ಅಗಲಿದ ಹರೀಶ್ ರೈ ಕ್ಯಾನ್ಸರ್ ಎಂದು ತಿಳಿದಾಗ ದರ್ಶನ್ ಏನ್ಮಾಡಿದ್ರು? ಆ ಪೋನ್ ಸಂಭಾಷಣೆಯಲ್ಲಿ ನಡೆದಿದ್ದೇನು?
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಗೂ ವಿವಾದಾತ್ಮಕ ನಟ ಹರೀಶ್ ರೈ. ಇತ್ತೀಚೆಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಹರೀಶ್ ರೈ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಟೈಲಿಶ್ ವಿಲನ್. ಕನ್ನಡದ ಹಲವು ಸೂಪರ್‌ಸ್ಟಾರ್‌ಗಳೊಂದಿಗೆ ಹರೀಶ್ ರೈ ಖಳನಾಯಕನಾಗಿ ನಟಿಸಿ ಜನ ಮನ ಗೆದ್ದಿದ್ದರು. ರಾಕಿ ಭಾಯ್ ಯಶ್ ನಟಿಸಿದ 'ಕೆಜಿಎಫ್' ಹರೀಶ್ ರೈಗೆ ಹೊಸ ಇಮೇಜ್ ಅನ್ನು ಕೊಟ್ಟಿತ್ತು. ಕೊನೆವರೆಗೂ ಅವರನ್ನೂ 'ಕೆಜಿಎಫ್ ಚಾಚ' ಅಂತಲೇ ಜನಪ್ರಿಯರಾಗಿದ್ದರು.
ಎಲ್ಲವೂ ಸರಿಯಾಗಿಯೇ ಇತ್ತು. ಹರೀಶ್ ರೈಗೆ 'ಕೆಜಿಎಫ್' ಸಿನಿಮಾದಿಂದ ಒಳ್ಳೆಯ ಹೆಸರು ಕೂಡ ಬಂದಿತ್ತು. ಇನ್ನೇನು ಹೊಸ ಇನ್ನಿಂಗ್ಸ್ ಶುರುವಾಯ್ತು ಅನ್ನೋವಾಗಲೇ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು. ಒಂದಿಷ್ಟು ದಿನ ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಬಳಿಕ ಹರೀಶ್ ರೈ ಅವರು ಚಿಕಿತ್ಸೆಗಾಗಿ ಆರ್ಥಿಕ ನೆರವು ಕೇಳಿದ್ದರು. ಆಗ ಚಿತ್ರರಂಗ ಹಾಗೂ ಇಡೀ ಕರ್ನಾಟಕವೇ ನೆರವಿಗೆ ಮುಂದೆ ಬಂದಿತ್ತು.

ಹರೀಶ್ ರೈ ಅನಾರೋಗ್ಯದಿಂದ ಬಳಲುತ್ತಿದ್ದಾಗ ಯಶ್ ಜೊತೆ ದರ್ಶನ್ ಕೂಡ ನೆರವಿಗೆ ಬಂದಿದ್ದರು. ದರ್ಶನ್ ಹಾಗೂ ಹರೀಶ್ ರೈ ಇಬ್ಬರೂ 'ಮೆಜೆಸ್ಟಿಕ್' ಸಿನಿಮಾದಿಂದ ಸ್ನೇಹಿತರು. ಹರೀಶ್ ರೈ ಇಂತಹದ್ದೊಂದು ಖಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ದರ್ಶನ್ ಫೋನ್ ಆರೋಗ್ಯ ವಿಚಾರಿಸಿದರು. ಆ ವೇಳೆ ಇವರಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ಪುತ್ರ ರೋಷನ್ ರೈ ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
ದರ್ಶನ್ ಹಾಗೂ ಹರೀಶ್ ರೈ ಅವರ ಸ್ನೇಹ ಸುಮಾರು 25 ರಿಂದ 30 ವರ್ಷಗಳಷ್ಟು ಹಳೆಯದು. ಅಲ್ಲಿಂದ ಅವರ ಸ್ನೇಹ ಹೇಗಿದೆ ಅನ್ನೋದನ್ನು ಮಗನೊಂದು ಹರೀಶ್ ರೈ ಹಂಚಿಕೊಂಡಿದ್ದರಂತೆ. "ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾ ಮಾಡುವುದಕ್ಕಿಂತಲೂ ಮುಂಚೆಯಿಂದಲೇ ಅಣ್ಣ ಅಂತ ಕರೆಯುತ್ತಿದ್ದರು. ಆಗ ಅವರ ಹತ್ತಿರ ಕಾರು ಇರಲಿಲ್ಲ. ಆಗ ನಮ್ಮ ಅಪ್ಪನ ಹತ್ತಿರ ಮಾರುತಿ ಕಾರು ಹಳದಿ ಬಣ್ಣದ್ದು ಇತ್ತು. ನಮ್ಮ ಅಪ್ಪನೇ ದರ್ಶನ್ ಅವರನ್ನು ಸೆಟ್ಟಿಗೆ ಹಾಗೂ ಮನೆಗೆ ಪಿಕ್ ಅಂಡ್ ಡ್ರಾಪ್ ಮಾಡುತ್ತಿದ್ದರು. ಆಗಲೇ ನಮ್ಮಪ್ಪ ಹಾಗೂ ಅವರು ಕ್ಲೋಸ್ ಆಗಿದ್ದರು. ಇದು ನಮ್ಮಪ್ಪನೇ ನನಗೆ ಹೇಳಿದ್ದು." ಎಂದಿದ್ದಾರೆ.
ಹರೀಶ್ ಅವರ ಕುಟುಂಬಕ್ಕೂ ದರ್ಶನ್ ತೀರ ಹಳೆಯ ಪರಿಚಯ ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಮ್ಮ ಅಣ್ಣ ಅಮ್ಮನ ಹೊಟ್ಟೆಯಲ್ಲಿ ಇದ್ದಾಗ ಅಕ್ಕ ಹೇಗಿದೆ ಮಗು? ಚೆನ್ನಾಗಿ ಊಟ ಮಾಡುತ್ತಿದ್ದೀರಾ? ಅಂತೆಲ್ಲ ನಮ್ಮ ಅಮ್ಮನಿಗೆ ಕೇರ್ ಮಾಡುತ್ತಿದ್ದರು. ನಮ್ಮ ಅಪ್ಪ ಹಾಗೂ ದರ್ಶನ್ ಅವರಂತೂ ತುಂಬಾನೇ ಕ್ಲೋಸ್ ಆಗಿದ್ದರು. ಮೆಜೆಸ್ಟಿಕ್ ಸಮಯದಲ್ಲಿ ಅಣ್ಣ ಅನ್ನುತ್ತಿದ್ದರು. ಚಕ್ರವರ್ತಿ ಟೈಮ್‌ನಿಂದ ಗುರುಗಳೇ ಅಂತ ಕರೆಯುವುದಕ್ಕೆ ಶುರು ಮಾಡಿದರು. ಏನೇ ಇದ್ದರೂ ಅವರ ಬರ್ತ್‌ಡೇಯನ್ನು ಮಾತ್ರ ನಮ್ಮ ಅಪ್ಪ ಮಿಸ್ ಮಾಡುತ್ತಿರಲಿಲ್ಲ." ಎಂದು ನೆನಪಿಸಿಕೊಂಡಿದ್ದಾರೆ.

