ಗುರುಪ್ರಸಾದ್ 2ನೇ ಪತ್ನಿ ಸುಮಿತ್ರಾ ಗರ್ಭಿಣಿ ಅನ್ನೋದು ಸುಳ್ಳು; 6 ತಿಂಗಳು ಬೇರೆ ಇದ್ದಿದ್ದಕ್ಕೆ ಕಾರಣ ಬೇರೆನೇ ಇದೆ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ಗುರುಪ್ರಸಾದ್ ಅಗಲಿದ ಸುದ್ದಿಯನ್ನು ಅವರ ಕುಟುಂಬಕ್ಕೆ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಇನ್ನೂ ಇಲ್ಲ. ಗುರುಪ್ರಸಾದ್ ದಿಢೀರನೇ ಬದುಕಿಗೆ ಅಂತ್ಯ ಹಾಡಿದ ಸುದ್ದಿ ಚಿತ್ರರಂಗಕ್ಕೂ ದೊಡ್ಡ ಶಾಕ್. ಈ ಸಂದರ್ಭದಲ್ಲಿ ಅವರ ಕೌಟುಂಬಿಕ ಜೀವನದ ಬಗ್ಗೆ ಒಂದಿಷ್ಟು ಸುದ್ದಿಗಳು ಹರಿದಾಡಿದ್ದವು. ಇದು ಅವರ ಕುಟುಂಬಕ್ಕೆ ನೋವುಂಟು ಮಾಡಿದೆ.

ಗುರುಪ್ರಸಾದ್ ಜೀವನ ಶೈಲಿಯೇ ಬೇರೆ ಇತ್ತು. ಸಿನಿಮಾ ಅಂತ ಬಂದಾಗ ಕುಟುಂಬವನ್ನೂ ಮರೆತು ಅದರೊಳಗೆ ಹೊಕ್ಕಿಬಿಡುತ್ತಿದ್ದರು. ಹೀಗಾಗಿ ಅವರ ಕುಟುಂಬ ಜೀವನನ್ನು ಸಾಕಷ್ಟು ಖಾಸಗಿಯಾಗಿಯೇ ಇಟ್ಟಿದ್ದರು. ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದು, ಎರಡನೇ ಮದುವೆ ಆಗಿದ್ದರ ಬಗ್ಗೆ ಒಮ್ಮೆ ಓಪನ್ ಆಗಿ ಮಾತಾಡಿದ್ದು ಬಿಟ್ಟರೆ, ಎಲ್ಲಿಯೂ ಫ್ಯಾಮಿಲಿ ಲೈಫ್ ಬಗ್ಗೆ ಹೇಳಿಕೊಂಡಿದ್ದಿಲ್ಲ.

Late director Guruprasad second wife Sumithra is not pregnant and has no health problems

ಆದರೆ, ಗುರುಪ್ರಸಾದ್ ನೇಣಿಗೆ ಶರಣಾದಾಗ ಒಂದು ಸುದ್ದಿ ಹರಿದಾಡಿತ್ತು. ಗುರುಪ್ರಸಾದ್ ಎರಡನೇ ಪತ್ನಿ ಸುಮಿತ್ರಾ ಎರಡನೇ ಬಾರಿ ಗರ್ಭಿಣಿಯಾಗಿದ್ದಾರೆ. ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ತವರು ಮನೆಗೆ ಕಳುಹಿಸಲಾಗಿದೆ. ಇಂತಹ ಒಂದಿಷ್ಟು ಸುದ್ದಿಗಳು ವರದಿಯಾಗಿದ್ದವು. ಆದರೆ, ಈ ಎಲ್ಲಾ ಸುದ್ದಿಗಳು ಸುಳ್ಳು. ಇದರಲ್ಲಿ ಸತ್ಯಾಂಶವಿಲ್ಲ. ಈ ಸುದ್ದಿಗಳಿಂದ ಅವರ ಪತ್ನಿ ಮಾನಸಿಕವಾಗಿ ನೊಂದಿದ್ದಾರೆಂದು ಫಿಲ್ಮಿಬೀಟ್ ಕನ್ನಡಕ್ಕೆ ಅವರ ಆಪ್ತವಲಯಗಳು ತಿಳಿಸಿವೆ.

ಗುರುಪ್ರಸಾದ್ ಸಾವಿನಲ್ಲೂ ಕೆಲವರು ಬೇಳೆ ಬೇಯಿಸಿಕೊಂಡಿದ್ದರು. ಗುರುಪ್ರಸಾದ್ ಅಗಲಿಕೆ ನೋವಿನಲ್ಲಿ ಅವರ ಬಗ್ಗೆ ನೆಗೆಟಿವ್ ಮಾತುಗಳನ್ನು ಆಡಿದ್ದರು. ಆ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಆಗುತ್ತಿದೆ. ಗುರುಪ್ರಸಾದ್‌ಗೆ ಆಪ್ತರಾಗಿದ್ದವರು ಕೂಡ ಇದನ್ನು ಖಂಡಿಸಿದ್ದಾರೆ. ಇದರೊಂದಿಗೆ ಗುರುಪ್ರಸಾದ್ ಅವರ ಎರಡನೇ ಪತ್ನಿ ಸುಮಿತ್ರಾ ಗರ್ಭಿಣಿ ಅಲ್ಲ. ಅವರಿಗೆ ಮೂರುವರೆ ವರ್ಷದ ಒಬ್ಬರು ಮಗಳು ಮಾತ್ರ ಇದ್ದಾಳೆ. ಸುಮ್ಮನೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Late director Guruprasad second wife Sumithra is not pregnant and has no health problems

