Krishnam Pranaya Sakhi Box Office Day 4:4ನೇ ದಿನದ ಕಲೆಕ್ಷನ್ ಎಷ್ಟು? ಮರಳಿ ಬಂತಾ ಗೋಲ್ಡನ್ ಡೇಸ್?

ಎರಡು ವಾರಗಳಿಂದ ಕರ್ನಾಟಕದಲ್ಲಿ ಸ್ಯಾಂಡಲ್‌ವುಡ್ ಚಿಗುರಿಕೊಂಡಿದೆ. ಈ ವರ್ಷವೂ ಕನ್ನಡ ಚಿತ್ರರಂಗದ ಗತಿ ಅದೋಗತಿ ಎಂದುಕೊಂಡವರಿಗೆ ಎರಡು ಸಿನಿಮಾಗಳು ಹೊಸ ಭರವಸೆಯನ್ನು ನೀಡಿವೆ. ದುನಿಯಾ ವಿಜಯ್ ನಟನೆಯ 'ಭೀಮ' ಸಿನಿಮಾ ಒಂದಾದರೆ, ಇನ್ನೊಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.

ಕಳೆದ ವಾರ ಒಂದರ ಹಿಂದೊಂದು ರಜೆ ದಿನಗಳು ಬಂದಿತ್ತು. ಆಗಸ್ಟ್ 15 ರಿಂದ ನಿರಂತರವಾಗಿ ನಾಲ್ಕು ದಿನಗಳು ರಜೆ ಇತ್ತು. ಇದನ್ನು ಗಮನದಲ್ಲಿ ಇಟ್ಟಿಕೊಂಡೇ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಮೊದಲ ದಿನ ಈ ಸಿನಿಮಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಬಾಕ್ಸಾಫೀಸ್‌ ಗಳಿಕೆಯಲ್ಲಿ ಈ ಸಿನಿಮಾ ಹಿಂದೆ ಬಿದ್ದಿಲ್ಲ.

Krishnam Pranaya Sakhi beats Thangalaan box office Collection in day 4 in Karnataka

ಕನ್ನಡ ಸಿನಿಮಾ ಕೃಷ್ಣಂ ಪ್ರಯಣ ಸಖಿಗೆ ಕರ್ನಾಟಕದಲ್ಲಿ ಟಕ್ಕರ್ ಕೊಟ್ಟಿದ್ದು ಚಿಯಾನ್ ವಿಕ್ರಮ್ ನಟನೆಯ 'ತಂಗಲಾನ್'. ಈ ಸಿನಿಮಾ ಕರ್ನಾಟಕದಲ್ಲೂ ಉತ್ತಮ ಗಳಿಕೆ ಕಂಡಿತ್ತು. ಮೊದಲೆರಡು ದಿನ 'ಕೃಷ್ಣಂ ಪ್ರಯಣ ಸಖಿ'ಗೂ ಸಿನಿಮಾಗಿಂತಲೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ, ನಾಲ್ಕನೇ ದಿನ ಕರ್ನಾಟಕದಲ್ಲಿ 'ತಂಗಲಾನ್' ಸಿನಿಮಾಗಿಂತಲೂ 'ಕೃಷ್ಣಂ ಪ್ರಣಯ ಸಖಿ' ಕಲೆಕ್ಷನ್ ಹೆಚ್ಚಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

'ಕೃಷ್ಣಂ ಪ್ರಣಯ ಸಖಿ' 4ನೇ ದಿನದ ಗಳಿಸಿದ್ದೆಷ್ಟು?

ಗೋಲ್ಡನ್‌ ಸ್ಟಾರ್ ಗಣೇಶ್ ಇದ್ಮೇಲೆ ಅದು ಫ್ಯಾಮಿಲಿ ಸಿನಿಮಾ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಬರೀ ಹಾಡುಗಳಿಂದಲೇ ಸಿನಿಮಾ ಪ್ರಚಾರ ಮಾಡಿದ್ದ ತಂಡಕ್ಕೆ ಗೆಲುವು ಸಿಕ್ಕಿದೆ. ಮೊದಲ ಮೂರು ದಿನಕ್ಕಿಂತ ನಾಲ್ಕನೇ ದಿನದ ಕಲೆಕ್ಷನ್ ಹೆಚ್ಚಿದೆ. ವೀಕೆಂಡ್‌ನಲ್ಲಿ ಈ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಟ್ರೇಡ್ ವೆಬ್ ಸೈಟ್ sacnilk ಪ್ರಕಾರ, ನಿನ್ನೆ (ಆಗಸ್ಟ್ 18) ಈ ಸಿನಿಮಾ 2.18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Krishnam Pranaya Sakhi beats Thangalaan box office Collection in day 4 in Karnataka

