'ಕೊರಗಜ್ಜ' ಸಿನಿಮಾಗೆ 96 ವರ್ಷದ ದಿಗ್ಗಜ ಎಂ ಎಸ್ ಸತ್ಯುರಿಂದ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್‌ಗೆ ಟಿಪ್ಸ್
'ಕಾಂತಾರ' ಬಳಿಕ ತುಳುನಾಡಿನ ಮತ್ತೊಂದು ದೈವ 'ಕೊರಗಜ್ಜ' ಸಿನಿಮಾದ ಬಗ್ಗೆ ಸಿನಿಮಾ ನಿರ್ಮಾಣ ಆಗುತ್ತಿದೆ. ಕಳೆದ ಕೆಲವು ತಿಂಗಳಿನಿಂದ ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಭಾರತೀಯ ಚಿತ್ರರಂಗದ ದಿಗ್ಗಜರು ಈ ಸಿನಿಮಾ ಭಾಗವಾಗುತ್ತಿದ್ದಾರೆ. ಕೊರಗಜ್ಜನ ಭಕ್ತರು ರಾಜ್ಯದ ಮೂಲೆ ಮೂಲೆಯಲ್ಲಿ ವ್ಯಾಪಿಸಿದ್ದು, ಈ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಮ್ಸ್ ಬ್ಯಾನರ್ 'ಕೊರಗಜ್ಜ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾವನ್ನು ಕೂಡ ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಆಲೋಚನೆ ಇರುವುದರಿಂದ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಭಾರತೀಯ ಚಿತ್ರರಂಗದ ದಿಗ್ಗಜರಾದ ಕಿರಣ್ ಬೇಡಿ, ಶ್ರುತಿ ಸೇರಿದಂತೆ ಹಲವು ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಈ ತಂಡಕ್ಕೆ ರಂಗಭೂಮಿಯ ಮತ್ತೊಬ್ಬ ದಿಗ್ಗಜರು ಸೇರ್ಪಡೆಯಾಗಿದ್ದಾರೆ. ಅವರೇ ಎಂ.ಎಸ್.ಸತ್ಯು.

ದೇಶದ ಖ್ಯಾತ ಕಲಾ ವಿನ್ಯಾಸಗಾರ, ರಂಗ ಕರ್ಮಿ-ನಿರ್ದೇಶಕ ಎಂ ಎಸ್ ಸತ್ಯು ಅವರು 'ಕೊರಗಜ್ಜ' ಸಿನಿಮಾ ತಂಡಕ್ಕೆ ಕೆಲವು ಟಿಪ್ಸ್ ನೀಡಿದ್ದಾರೆ. ಕಾಸ್ಟ್ಯೂಮ್ ಹಾಗೂ ಆರ್ಟ್ ಡೈರೆಕ್ಷನ್ ವಿಭಾಗದಲ್ಲಿ ಇವರ ಆಳವಾದ ಜ್ಞಾನವನ್ನು ಧಾರೆ ಎರೆದಿದ್ದಾರೆಂದು ಚಿತ್ರತಂಡ ಹೇಳಿಕೊಂಡಿದೆ. 'ಕೊರಗಜ್ಜ' ಸಿನಿಮಾಗೆ 96 ವರ್ಷದ ರಂಗಕರ್ಮಿ ಎಂ ಎಸ್ ಸತ್ಯು ಅವರು ನೀಡಿರುವ ಸಲಹೆಗಳೇನು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಕೊರಗಜ್ಜ' ಸಿನಿಮಾವನ್ನು ಸುಧೀರ್ ಅತ್ತಾವರ್ ನಿರ್ದೇಶಿಸಿದ್ದಾರೆ. ಈಗಾಗಲೇ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ದೇಶದ ಬಲು ದೊಡ್ದ ಕಂಪೆನಿ ಆಡಿಯೋ ರೈಟ್ ಪಡೆದುಕೊಂಡಿದೆ ಎಂದು ಚಿತ್ರತಂಡ ಹೇಳಿದೆ. ಈ ನಡುವೆ ಸಿನಿಮಾಗೆ ವಿಶಿಷ್ಟವಾದ ಕಾಸ್ಟ್ಯೂಮ್ ಹಾಗೂ ಆರ್ಟ್ ಡಿಸೈನ್ ಆಗಬೇಕಿದ್ದರಿಂದ ಖ್ಯಾತ ಕಲಾ ವಿನ್ಯಾಸಗಾರ, ರಂಗ ಕರ್ಮಿ-ನಿರ್ದೇಶಕ ಎಂ ಎಸ್ ಸತ್ಯುರವರ ಸಲಹೆಯನ್ನು ಚಿತ್ರತಂಡ ಪಡೆದುಕೊಂಡಿದೆ. ಇದೇ ಜುಲೈ 6ಕ್ಕೆ 96ನೇ ವರ್ಷಕ್ಕೆ ಕಾಲಿಡುತ್ತಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕರಾಗಿರುವ ಎಂ.ಎಸ್ ಸತ್ಯುರವರು ವಸ್ತ್ರ ವಿನ್ಯಾಸ ಗೊಳಿಸಿರುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.
