'ಚಿರು' ಜತೆ ಮೊದಲ ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ಭಾವುಕ ಮಾತು

ನಟಿ ಕೃತಿ ಕರಬಂಧ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡವರಾದರೂ, ಅವರಿಗೆ ಕ್ಯಾಮೆರಾ ಎದುರಿಸುವ ಮೂಲಕ ನಟಿಯಾಗಲು ಅವಕಾಶ ನೀಡಿದ್ದು ಕನ್ನಡ ಚಿತ್ರರಂಗ. ಮಹೇಶ್ ಬಾಬು ನಿರ್ದೇಶನದ 'ಚಿರು' ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.

Recommended Video

ಚಿರಂಜೀವಿಯನ್ನು ನೋಡಿ ಭಾವುಕರಾದ ಯಶ್ | Chiranjeevi Sarja | Yash | | FILMIBEAT KANNADA

ಇತ್ತೀಚೆಗೆ ಹಿಂದಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರೂ, ತಮ್ಮನ್ನು ನಟಿಯಾಗಿ ಬೆಳೆಸಿದ ಕನ್ನಡ ಚಿತ್ರರಂಗದ ನಂಟನ್ನು ಮರೆತಿಲ್ಲ ಎಂಬುದನ್ನು ಆಗಾಗ ತೋರಿಸಿಕೊಳ್ಳುವ ಕೃತಿ, ಚಿರಂಜೀವಿ ಸರ್ಜಾ ಹಠಾತ್ ನಿಧನದಿಂದ ಆಘಾತಗೊಂಡಿದ್ದಾರೆ. ಈಗಲೂ ಈ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ. ಮುಂದೆ ಓದಿ...

ಕೃತಿ ಕರಬಂಧ ಸಂತಾಪ

ಕೃತಿ ಕರಬಂಧ ಸಂತಾಪ

ಚಿರಂಜೀವಿ ಸರ್ಜಾ ನಿಧನದ ಸುದ್ದಿ ಕೇಳಿ ಭಾನುವಾರ ಶೋಕ ವ್ಯಕ್ತಪಡಿಸಿದ್ದ ಅವರು, ಸೋಮವಾರ ಮಧ್ಯಾಹ್ನ ಮತ್ತೊಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಬಗ್ಗೆ ನಾನು ಯೋಚಿಸಿದಾಗಲೆಲ್ಲಾ ನನ್ನ ಹೃದಯ ನೋಯುತ್ತದೆ ಮತ್ತು ಅಳುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೃತಿ ಹೇಳಿದ್ದಾರೆ.

ನಂಬಲು ಆಗುತ್ತಿಲ್ಲ

ನಂಬಲು ಆಗುತ್ತಿಲ್ಲ

'ನನ್ನ ಮೊದಲ ಸಹನಟ, ಒಬ್ಬ ಅದ್ಭುತ ಮಾನವೀಯ ವ್ಯಕ್ತಿ, ಸಿಹಿಯಾದ ನಗುವಿನ ಮತ್ತು ಅತ್ಯುತ್ತಮ ಹೃದಯದ ಹುಡುಗ. ನೀವು ನಮ್ಮನ್ನು ಅಗಲಿದ್ದೀರಿ ಎಂಬುದನ್ನು ಈಗಲೂ ನಂಬಲು ಆಗುತ್ತಿಲ್ಲ' ಎಂದು ಕೃತಿ ನೋವು ಹಂಚಿಕೊಂಡಿದ್ದಾರೆ.

ಕನಸು ಎಂದುಕೊಂಡಿದ್ದೆ

ಕನಸು ಎಂದುಕೊಂಡಿದ್ದೆ

ಹಿಂದಿನ ದಿನ ನಡೆದಿದ್ದು ಕೆಟ್ಟ ಕನಸು ಇರಬಹುದಷ್ಟೇ ಎಂದುಕೊಂಡಿದ್ದೆ. ಅದೇ ಭರವಸೆಯೊಂದಿಗೆ ಈ ದಿನ ಬೆಳಿಗ್ಗೆ ಎದ್ದೆ. ಆದರೆ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೃತಿ ಬರೆದುಕೊಂಡಿದ್ದಾರೆ. 'ಇದೊಂದು ಕನಸಾಗಿರಲಿದೆ ಎಂಬ ಭರವಸೆಯೊಂದಿಗೆ ಬೆಳಿಗ್ಗೆ ಎದ್ದೆ. ಈಗಲೂ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ' ಎಂದು ಕೃತಿ ದುಃಖ ತೋಡಿಕೊಂಡಿದ್ದಾರೆ.

ಶಕ್ತಿ ಸಿಗುವ ಭರವಸೆ

ಶಕ್ತಿ ಸಿಗುವ ಭರವಸೆ

'ಮೇಘನಾ, ಧ್ರುವ, ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃದಯ ಮಿಡಿಯುತ್ತಿದೆ. ಈ ನಷ್ಟವನ್ನು ಭರಿಸುವ ಎಲ್ಲ ಶಕ್ತಿಯನ್ನೂ ಅವರು ಕಂಡುಕೊಳ್ಳುತ್ತಾರೆ ಎಂಬ ಭರವಸೆ ಹೊಂದಿದ್ದೇನೆ' ಎಂದು ಕೃತಿ ಹೇಳಿದ್ದಾರೆ.

More from Filmibeat

English summary
Actress Kriti Kharbanda who made her debute in Kannada in Chiru movie with Chiranjeevi Sarja wrote an emotional note about his sad demaise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X