆಲವು ಸಿನಿಮಾಗಳು ಮೊದಲೇ ಎರಡು ಮೂರು ಭಾಗ ಮಾಡುವುದನ್ನು ಘೋಷಿಸಿರುತ್ತವೆ. ಕನ್ನಡದ 'ತೋತಾಪುರಿ' ಎಂಬ ಚಿತ್ರದ ಎರಡೂ ಭಾಗಗಳನ್ನು ಒಟ್ಟಿಗೆ ಶೂಟಿಂಗ್ ಮಾಡಲಾಗುತ್ತಿದೆ. ಈ ರೀತಿಯ ವಿಭಿನ್ನ ಪ್ರಯೋಗಗಳಿಗೆ ಮತ್ತೊಂದು ಸೇರಿಕೊಂಡಿದೆ.
Recommended Video
ತಿಲಕ್, ಆರ್‌ಜೆ ರೋಹಿತ್, ಅನು ಪೂವಮ್ಮ, ಅನಿಶಾ ಅಂಬ್ರೋಸ್ ಮುಂತಾದವರು ನಟಿಸಿದ್ದ ಹಾರರ್ ಚಿತ್ರ 'ಕರ್ವ' ಸದ್ದು ಮಾಡಿತ್ತು. ಈ ಚಿತ್ರದ ಎರಡನೆಯ ಭಾಗಕ್ಕೂ ಚಿತ್ರತಂಡ ಮುಂದಾಗಿತ್ತು. ವಿಶೇಷವೆಂದರೆ ಎರಡನೆಯ ಭಾಗ ತೆರೆ ಕಾಣುವುದಕ್ಕೂ ಮುನ್ನ ಅದರ ಮೂರನೇ ಭಾಗ ತೆರೆ ಕಾಣಲಿದೆ. 'ಕರ್ವ' ಚಿತ್ರ ಉತ್ತಮ ಯಶಸ್ಸು ಕಂಡಿತ್ತು. ಹಾರರ್ ಚಿತ್ರಗಳನ್ನು ಇಷ್ಟಪಡುವವರಿಗೆ ಮತ್ತೊಂದು ಅದ್ಭುತ ಅನುಭವ ನೀಡುವುದು ಈ ಚಿತ್ರತಂಡದ ಗುರಿ. ಕೃಷ್ಣ ಚೈತನ್ಯ ಅವರೊಂದಿಗೆ ಡಾ. ಸೂರಿ ಕೂಡ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮುಂದೆ ಓದಿ...

ವಿಶಾಲ್ ಶೇಖರ್ ನಿರ್ದೇಶನ
'6-5=2', ದಿಯಾ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೃಷ್ಣ ಚೈತನ್ಯ ಮತ್ತು ತಂಡ ಮತ್ತೊಂದು ಹಾರರ್ ಚಿತ್ರಕ್ಕೆ ಕೈ ಹಾಕಿದೆ. 'ಕರ್ವ' ಚಿತ್ರದ ಬಳಿಕ 'ಕರ್ವ 2' ಚಿತ್ರಕ್ಕೆ ನವನೀತ್ ಆಕ್ಷನ್ ಕಟ್ ಹೇಳುತ್ತಿದ್ದರು. ಎರಡನೆಯ ಸಿನಿಮಾ ಸದ್ಯಕ್ಕೆ ಅಲ್ಲಿಯೇ ನಿಲ್ಲಲಿದ್ದು, ವಿಶಾಲ್ ಶೇಖರ್ ಎಂಬ ಹೊಸ ಪ್ರತಿಭೆ ನಿರ್ದೇಶನದಲ್ಲಿ 'ಕರ್ವ 3' ಸಿದ್ಧವಾಗಲಿದೆ.

ಮೇಘನಾ ಗಾಂವ್ಕರ್ ನಾಯಕಿ
ಮೊದಲ ಭಾಗದಲ್ಲಿ ನಟಿಸಿದ್ದ ಕೆಲವು ಕಲಾವಿದರು ಈ ಚಿತ್ರದಲ್ಲಿಯೂ ಇರಲಿದ್ದಾರೆ. ತಿಲಕ್ ಶೇಖರ್ ಅವರಲ್ಲಿ ಒಬ್ಬರು. ರೊಮ್ಯಾಂಟಿಕ್ ಚಿತ್ರಗಳಿಂದ ಗುರುತಿಸಿಕೊಂಡಿದ್ದ ನಟಿ ಮೇಘನಾ ಗಾಂವ್ಕರ್ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಲಿದ್ದಾರೆ.

ಶೀಘ್ರದಲ್ಲಿಯೇ ಚಿತ್ರೀಕರಣ
ಕರ್ವ ಚಿತ್ರದ ಕಥೆಯೊಂದಿಗೆ ಈ ಚಿತ್ರದ ಕಥೆಯ ಲಿಂಕ್ ಇದೆ. ಹೀಗಾಗಿ ಮೂರನೇ ಭಾಗವನ್ನು ಮೊದಲು ಸಿದ್ಧಪಡಿಸಿ ಬಿಡುಗಡೆ ಮಾಡಲು ಕೃಷ್ಣ ಚೈತನ್ಯ ಮುಂದಾಗಿದ್ದಾರೆ. ವಿಶಾಲ್ ಶೇಖರ್ ಮಾಡಿರುವ ಕಥೆ ಅವರಿಗೆ ಬಹಳ ಹಿಡಿಸಿದೆ. ಚಿತ್ರೀಕರಣ ನಡೆಸಲು ಈಗ ಅನುಮತಿ ಸಿಕ್ಕಿರುವುದರಿಂದ ಉಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆದ ಕೂಡಲೇ ಚಿತ್ರೀಕರಣ ಶುರುವಾಗಲಿದೆ.

ಮೂರನೇ ಭಾಗ ಮೊದಲು ಬಿಡುಗಡೆ
ವಿಶಾಲ್ ಶೇಖರ್ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಲಲಿತ ಕಲೆ ಮತ್ತು ಅನಿಮೇಷನ್ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಅವರಿಗೆ ಇದೆ. ಕಿರುಚಿತ್ರ ಸಹ ನಿರ್ದೇಶಿಸಿದ್ದಾರೆ. ಕರ್ವ 3 ಬಿಡುಗಡೆಯಾದ ಬಳಿಕ ಕರ್ವ 2 ಬಿಡುಗಡೆಯಾಗಲಿದೆ.


Click it and Unblock the Notifications