'ಕೊರಗಜ್ಜ' ಸಿನಿಮಾ ಸುಮಾರು ಎಂಟುನೂರು ವರ್ಷಗಳ ಹಿಂದಿನ ಕಥೆ. ಹೀಗಾಗಿ ಆ ಕಾಲಘಟ್ಟಕ್ಕೆ ಸರಿ ಹೊಂದುವಂತಹ ಕಾಸ್ಟ್ಯೂಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಆಳವಾದ ಜ್ಞಾನ ಮತ್ತು ಪರಿಕಲ್ಪನೆ ಬೇಕಾಗಿತ್ತು. ಅಲ್ಲದೆ ಎಂ.ಎಸ್ ಸತ್ಯು ಅವರು ಮಾಡಿರುವ ಕಲಾ ವಿನ್ಯಾಸಗಳು ಲಂಡನಿನ ಷೇಕ್ಸ್‌ಪಿಯರ್ ಮ್ಯೂಸಿಯಂನಲ್ಲೂ ಸಂಗ್ರಹವಾಗಿದೆ. ಹೀಗಾಗಿ ಅವರಿಂದ ಕಲಾ ವಿನ್ಯಾಸ ಬಗ್ಗೆ ಸಲಹೆಯನ್ನು ಚಿತ್ರತಂಡ ಪಡೆದುಕೊಂಡಿದೆ.
"ಗುರುಗಳಾದ ಸತ್ಯುರವರ ಹತ್ರ ಕೊರಗಜ್ಜ ಮತ್ತು ನನ್ನ ಮುಂಬರುವ ಸಿನಿಮಾದ ವಸ್ತ್ರ ವಿನ್ಯಾಸ ಮತ್ತು ಕಲಾ ವಿಭಾಗದ ಬಗ್ಗೆ ಹಲವಾರು ಬಾರಿ ಫೋನ್‌ನಲ್ಲಿ ಚರ್ಚಿಸಿದೆ. ಸಂಪೂರ್ಣ ಮಾಹಿತಿ ಪಡೆದುಕೊಳ್ಳುವಷ್ಟರಲ್ಲಿ ಸತ್ಯು ಅವರು ವಯೋ ಸಹಜ ಖಾಯಿಲೆಯಿಂದ ಸೊರಗಿ ಹೋಗತೊಡಗಿದರು. ನಂತರ ಸ್ವತಃ ಆಳವಾದ ಅಭ್ಯಾಸ ಮಾಡಿ ಉಡುಗೆ- ತೊಡುಗೆ ಮತ್ತು ಕಲಾ ವಿನ್ಯಾಸ ಮಾಡಿದೆ. ಆದರೆ ನನ್ನ 'ಪರಿ' ಸಿನಿಮಾದ ಕಲಾ ನಿರ್ದೇಶನವನ್ನು ಸತ್ಯುರವರೇ ಮಾಡಿದ್ದರು" ಎಂದು ಸುಧೀರ್ ಅತ್ತಾವರ್ ತಿಳಿಸಿದ್ದಾರೆ.
ನಿರ್ದೇಶಕ ಸುಧೀರ್ ಅತ್ತಾವರ್ 'ಕೊರಗಜ್ಜ' ಸಿನಿಮಾಗಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಕಲಾ ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಎಂ.ಎಸ್ ಸತ್ಯು ಅವರೊಂದಿಗೆ ಸಿನಿಮಾ, ರಂಗಭೂಮಿ ಮತ್ತು ಟಿವಿ ಮಾಧ್ಯಮದಲ್ಲಿ 10 ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಿದ್ದಾರೆ. ದೇಶದ ಶ್ರೇಷ್ಠ ವಿನ್ಯಾಸಗಾರ ಎಂ ಎಸ್ ಸತ್ಯು 'ಕೊರಗಜ್ಜ' ಸಿನಿಮಾದ ಕಥೆ ಕೇಳಿ ಬಹಳ ಇಷ್ಟ ಪಟ್ಟಿದ್ದಾಗಿ ತಂಡ ಹೇಳಿಕೊಂಡಿದೆ. ಈ ಸಿನಿಮಾ ಮಾಡುವ ವೇಳೆ ಸತ್ಯು ಅವರು ಇದೊಂದು ಚಾಲೆಂಜಿಂಗ್ ಮತ್ತು ಕಠಿಣ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಸಿನಿಮಾದ ಕಾಸ್ಟ್ಯೂಮನ್ನು ಹಾಲಿವುಡ್-ಬಾಲಿವುಡ್ ಮತ್ತು ಯುರೋಪಿಯನ್ ಸಿನಿಮಾಗಳಲ್ಲಿ ನಟಿಸಿರುವ ಕಿರಣ್ ಬೇಡಿ ಮೆಚ್ಚಿಕೊಂಡಿದ್ದಾರೆ. ಅಂದ್ಹಾಗೆ ಕಬೀರ್ ಬೇಡಿ 'ಕೊರಗಜ್ಜ' ಸಿನಿಮಾದಲ್ಲಿ ಉದ್ಯಾವರ ಅರಸರ ಪಾತ್ರದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡುತ್ತಿದೆ.


Click it and Unblock the Notifications











