James teaser : ಅಪ್ಪುಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ: ಹೆಂಗೈತೆ ಜೇಮ್ಸ್ ಟೀಸರ್

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನ ನಡುವೆ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುವ ಸಂದರ್ಭ ಬಂದೇ ಬಿಟ್ಟಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಷ್ಟು ದಿನ ಪುನೀತ್ ಅಭಿಮಾನಿಗಳು ಜೇಮ್ಸ್ ಟೀಸರ್ ಹಾಗೂ ಟ್ರೈಲರ್ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಜನವರಿ 26ರಂದು ಜೇಮ್ಸ್ ಫಸ್ಟ್ ಲುಕ್ ರಿಲೀಸ್ ಆದಲ್ಲಿಂದ ಅಪ್ಪು ಅಭಿಮಾನಿಗಳು ಟೀಸರ್ ನೋಡಲು ಕಾತರದಿಂದ ಕಾಯುತ್ತಿದ್ದರು. ಆ ಘಳಿಗೆ ಈಗ ಬಂದೇ ಬಿಟ್ಟಿದೆ. ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್‌' ಚಿತ್ರದ ಮೊದಲ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ 'ಜೇಮ್ಸ್' ಬಗ್ಗೆ ನಿರೀಕ್ಷೆಗಳು ಬೆಟ್ಟದಷ್ಟಿವೆ. ಅಭಿಮಾನಿಗಳು ಕೊನೆಯ ಬಾರಿ ಪುನೀತ್ ರಾಜ್‌ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಮಾರ್ಚ್ 17, ಪುನೀತ್ ಹುಟ್ಟುಹಬ್ಬದಂದೇ 'ಜೇಮ್ಸ್' ಬಿಡುಗಡೆಯಾಗಲಿ ಎಂದು ಎದುರು ನೋಡುತ್ತಿದ್ದಾರೆ. ಚಿತ್ರತಂಡ ಕೂಡ ಈ ಪ್ರಯತ್ನಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಈ ಮಧ್ಯೆ 'ಜೇಮ್ಸ್' ಟೀಸರ್ ರಿಲೀಸ್ ಮಾಡಿದ್ದು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

 'ಜೇಮ್ಸ್' ಟೀಸರ್ ಸಿಕ್ಕಾಪಟ್ಟೆ ಖಡಕ್

'ಜೇಮ್ಸ್' ಟೀಸರ್ ಸಿಕ್ಕಾಪಟ್ಟೆ ಖಡಕ್

ಬಹು ನಿರೀಕ್ಷೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಕಾದು ಕೂತಿದ್ದ ಅಪ್ಪು ಅಭಿಮಾನಿಗಳಿಗೆ ಬೇರೆಯದ್ದೇ ಲೆವೆಲ್ ಸಿನಿಮಾವಿದು ಅಂತ ಟೀಸರ್ ನೋಡಿದ ಮೇಲೆ ಅನಿಸಿದೆ. ಪುನೀತ್ ರಾಜ್‌ಕುಮಾರ್ ಖಡಕ್ ಎಂಟ್ರಿ. ಪವರ್‌ಫುಲ್ ಆಕ್ಷನ್ ಸೀಕ್ವೆನ್ಸ್‌ ಸಖತ್ತಾಗಿದೆ. ಚೇಸಿಂಗ್, ಗನ್ಸ್, ಆಕ್ಷನ್ ಎಲ್ಲವೂ ಮಸ್ತ್ ಆಗಿದೆ. ಇಲ್ಲಿವರೆಗೂ ತೆರೆಕಂಡಿದ್ದ ಅಪ್ಪು ಸಿನಿಮಾಗಳಿಗಿಂತ ಈ ಸಿನಿಮಾ ಮತ್ತಷ್ಟು ಪವರ್‌ಫುಲ್ ಆಗಿರುತ್ತೆ ಅನ್ನುವುದನ್ನು ಟೀಸರ್ ನೋಡಿಯೇ ಹೇಳಬಹುದು.

