"ದಿಕ್ಕುಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ"; ಕುಮಾರ್ ಬಂಗಾರಪ್ಪ

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಮಕ್ಕಳ ನಡುವಿನ ಕಿತ್ತಾಟ ಗೊತ್ತೇ ಇದೆ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಇದು ತಾರಕ್ಕೇರುತ್ತೆ. ಈ ಬಾರಿ ಲೋಕಸಭೆ ಚುನಾವಣೆ ವೇಳೆ ಈ ಮೂವರ ಜೊತೆಗೆ ಶಿವಣ್ಣನ ಹೆಸರು ಕೂಡ ಸೇರಿಕೊಂಡಿರುವುದು ವಿಪರ್ಯಾಸ.

ಶಿವಣ್ಣ ಪತ್ನಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ಶಿವಣ್ಣ ಹಾಗೂ ತಂಗಿ ಗೀತಾ ಶಿವರಾಜ್‌ಕುಮಾರ್ ವಿರುದ್ಧ ಕುಮಾರ್‌ ಬಂಗಾರಪ್ಪ ಡೈಲಾಗ್ ಮೇಲೆ ಡೈಲಾಗ್‌ಗಳನ್ನು ಬಿಡುತ್ತಲೇ ಇದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಶಿವಮೊಗ್ಗಕ್ಕೆ ಬರುತ್ತಾರೆ ಅನ್ನೋ ಟೀಕೆಯಿಂದ ಶುರುವಾಗಿದ್ದ ಈ ಕಿತ್ತಾಟ ಇನ್ನು ಮುಗಿಯುವ ಹಾಗೆ ಕಾಣಿಸುತ್ತಿಲ್ಲ.

Kumar Bangarappa another post after Shivarajkumar fans protest in his house

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಗೆಲ್ಲುತ್ತಿದ್ದಂತೆ ಕುಮಾರ್ ಬಂಗಾರಪ್ಪ ಶುಭ ಕೋರಿ ಪೋಸ್ಟ್ ಮಾಡಿದ್ದರು. ಈ ವೇಳೆ "ನನ್ನ ತಂಗಿಯ ಗಂಡ ಡಾ. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ. ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು" ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಇದು ಶಿವಣ್ಣನ ಅಭಿಮಾನಿಗಳನ್ನು ಕೆರಳಿಸಿತ್ತು. ಹೀಗಾಗಿ ಇಂದು (ಜೂನ್ 8) ಶಿವಣ್ಣನ ಫ್ಯಾನ್ಸ್ ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಶಿವಣ್ಣ ಅಭಿಮಾನಿಗಳು ಕುಮಾರ್ ಬಂಗಾರಪ್ಪ ಹೊರಬಂದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಎಳೆದೊಯ್ದಿದ್ದರು.

ಈ ಬೆನ್ನಲ್ಲೇ ಕುಮಾರ್ ಬಂಗಾರಪ್ಪ ಮತ್ತೊಂದು ಪೋಸ್ಟ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಬ್ರವಾಹನ ಸಿನಿಮಾದ "ಅಬ್ಬರಿಸಿ ಬೊಬ್ಭಿರಿದರಿಲ್ಲಾರಿಗೂ ಭಯವಿಲ್ಲ.." ಅಂತ ಡೈಲಾಗ್ ಬಿಟ್ಟು ಎಚ್ಚರಿಕೆಯನ್ನು ಕೊಟ್ಟು ಪೋಸ್ಟ್ ಮಾಡಿದ್ದಾರೆ. ಇದು ಶಿವಣ್ಣ ಹಾಗೂ ಗೀತಕ್ಕಗೆ ಪರೋಕ್ಷವಾಗಿ ಕೊಟ್ಟಿರೋ ತಿರುಗೇಟು ಅಂತ ನೆಟ್ಟಿಗರು ಮಾತಾಡುವುದಕ್ಕೆ ಶುರು ಮಾಡಿದ್ದಾರೆ.

ಅಂದ್ಹಾಗೆ, ಕುಮಾರ್ ಬಂಗಾರಪ್ಪ ಮಾಡಿರುವ ಪೋಸ್ಟ್‌ನಲ್ಲಿ ಏನಿದೆ ಅಂದರೆ, "ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು" ಎಂದು ಕುಮಾರ್ ಬಂಗಾರಪ್ಪ ಪೋಸ್ಟ್ ಮಾಡಿದ್ದಾರೆ.

ದಿವಂಗತ ಬಂಗಾರಪ್ಪನವರ ಮಕ್ಕಳ ನಡುವಿನ ವೈಮನಸ್ಸು ತಿಳಿದಿದೆ. ಅದರಲ್ಲೂ ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ ಇಬ್ಬರೂ ಈ ಹಿಂದೆ ಕೂಡ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದರು. ಈ ಲೋಕಸಭೆ ಚುನಾವಣೆಯಲ್ಲಿ ಮತ್ತೆ ತಾರಕ್ಕೇರಿದೆ. ಅದರಲ್ಲೂ ಕುಮಾರ್ ಬಂಗಾರಪ್ಪ ಏಟಿನ ಮೇಲೆ ತಿರುಗೇಟು ಕೊಡುತ್ತಲೇ ಇದ್ದಾರೆ.

More from Filmibeat

English summary
Kumar Bangarappa post about Shivarajkumar fans protest:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X