ಈ ಸುದ್ದಿಯ ಜೊತೆ ಇನ್ನೊಂದು ಸುದ್ದಿ ಕೂಡ ಹಬ್ಬಿತ್ತು. ಗುರುಪ್ರಸಾದ್ ಸಂಬಂಧ ಎರಡನೇ ಪತ್ನಿಯೊಂದಿಗೂ ಚೆನ್ನಾಗಿರಲಿಲ್ಲ. ಸುಮಿತ್ರಾ ಆರೋಗ್ಯ ಕೂಡ ಸರಿಯಿಲ್ಲ. ಹೀಗಾಗಿ ಅವರ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದರು ಎಂದು ಗುಲ್ಲೆದ್ದಿತ್ತು. ಇದೂ ಕೂಡ ಸುಳ್ಳು ಎಂದು ಆಪ್ತರು ಹೇಳುತ್ತಾರೆ. ಇಬ್ಬರ ನಡುವಿನ ಸಂಬಂಧ ಚೆನ್ನಾಗಿತ್ತು. ಅವರ ಆರೋಗ್ಯ ಕೂಡ ಚೆನ್ನಾಗಿದೆ. ಸುಖಾ ಸುಮ್ಮನೆ ಸುಳ್ಳು ಸುದ್ದಿಗಳು ಹಬ್ಬಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ, ಆರು ತಿಂಗಳಿನಿಂದ ಪತ್ನಿಯಿಂದ ಗುರುಪ್ರಸಾದ್ ಯಾಕೆ ದೂರವಿದ್ದರು ಅನ್ನುವ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ.

ಗುರುಪ್ರಸಾದ್ ಮೊದಲನೇ ಪತ್ನಿಗೆ ವಿಚ್ಛೇದನ ನೀಡುವ ಸಂದರ್ಭದಲ್ಲಿ ಮನೆಯನ್ನು ಮಾರಿಕೊಂಡಿದ್ದರು. ಹೀಗಾಗಿ ಅವರಿಗೆ ಉಳಿದುಕೊಳ್ಳುವುದಕ್ಕೆ ಮನೆಯಿರಲಿಲ್ಲ. ಆರಂಭದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೂ, ಸಾಲಗಾರರು ಕಾಟ ಕೊಡುತ್ತಿದ್ದರು. ಹೀಗಾಗಿ ಮನೆಯನ್ನು ಆಗಾಗ ಬದಲಾವಣೆಯನ್ನು ಮಾಡುತ್ತಿದ್ದರು. ಇದರಿಂದ ಅವರ ಪತ್ನಿ ಹಾಗೂ ಮಗುವಿಗೆ ತೊಂದರೆ ಆಗಬಹುದು ಅನ್ನೋ ಕಾರಣಕ್ಕೆ ಸುಮಿತ್ರಾ ಅವರ ಅಮ್ಮನ ಮನೆಯಲ್ಲಿ ಬಿಟ್ಟಿದ್ದರು ಅಷ್ಟೇ ಎನ್ನುತ್ತಾರೆ.

ಹಾಗೇ ಗುರುಪ್ರಸಾದ್ ಸಿನಿಮಾದಲ್ಲಿ ಮಗ್ನರಾದರೆ, ಮನೆಯಲ್ಲಿ ಇರುತ್ತಿರಲಿಲ್ಲ. ಹೊಟೇಲ್‌ನಲ್ಲಿ ರೂಮ್ ಮಾಡಿಕೊಂಡು ಚಿತ್ರತಂಡದೊಂದಿಗೆ ಆರಾರು ತಿಂಗಳು ಇದ್ದು ಬಿಡುತ್ತಿದ್ದರು. ಹೆಚ್ಚು ಸಮಯ ತಂಡದೊಂದಿಗೆ ಕಳೆಯುತ್ತಿದ್ದರಿಂದ ಹೊಟೇಲ್‌ ರೂಮ್‌ಗಳಿ ಹೆಚ್ಚು ಇರುತ್ತಿದ್ದರು. ಅಲ್ಲದೆ, ಮಾದನಾಯಕನ ಹಳ್ಳಿಯಲ್ಲಿ ಇರುವ ಬಾಡಿಗೆ ಅಪಾರ್ಟ್‌ಮೆಂಟ್ ಅನ್ನು ಅವರ ವಸ್ತುಗಳನ್ನು ಇಡಲು ಬಳಸಿಕೊಳ್ಳುತ್ತಿದ್ದರು. ಅಲ್ಲಿ ಅವರು ಹೆಚ್ಚಾಗಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Late director Guruprasad second wife Sumithra is not pregnant and has no health problems;
Read more about: guruprasad wife filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X