 'ಜೇಮ್ಸ್' ಸಿನಿಮಾದ ಖಡಕ್ ಡೈಲಾಗ್

'ಜೇಮ್ಸ್' ಸಿನಿಮಾದ ಖಡಕ್ ಡೈಲಾಗ್

'ಜೇಮ್ಸ್' ಸಿನಿಮಾ ಟೀಸರ್ ಮಸ್ತ್ ಆಗಿದೆ. ಈ ಸಿನಿಮಾ ಪವರ್‌ಫುಲ್ ಆಕ್ಷನ್ ಸೀನ್ ಅಷ್ಟೇ ಅಲ್ಲ. ಪವರ್‌ಫುಲ್ ಡೈಲಾಗ್ ಕೂಡ ಇರುತ್ತೆ ಅನ್ನುವುದ ಟೀಸರ್‌ ಕೊನೆಯಲ್ಲಿ ತೋರಿಸಲಾಗಿದೆ. ವಿಶೇಷ ಅಂದರೆ, 'ಜೇಮ್ಸ್' ಟೀಸರ್‌ ಕೊನೆಯಲ್ಲಿ ಶಿವಣ್ಣ ಅಪ್ಪು ನೀಡಿದ ಧ್ವನಿಯನ್ನು ಕೇಳಬಹುದಾಗಿದೆ. ಪುನೀತ್ ರಾಜ್‌ಕುಮಾರ್ ಪವರ್‌ಫುಲ್ ಎಂಟ್ರಿ ಪವರ್‌ಸ್ಟಾರ್ ಫ್ಯಾನ್ಸ್‌ಗೆ ಮಸ್ತ್ ಕಿಕ್ ಕೊಡುತ್ತಿದೆ.

5 ಭಾಷೆಯಲ್ಲಿ 'ಜೇಮ್ಸ್' ರಿಲೀಸ್

ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕೊನೆಯ 'ಜೇಮ್ಸ್' ಅನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ 'ಜೇಮ್ಸ್' ಚಿತ್ರದ ಟೀಸರ್ ಅನ್ನು ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೂರು ಭಾಷೆಯಲ್ಲೂ ರಿಲೀಸ್ ಆಗಿರುವ ಟೀಸರ್‌ಗೆ ಮಸ್ತ್ ರೆಸ್ಪಾನ್ಸ್ ಸಿಗುತ್ತಿದೆ. ಟೀಸರ್ ಬಿಡುಗಡೆಗೂ ಮುನ್ನವೇ 24 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

 'ಜೇಮ್ಸ್‌'ಗೆ ಶಿವಣ್ಣ, ರಾಘಣ್ಣ ಧ್ವನಿ

'ಜೇಮ್ಸ್‌'ಗೆ ಶಿವಣ್ಣ, ರಾಘಣ್ಣ ಧ್ವನಿ

ಜೇಮ್ಸ್ ಸಿನಿಮಾದ ಡಬ್ಬಿಂಗ್ ದೊಡ್ಡ ಸವಾಲೆನಿಸಿತ್ತು. ಈ ಸಿನಿಮಾ ಮುಗಿಸಿ, ಇನ್ನೇನು ಡಬ್ಬಿಂಗ್ ಮಾಡಬೇಕು ಅನ್ನುವಷ್ಟರಲ್ಲೇ ಅಪ್ಪು ನಮ್ಮಿಂದ ದೂರವಾದರು. ಹೀಗಾಗಿ ಚಿತ್ರತಂಡ ಡಬ್ಬಿಂಗ್ ವೇಳೆ ಅಪ್ಪು ಹೇಳಿದ ಡೈಲಾಗ್ ಅನ್ನೇ ಉಳಿಸಿಕೊಳ್ಳಲು ಯತ್ನಿಸಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈಗಾಗಿ ಪುನೀತ್ ರಾಜ್‌ಕುಮಾರ್‌ಗೆ ಶಿವಣ್ಣ ಡಬ್ ಮಾಡಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ವಿಶೇಷ ಪಾತ್ರದಲ್ಲಿ ನಟಿಸಿರುವುದರಿಂದ ಆ ಪಾತ್ರಗಳಿಗೂ ಡಬ್ಬಿಂಗ್ ಮಾಡಿದ್ದಾರೆ. ಡಬ್ಬಿಂಗ್ ಮುಗಿಸಿದ ಬಳಿಕ "ಎರಡೂವರೆ ದಿನದಲ್ಲಿ ಡಬ್ಬಿಂಗ್ ಮುಗಿಸಿದ್ದೇನೆ. ಅಪ್ಪು ವಾಯ್ಸ್ ಮ್ಯಾಚ್ ಮಾಡುವುದು ತುಂಬಾನೇ ಕಷ್ಟ. ಎಲ್ಲರಿಗೂ ಇಷ್ಟವಾಗಬಹುದು ಅಂತ ಅಂದುಕೊಂಡಿದ್ದೇನೆ. ಶಿವಣ್ಣ ಪ್ರತಿಕ್ರಿಯೆ ನೀಡಿದ್ದರು.

More from Filmibeat

English summary
James Teaser: The official teaser of James starring late actor Puneeth Rajkumar released on February 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X