Darshan:ದರ್ಶನ್ ಕೇಸ್‌ಗೆ ಕೈಗೆತ್ತಿಕೊಂಡ ಹೊಸ ವಕೀಲರು ಯಾರು? ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಯಾಕೆ?
ರೇಣುಕಾಸ್ವಾಮಿ ಪ್ರಕರಣ ಟ್ರಯರ್ ಚುರುಕುಕೊಂಡಿದೆ. ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ಮುಗಿಸುವಂತೆ ಒಂದು ವರ್ಷದ ಗಡುವು ಕೊಟ್ಟಿದೆ. ಈ ಬೆನ್ನಲ್ಲೇ ತ್ವರಿತಗತಿಯಲ್ಲಿ ಟ್ರಯಲ್ ಆರಂಭ ಆಗಿದೆ. ಇತ್ತ ಈ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಜಾಮೀನು ಪಡೆದು ಹೊರ ಬರುವುದಕ್ಕೆ ಕಾನೂನು ಹೋರಾಟ ನಡೆಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕೇಸ್ ಕುತೂಹಲ ಕೆರಳಿಸಿರುವುದಂತೂ ನಿಜ.
ಇಲ್ಲಿವರೆಗೂ ರೇಣುಕಾಸ್ವಾಮಿ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಅವರ ಪರ ವಕೀಲರಾದ ಸುನೀಲ್ ಕುಮಾರ್ ಮುನ್ನಡೆಸುತ್ತಿದ್ದರು. ಆದರೆ, ಟ್ರಯಲ್ ಆರಂಭ ಆಗುವ ಮುನ್ನ ಸುನೀಲ್ ಕುಮಾರ್ ಈ ಕೇಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾಯಾಧೀಶರ ಮುಂದೆ ಹೇಳಿದ್ದರು. ಈಗ ಈ ಕೇಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಮತ್ತೊಬ್ಬ ಹಿರಿಯ ವಕೀಲರು ದರ್ಶನ್ ಪರ ವಕಾಲತ್ತು ವಹಿಸಲಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ತಳುಕು ಹಾಕಿಕೊಂಡ ಕ್ಷಣದಿಂದಲೂ ಸುನಿಲ್ ಕುಮಾರ್ ಅವರ ಪರ ವಾದ ಮಂಡಿಸುತ್ತಿದ್ದರು. ಆದ್ರೀಗ ಟ್ರಯಲ್ ಆರಂಭ ಆದ ಬೆನ್ನಲ್ಲೇ ಈ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಈ ನಿರ್ಧಾರದ ಹಿಂದೆ ಇರುವ ಅಸಲಿ ಕಾರಣವೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ದರ್ಶನ್ ಜೊತೆ ಅವರ ಸಹಚರರಾದ ಪರವೂ ವಕಾಲತ್ತು ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುನಿಲ್ ಈ ಕೇಸ್ ಕೈ ಬಿಟ್ಟಿದ್ದೇಕೆ?
ದರ್ಶನ್‌ರದ್ದು ಹೈ-ಪ್ರೊಫೈಲ್ ಕೇಸ್ ಆಗಿತ್ತು. ಈ ಕೇಸ್ ಅನ್ನು ಕಳೆದ ಕೆಲವು ತಿಂಗಳುಗಳಿಂದ ಲಾಯರ್ ಸುನಿಲ್ ಕುಮಾರ್ ಅವರೇ ವಕಾಲತ್ತು ವಹಿಸಿದ್ದರು. ಈಗ 59ನೇ ಸಿಸಿಎಚ್ ಕೋರ್ಟ್‌ನಲ್ಲಿ ಸುನಿಲ್ ಕುಮಾರ್ ಅವರ ಜೂನಿಯರ್ ಶೋಭಿತ್ ಅವರ ಮೆಮೋ ಸಲ್ಲಿಸಿದ್ದಾಗಿ ನ್ಯೂಸ್ 18 ವರದಿ ಮಾಡಿದೆ. ಈ ಮೂಲಕ ದರ್ಶನ್ ಅಷ್ಟೇ ಅಲ್ಲ, ಅವರ ಸಹಚರರಾದ ಲಕ್ಷ್ಮಣ್ ಹಾಗೂ ನಾಗರಾಜ್ ಪರವಾಗಿಯೂ ವಕಾಲತ್ತು ವಹಿಸುವುದಿಲ್ಲವೆಂದು ಹೇಳಿದ್ದು, ಈ ಕೇಸ್‌ನಿಂದ ಹೊರಬಂದಿದ್ದಕ್ಕೆ ಕಾರಣ ಇನ್ನೂ ಹೊರಬಿದ್ದಿಲ್ಲ.