ಹರೀಶ್ ರೈಗೆ ಆರೋಗ್ಯ ಸರಿಯಿಲ್ಲ ಎಂದು ತಿಳಿದಾಗ ದರ್ಶನ್ ಫೋನ್ ಮಾಡಿ ಮಾತಡಿದ್ದರು. ಅಷ್ಟೇ ಅಲ್ಲದೆ ಆರ್ಥಿಕ ನೆರವನ್ನು ನೀಡಿದ್ದನ್ನು ಪುತ್ರ ನೆನಪಿಸಿಕೊಂಡಿದ್ದಾರೆ. "ನಮ್ಮ ತಂದೆಗೆ ಹುಷಾರಿಲ್ಲದೇ ಇದ್ದಾಗ ಟಿವಿಯಲ್ಲಿ ಮೊದಲನೇ ಬಾರಿ ಬಂದಿತ್ತಲ್ಲ. ಆಗ ಅವರು ಏನಾಯ್ತು ಗುರುಗಳೇ? ಒಂದು ಮಾತು ತಿಳಿಸಲಿಲ್ಲ ನೀವು. ಏನಾದರೂ ಹೇಳಿದರೆ, ನಾವು ನೋಡುತ್ತಿರಲಿಲ್ವಾ? ನಾವು ಇಲ್ವಾ ನಿಮಗೆ? ಅಂತ ಕೇಳಿದ್ರು. ಹಾಗೇ ದುಡ್ಡು ಹಾಕುತ್ತಿದ್ದೇನೆ. ಆದರೆ, ನನ್ನದಲ್ಲ. ನನ್ನ ಕಡೆಯವರದ್ದು. ನೀವು ಏನಾದರೂ ಆಶೀರ್ವಾದ ಕೊಡುತ್ತೀರ ಅಂದರೆ, ಅವರಿಗೆ ಕೊಡಿ. ಸದ್ಯ ನಾನು ಬ್ಯುಸಿ ಇದ್ದೆ ಅಂತ ಅವರು ಸಹಾಯ ಮಾಡಿದ್ದಾರೆ." ಎಂದು ದರ್ಶನ್ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ, ಹರೀಶ್ ರೈ ಪತ್ನಿಯೊಂದಿಗೂ ಕರೆ ಮಾಡಿ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದರಂತೆ. "ಅಮ್ಮಂಗೆ ಫೋನ್ ಮಾಡಿ ಅಕ್ಕ ಗುರುಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಭೇಟಿಯಾಗುವುದಕ್ಕೆ ಬರುತ್ತೇನೆ. ಸ್ವಲ್ಪ ಆಕಡೆ ಈ ಕಡೆ ಇದ್ದೀನಿ. ಚೆನ್ನಾಗಿ ನೋಡಿಕೊಳ್ಳಿ. ಗುರುಗಳಿಗೆ ಏನೂ ಆಗಬಾರದು. ಏನಾದರೂ ಆದರೆ, ನನಗೆ ಬೇಜಾರಾಗುತ್ತೆ. ನಮ್ಮ ಗುರುಗಳು ಅವರು. ನೋಡಿಕೊಳ್ಳಿ ಅಂತ ಹೇಳಿ ತುಂಬಾನೇ ಮಾತಾಡಿದರು." ಎಂದು ಪುತ್ರ ಹೇಳಿದ್ದಾರೆ.


Click it and Unblock the Notifications











