"ಗಿಡ ಬೆಳೆಸೋದು ನಮ್ಮ ಕೆಲಸ, ಬೆಳೆದ್ಮೇಲೆ ಹೇಗೆ ಬೇಕಾದ್ರೂ ತಿರುಗಿಕೊಳ್ಳುತ್ತೆ"; ರಶ್ಮಿಕಾ ಬಗ್ಗೆ ಹೀಗಂದಿದ್ಯಾಕೆ ಶೆಟ್ರು

'ಕಿರಿಕ್ ಪಾರ್ಟಿ' ಸಿನಿಮಾ ರಿಲೀಸ್ ಆದ ಬಳಿಕ ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್ ಆಗಿ ಬೆಳೆದಿದ್ದನ್ನು ವಿಶೇಷವಾಗಿ ಹೇಳಬೇಕಿಲ್ಲ. ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ. ಪರಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು ಅಂತ ಬೇರೆ ಭಾಷೆಯ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಜೋಡಿ 'ಕಿರಿಕ್ ಪಾರ್ಟಿ'ಯಲ್ಲಿ ಮೋಡಿ ಮಾಡಿತ್ತು. ಅಷ್ಟರಲ್ಲೇ ಕನ್ನಡದ ಮೂರು ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 'ಅಂಜನಿಪುತ್ರ','ಚಮಕ್' ಹಾಗೂ 'ಪೊಗರು' ಸಿನಿಮಾ ರಿಲೀಸ್ ಆಗುವುದರೊಳಗಾಗಿ ರಶ್ಮಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಲವ್ ಸ್ಟೋರಿ ರಿವೀಲ್ ಆಗಿ, ನಿಶ್ಚಿತಾರ್ಥನೂ ಆಗಿ ಬ್ರೇಕಪ್ ಕೂಡ ಆಗಿತ್ತು.

Laughing Buddha Pramod Shetty reaction on Rakshit Shetty and Rashmika engagement goes viral

ನಿಶ್ಚಿತಾರ್ಥ ಮುರಿದು ಬೀಳುತ್ತಿದ್ದಂತೆ ನೆಟ್ಟಿಗರು ರಶ್ಮಿಕಾ ಮಂದಣ್ಣ ವಿರುದ್ಧ ತಿರುಗಿಬಿದ್ದಿದ್ದರು. ಅಲ್ಲಿಂದ ರಶ್ಮಿಕಾ ಮಂದಣ್ಣ ತಮ್ಮದೇ ಹಾದಿ ಹಿಡಿದು ಹೊರಟಿದ್ದರು. ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈಗ ಬಗ್ಗೆ ಶೆಟ್ಟರ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. ಗುಡ್ ನ್ಯೂಸ್ ಕನ್ನಡ ಯೂಟ್ಯೂಬ್ ಚಾನೆಲ್‌ ನೀಡಿದ ಸಂದರ್ಶನದಲ್ಲಿ "ಗಿಡ ಬೆಳೆಸೋ ತನಕ ನಮ್ಮ ಕೆಲಸ ಅದು ಬೆಳೆದ ಮೇಲೆ ಅದರ ಕೆಲಸ ಅಲ್ವಾ. ರಂಬೆ ಹಿಂಗೆ ಹೋಗ್ಬೇಕಾ? ಹಂಗೆ ಹೋಗ್ಬೇಕಾ ಅನ್ನೋದು ನಾವು ತಿರುಗಿಸಿ, ಮುರಿದು ಎಲ್ಲಾ ಮಾಡುವುದಕ್ಕೆ ಆಗುವುದಿಲ್ಲ" ಎಂದು ಹೇಳಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಂದಲೂ ರಶ್ಮಿಕಾ ಮಂದಣ್ಣರನ್ನು ನೋಡಿಕೊಂಡು ಬಂದಿದ್ದಾರೆ. ಅವರ ಬೆಳವಣಿಗೆಯನ್ನು ನೋಡಿದ್ದಾರೆ. ಹೀಗಾಗಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ, ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ, ಬಳಿಕ ಬ್ರೇಕಪ್ ಬಗ್ಗೆ ಸೂಕ್ಷ್ಮವಾಗಿ ಮಾತಾಡಿದ್ದಾರೆ.