ಹಿರಿಯ ವಕೀಲರ ಎಂಟ್ರಿ
ರೇಣುಕಾಸ್ವಾಮಿ ಕೇಸ್‌ನಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಪರ ಈಗ ಹಿರಿಯ ವಕೀಲರಾದ ಹಶ್ಮತ್ ಪಾಪಾ ವಕಾಲತ್ತು ವಹಿಸಲಿದ್ದಾರೆ. ದರ್ಶನ್ ಹಾಗೂ ಅವರ ಆಪ್ತರ ಪರ ಇವರೇ ವಕಲಾತ್ತು ವಹಿಸುವುದಕ್ಕೆ ಹಶ್ಮತ್ ಪಾಷಾ ಮುಂದ್ದಾಗಿದ್ದು, ಇನ್ಯಾವ ಹಂತಕ್ಕೆ ಹೋಗುತ್ತೆ ಅನ್ನೋದು ನೋಡಬೇಕಿದೆ. ಈ ಬಗ್ಗೆ ಈಗಾಗಲೇ ಈ ಬಗ್ಗೆ 59ನೇ ನ್ಯಾಯಾಲಯ ದರ್ಶನ್‌ಗೆ ಮಾಹಿತಿಯನ್ನು ರವಾನೆ ಮಾಡಿದೆ. ಇದಕ್ಕೆ ಕುಟುಂಬಸ್ಥರ ಬಳಿ ಮಾತಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ದರ್ಶನ್ ಹೇಳಿದ್ದಾಗಿ ವರದಿಯಾಗಿದೆ.

ಮತ್ತೆ ಸುಪ್ರೀಂ ಕೋರ್ಟ್ ಮೊರೆ
ಹೊಸ ವಕೀಲ ಎಂಟ್ರಿ ಕೊಟ್ಟ ಬಳಿಕ ದರ್ಶನ್ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ಒಂದು ವರ್ಷದ ಒಳಗೆ ಪ್ರಕರಣವನ್ನು ಮುಗಿಸುವಂತೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕಠಿಣ ಆದೇಶ ಹಾಗೂ ಷರತ್ತನ್ನು ಮಾರ್ಪಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಒಂದು ವರ್ಷದ ಅವಧಿಯೊಳಗೆ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಈ ಒಂದು ವರ್ಷದ ಅವಧಿ ಮುಗಿಯುವವರೆಗೆ ನಟ ದರ್ಶನ್ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚಿಸಲಾಗಿತ್ತು.
2 ರಿಯಾಯ್ತಿ ಯಾವುದು?
ದರ್ಶನ್ ಪರ ವಕೀಲರು ಮಾಡಿರುವ ಮನವಿಯಲ್ಲಿ ಸುಮಾರು 60 ಸಾಕ್ಷಿಗಳ ವಿಚಾರಣೆ ಆಗಬೇಕಿದ್ದು, ಒಂದು ವರ್ಷದಲ್ಲಿ ಮಾಡುವುದು ವಿಳಂಬ ಆಗಬಹುದು. ಹೀಗಾಗಿ ಸಾಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಮಾನವಿ ಮಾಡಿಕೊಂಡಿದ್ದಾರೆ. ಎರಡನೆಯದು, ಒಂದು ವರ್ಷದವರೆಗೂ ಜಾಮೀನು ಅರ್ಜಿ ಸಲ್ಲಿಸುವಂತಿಲ್ಲ ಎಂದು ನೀಡಿದ್ದ ಗಡುವನ್ನು ಕಡಿತಗೊಳಿಸುವಂತೆ ಕೇಳಿಕೊಳ್ಳಲಾಗಿದೆ.


Click it and Unblock the Notifications