ನಾಲ್ಕು ದಿನಗಳ ಒಟ್ಟು ಗಳಿಕೆ?

'ಕೃಷ್ಣಂ ಪ್ರಯಣ ಸಖಿ' ಹಿಟ್ ಅಂತ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳೆದ ನಾಲ್ಕು ದಿನಗಳ ಗಳಿಕೆಯನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ. ಮೊದಲ ದಿನ 1.50 ಕೋಟಿ ರೂಪಾಯಿ, ಎರಡನೇ ದಿನ 1 ಕೋಟಿ ರೂಪಾಯಿ ಮೂರನೇ ದಿನ 1.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ನಾಲ್ಕನೇ ದಿನ 2.18 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ಮೂಲಕ ನಾಲ್ಕು ದಿನಗಳಲ್ಲಿ 6.38 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎನ್ನಲಾಗಿದೆ.

ವಲ್ಡ್‌ವೈಡ್ ಕಲೆಕ್ಷನ್ ಎಷ್ಟು?

ಗಣೇಶ್ ಸಿನಿಮಾವನ್ನು ಕರ್ನಾಟಕ ಬಿಟ್ಟು ಬೇರೆ ಭಾಗಗಳಲ್ಲಿ ರಿಲೀಸ್ ಆಗಿದೆ. ಲಿಮಿಟೆಡ್ ಥಿಯೇಟರ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಲ್ಲಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು ಎನ್ನಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಸುಮಾರು ಒಂದು ಕೋಟಿ ಕಲೆಕ್ಷನ್ ಆಗಿದೆ. ಒಟ್ಟು ಈ ಸಿನಿಮಾ 7.26 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ವರದಿಯಾಗಿದೆ. ಆದರೆ, ಈ ಬಗ್ಗೆ 'ಕೃಷ್ಣಂ ಪ್ರಯಣ ಸಖಿ' ತಂಡ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

'ತಂಗಲಾನ್' ಹಿಂದಿಕ್ಕಿದ ಗಣೇಶ್ ಸಿನಿಮಾ

'ಕೃಷ್ಣಂ ಪ್ರಯಣ ಸಖಿ' ಸಿನಿಮಾ ರಿಲೀಸ್ ಆದ ದಿನವೇ 'ತಂಗಲಾನ್' ಕೂಡ ಕರ್ನಾಟಕದಲ್ಲಿ ಸುಮಾರು 140 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಆರಂಭದ ಎರಡು ದಿನಗಳಲ್ಲಿ ಉತ್ತಮ ಗಳಿಕೆ ಕಂಡಿತ್ತು. ಮೊದಲ ದಿನ 2.20 ಕೋಟಿ ರೂಪಾಯಿ ಹಾಗೂ ಎರಡನೇ ದಿನ 1.50 ಕೋಟಿ ರೂಪಾಯಿ ಕೆಲಕ್ಷನ್ ಆಗಿತ್ತು. ಆದರೆ, ಮೂರು ಮತ್ತು ನಾಲ್ಕನೇ ದಿನ ಗಣನೀಯವಾಗಿ ಕಡಿಮೆ ಆಗಿದೆ ಎನ್ನಲಾಗಿದೆ. ಈ ಮೂಲಕ 'ತಂಗಲಾನ್' ಕಲೆಕ್ಷನ್ ಅನ್ನು 'ಕೃಷ್ಣಂ ಪ್ರಣಯ ಸಖಿ' ಓವರ್ ಟೇಕ್ ಮಾಡಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ.

More from Filmibeat

English summary
Ganesh movie Krishnam Pranaya Sakhi box office Collection day 4:
Read more about: ganesh box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X