"ಗಿಡ ಬೆಳೆಸೋ ತನಕ ನಮ್ಮ ಕೆಲಸ ಅದು ಬೆಳೆದ ಮೇಲೆ ಅದರ ಕೆಲಸ ಅಲ್ವಾ. ರಂಬೆ ಹಿಂಗೆ ಹೋಗ್ಬೇಕಾ? ಹಂಗೆ ಹೋಗ್ಬೇಕಾ ಅನ್ನೋದು ನಾವು ತಿರುಗಿಸಿ, ಮುರಿದು ಎಲ್ಲಾ ಮಾಡುವುದಕ್ಕೆ ಆಗುವುದಿಲ್ಲ. ಗಿಡ ಬೆಳೆಸುವುದು ನಮ್ಮ ಕೆಲಸ. ಬೆಳೆದ ಮೇಲೆ ಹೇಗೆ ಬೇಕಾದರೂ ತಿರುಗಿಕೊಳ್ಳುತ್ತೆ. ಆಕೆ ತುಂಬಾನೇ ಅದ್ಭುತ ನಟಿ. ನಾವು ಕಿರಿಕ್ ಪಾರ್ಟಿ ಮಾಡಿದಾಗಲೇನೆ. ಅದು ಅವರ ಮೊದಲ ಸಿನಿಮಾ ಆಗಿದ್ದರೂ, ಅವರು ಅತ್ಯುತ್ತಮ ನಟನೆ ಮಾಡಿದ್ದರು." ಎಂದು ಪ್ರಮೋದ್ ಶೆಟ್ಟಿ ಗುಡ್ ನ್ಯೂಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Laughing Buddha Pramod Shetty reaction on Rakshit Shetty and Rashmika engagement goes viral

ಕಿರಿಕ್ ಪಾರ್ಟಿ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಯಾವುದೇ ಕಾರಣಕ್ಕೆ ಆ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಈ ಬಗ್ಗೆ ಪ್ರಮೋದ್ ಶೆಟ್ಟಿ ಕಾಮೆಂಟ್ ಹೀಗಿದೆ. "ಕಿರಿಕ್ ಪಾರ್ಟಿ ಆದ್ಮೇಲೆ ರಕ್ಷಿತ್ ಜೊತೆ ಮದುವೆ ಆಗಬೇಕಿತ್ತು. ಕಟ್ ಆಯ್ತು. ಎಂಗೇಜ್ಮೆಂಟ್ ಆಗಬೇಕಿತ್ತು. ಕಟ್ ಆಯ್ತು ಅನ್ನೋದಕ್ಕಾಗಿ ಯಾವುದೋ ಒಂದು ಹುಡುಗಿಯ ಮೇಲೆ ಆರೋಪ ಮಾಡುವುದಕ್ಕೆ ಆಗಲ್ಲ. ರಕ್ಷಿತ್ ಇದುವರೆಗೂ ಅದರ ಬಗ್ಗೆ ಕಾಮೆಂಟ್ ಮಾಡಿಲ್ಲ. ಎಂಗೇಜ್ಮೆಂಟ್ ಬ್ರೇಕ್ ಆಗಿದ್ದರ ಬಗ್ಗೆ ಅವನೇ ಕಾಮೆಂಟ್ ಮಾಡಿಲ್ಲ. ಅವನ ಸ್ನೇಹಿತರಾಗಿ ನಾವು ಕೂಡ ಅದನ್ನೇ ಫಾಲೋ ಮಾಡುತ್ತೇವೆ." ಎಂದು ತಿಳಿಸಿದ್ದಾರೆ.

ಆದರೆ, ಕನ್ನಡ ಭಾಷೆಯ ಬಗ್ಗೆ ಮಾತಾಡಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. "ಅವರು ನನಗೆ ಕನ್ನಡ ಗೊತ್ತಿಲ್ಲ. ಕನ್ನಡ ಬರಲ್ಲ ಅಂತ ಹೇಳಿದ್ದು ತಪ್ಪು ಅಂತಲೇ ಹೇಳುತ್ತೇನೆ. ಅದೆಲ್ಲ ಏನು ಹೇಳಬಹುದು ಅಂದರೆ, ಮಾಡಿದ್ದುಣ್ಣೋ ಮಾರಾಯ ಆಗುತ್ತೆ. ಎಷ್ಟೇ ಕನ್ನಡ ಬರಲ್ಲ ಅಂದರೂ, ಇರೋದು ಕರ್ನಾಟಕದಲ್ಲೇ ಅಲ್ವಾ? ಅದೇ ಮಡಿಕೇರಿಗೆ ವಾಪಾಸ್ ಬರಬೇಕಲ್ವಾ? ಹೈದರಾಬಾದ್‌ನಲ್ಲಿ ಮನೆ ಮಾಡಬಹುದಷ್ಟೇ. ದುಬೈನಲ್ಲಿ ಎಲ್ಲಿ ಬೇಕಾದರೂ ಮಾಡಬಹುದು. ನೀವು ವಾಪಾಸ್ ಬರಲೇಬೇಕಲ್ಲ." ಎಂದು ರಶ್ಮಿಕಾ ಕಾಮೆಂಟ್‌ಗೆ ತಿರುಗೇಟು ಕೊಟ್ಟಿದ್ದು, ಆ ವಿಡಿಯೋ ವೈರಲ್ ಆಗುತ್ತಿದೆ.

More from Filmibeat

English summary
Laughing Buddha star Pramod Shetty reaction on Rakshit Shetty and Rashmika engagement goes viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X