20 ವರ್ಷದ ಹಿಂದೆ ರವಿಚಂದ್ರನ್ ಆಫರ್ ಕೊಟ್ಟ ಆಫರ್ ರಿಜೆಕ್ಟ್ ಮಾಡಿದ್ದೇಕೆ ಲಕ್ಷ್ಮಿ ಗೋಪಾಲಸ್ವಾಮಿ?

ಕ್ರೇಜಿಸ್ಟಾರ್ ರವಿಚಂದ್ರನ್ ಕೋರ್ಟ್ ರೂಮ್ ಡ್ರಾಮ ಜಾನರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಆ ಸಿನಿಮಾದ ಶೂಟಿಂಗ್ ಮುಗಿದು ಬಿಡುಗಡೆಗೂ ಸಜ್ಜಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಬಹುಭಾಷಾ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾವೇ 'ದಿ ಜಡ್ಜ್‌ಮೆಂಟ್'.

'ದಿ ಜಡ್ಜ್‌ಮೆಂಟ್' ಸಿನಿಮಾ ಕ್ರೇಜಿಸ್ಟಾರ್ ವೃತ್ತಿ ಬದುಕಿನ ವಿಶಿಷ್ಠ ಸಿನಿಮಾ. ಸುಮಾರು ಒಂದು ವರ್ಷಗಳ ಕಾಲ ಈ ಸಿನಿಮಾವನ್ನು ಶೂಟಿಂಗ್ ಮಾಡಿಲಾಗಿದೆ. ರವಿಚಂದ್ರನ್ ಹಾಗೂ ಲಕ್ಷ್ಮಿ ಗೋಪಾಲಸ್ವಾಮಿ ಜೊತೆ ದೂದ್ ಪೇಡಾ ದಿಗಂತ್, ಮೇಘನಾ ಗಾಂವ್ಕರ್ ಕೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Lakshmi Gopalaswamy Turned Down Crazy Star Ravichandran s Film Before The Judgement

ಈ ಸಿನಿಮಾ ಇದೇ ಮೇ 24ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಸಹ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಕಾಲೆಳೆದಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಈ ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದರಂತೆ. ಆದರೆ, ರವಿಚಂದ್ರನ್‌ಗೆ ಹೆದರಿಕೊಂಡು ಆ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರಂತೆ. ಆ ಘಟನೆಯನ್ನು ಕ್ರೇಜಿಸ್ಟಾರ್ 'ದಿ ಜಡ್ಜ್‌ಮೆಂಟ್' ಸಿನಿಮಾ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ.

"ನಾನು 20 ವರ್ಷದ ಹಿಂದೆ ನಾನು ಒಂದು ಸಿನಿಮಾ ಮಾಡುತ್ತೀರಾ ಅಂತ ಕೇಳಿದ್ದೆ. ರವಿಚಂದ್ರನ್ ಜೊತೆನಾ ಅಂತ ಎಕ್ಸ್‌ಪ್ರೆಷನ್ ಕೊಟ್ಟವರು ಇವರು. ನನ್ನ ಹೆಂಡ್ತಿಗಿಂತ ಜಾಸ್ತಿ ಎಕ್ಸ್‌ಪ್ರೆಷನ್ ಕೊಟ್ಟಿದ್ದು ಇವರೇನೆ. ನಾನು ಒಂದು ಸಾರಿ ಹೀಗಂದರೆ ಸಾಕು ಓಡಿ ಹೋಗುತ್ತಾರೆ. " ಎಂದು ನಟಿ ಲಕ್ಮಿ ಗೋಪಾಲಸ್ವಾಮಿ ತಮ್ಮ ಸಿನಿಮಾ ತಿರಸ್ಕರಿಸಿದ್ದನ್ನು ರಿವೀಲ್ ಮಾಡಿದ್ದಾರೆ.

ಲಕ್ಷ್ಮಿ ಗೋಪಾಲಸ್ವಾಮಿಯವರ ವ್ಯಕ್ತಿತ್ವಕ್ಕೆ ತಾವು ಮಾಡುತ್ತಿದ್ದ ಸಿನಿಮಾ ಸೂಟ್ ಆಗುತ್ತಿರಲಿಲ್ಲ. ತಾನು ಮಾಡುವ ಡ್ಯಾನ್ಸ್ ಶೈಲಿಯೇ ಬೇರೆ ಎಂದು ಇದೇ ವೇದಿಕೆ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. "ಪಾಪ ಲಕ್ಷ್ಮಿ ಗೋಪಾಲಸ್ವಾಮಿ ಡ್ಯಾನ್ಸ್ ಮಾಡಿಕೊಂಡಿದ್ದರು. ಆದರೆ, ನಾನು ಮಾಡುವ ಡ್ಯಾನ್ಸ್ ಬೇರೆ. ಅದಕ್ಕೆಲ್ಲಿ ಸೂಟ್ ಆಗುತ್ತಾರೆ ಅವರು ಪಾಪ. ಆದರೆ, ನೀವು ತೆಗೆದ ಬಳಿಕ ಅನಿಸುತ್ತಿದೆ, ಅವರೇ ಸೂಟ್ ಆಗಿರೋರು. ನೀವು ನಾಲ್ಕು ಜನ ಹೆಂಡ್ತಿಯರನ್ನು ಕೊಟ್ಟರೂ ಮುಟ್ಟುವುದಕ್ಕೆ ಬಿಡುತ್ತಿರಲಿಲ್ಲ." ಎಂದು 'ದಿ ಜಡ್ಜ್‌ಮೆಂಟ್' ಸಿನಿಮಾದ ನಿರ್ದೇಶಕರ ಕಾಲೆಳೆದಿದ್ದಾರೆ.

Lakshmi Gopalaswamy Turned Down Crazy Star Ravichandran s Film Before The Judgement

ಇತ್ತ ಲಕ್ಷ್ಮಿ ಗೋಪಾಲಸ್ವಾಮಿ ಕೂಡ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದೇಕೆ ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ರವಿಚಂದ್ರನ್ ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ನನಗೆ ಹೆದರಿಕೆ ಇತ್ತು. ಅವರು ಹೇಳಿದ್ದು 20 ವರ್ಷದ ಕಥೆ. ಆಗಿನ ಕಥೆನೇ ಬೇರೆ. ಈವಾಗ ಅವರು ಯಾವ ತರ ಇರುತ್ತಾರೋ? ನಿಜವಾಗಲೂ ನನಗೆ ಗೊತ್ತಿರಲಿಲ್ಲ. ಮೊದಲು ಸರ್ ಪರ್ವಾಗಿಲ್ಲ ರೀ.. 25 ಟೇಕ್ ತಗೊಳ್ಳಿ ಅವಸರ ಏನಿದೆ? ಅಂದರು. ಅಲ್ಲಿಂದ ನಾನು ತುಂಬಾನೇ ಕೂಲ್ ಆಗಿದೆ." ಎಂದು ನಟಿ ಲಕ್ಷ್ಮಿ ಗೋಪಾಲಸ್ವಾಮಿ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಹೇಳಿಕೊಂಡಿದ್ದಾರೆ.

More from Filmibeat

English summary
Actor Ravichandran disclosed that Lakshmi Gopalaswamy declined a movie proposal prior to their partnership in 'The Judgement'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X