ತಮಿಳುನಾಡಿನಲ್ಲಿ ವಿಜಯ್ ಯುಗ ಆರಂಭ.. ಕರ್ನಾಟಕದಲ್ಲೂ ವಿಜಯ್ ರಾಜಕೀಯ ಜರ್ನಿ ಆರಂಭ ಆಗುತ್ತಾ?

2026ರಲ್ಲಿ ತಮಿಳುನಾಡು ಚುನಾವಣೆ ದೇಶದ ಗಮನ ಸೆಳೆಯುತ್ತಿದೆ. ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಇಳಿದ ಎರಡೇ ವರ್ಷಗಳಲ್ಲಿ ಚರಿತ್ರೆಯನ್ನು ಬರೆದಿದ್ದಾರೆ. ರಾಜಕೀಯದಲ್ಲಿ ಮತ್ತೆ ಸಿನಿಮಾದ ಸ್ಟಾರ್‌ಡಮ್ ಕೆಲಸ ಮಾಡಿದೆ. ವಿಜಯ್ ಪಕ್ಷ ಟಿವಿಕೆ ಗೆಲ್ಲುವುದಕ್ಕೆ ಜೆನ್‌ಝೀ (Gen Z) ಫ್ಯಾಕ್ಟರ್ ಕೂಡ ಕೆಲಸ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ವಿಜಯ್ ಗೆಲುವು ಹಲವು ರಾಜ್ಯಗಳಿಗೆ ಮಾದರಿಯಾಗಿದೆ. ವಿಜಯ್‌ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದಂತೆ ಎಲ್ಲಾ ರಾಜ್ಯಗಳಲ್ಲೂ ಆಗಬೇಕು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಪ್ರಾದೇಶಿಕದ ಖದರ್ ಕೂಡ ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿಯೂ ಇಂತಹದ್ದೇ ವಾತಾವರಣ ಸೃಷ್ಠಿಯಾಗಬಹುದೇ? ಕನ್ನಡದ ಸೂಪರ್‌ಸ್ಟಾರ್‌ಗಳು ರಾಜಕೀಯ ಪಕ್ಷ ಕಟ್ಟಿ ಗೆಲ್ಲಬಹುದೇ? ಇಂತಹದ್ದೊಂದು ಆಲೋಚನೆ ಊಹಿಸಿಕೊಳ್ಳುವುದು ಕಷ್ಟ.

Like TVK Vijay in Karnataka Duniya Vijay will enter politics here is his reaction

ತಮಿಳುನಾಡಿಗೆ ದಳಪತಿ ವಿಜಯ್ ಇದ್ದಂತೆ, ಕರ್ನಾಟಕಕ್ಕೆ ದುನಿಯಾ ವಿಜಯ್ ಆಗಬಹುದೇ? ಅವರು ರಾಜಕೀಯಕ್ಕೆ ಬರಬಹುದೇ? ಇಂತಹ ಪ್ರಶ್ನೆ ಮಾಧ್ಯಮದ ಪ್ರತಿನಿಧಿಗಳು ಕೇಳಿದ್ದರು. ಅದಕ್ಕೆ ದುನಿಯಾ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ತಮ್ಮ ಅಭಿಪ್ರಾಯವೇನು ಅನ್ನೋದನ್ನು ಹೇಳಿದ್ದಾರೆ.

ಇಂತಹ ಬದಲಾವಣೆ ಆಗಬೇಕು

ತಮಿಳುನಾಡಿನ ಜನತೆ ದಳಪತಿ ವಿಜಯ್ ಅವರನ್ನು ಗೆಲ್ಲಿಸಿ ಬದಲಾವಣೆ ತಂದಿದ್ದಾರೆ. ಅದು ಎಲ್ಲಾ ರಾಜ್ಯದಲ್ಲಿಯೂ ಆಗಬೇಕು ಎಂದು ಹೇಳಿದ್ದಾರೆ. "ತಮಿಳುನಾಡಿನಲ್ಲಿ ವಿಜಯ್ ಗೆದ್ದಿರೋದು ತುಂಬಾನೇ ಸಂತೋಷವಿದೆ. ಯಾಕಂದ್ರೆ, ಒಂದು ನನ್ನ ಹೆಸರು. ಹಾಗಾಗಿ ತುಂಬಾನೇ ಖುಷಿ. ತಮಿಳಿನಲ್ಲಿ ಒಬ್ಬರು ವಿಜಯ್.. ಕನ್ನಡದಲ್ಲಿ ಒಬ್ಬರು ವಿಜಯ್ ಇದ್ದಾರೆ ಅಂತ. ಮತ್ತೆ ಇಡೀ ತಮಿಳುನಾಡಿನ ಜನತೆ ತೆಗೆದುಕೊಂಡಿರುವ ನಿರ್ಧಾರ ಇದೆಯಲ್ಲ ಅದು ಗ್ರೇಟ್. ಇಂತಹ ಬದಲಾವಣೆ ಎಲ್ಲಾ ರಾಜ್ಯಗಳಲ್ಲೂ ಆಗಬೇಕು." ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಇದೆಲ್ಲ ಜೆನ್‌ಝೀ (Gen Z)ಗಳ ಎಫೆಕ್ಸ್

ವಿಜಯ್ ಪಕ್ಷ ಟಿವಿಕೆ ಗೆದ್ದಿರುವುದಕ್ಕೆ ನ್‌ಝೀ (Gen Z)ಗಳು ತೆಗೆದುಕೊಂಡು ನಿರ್ಧಾರ ಎಂದು ದುನಿಯಾ ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ. "ಇವತ್ತು ಜೆನ್‌ಝೀ (Gen Z)ಗಳು ಮಾಡುತ್ತಿರುವ ನಿರ್ಧಾರ ಇದೆಯಲ್ಲ ಅದಕ್ಕೆ ಜೈ ಎನ್ನಲೇ ಬೇಕು. ತಮಿಳುನಾಡು ಜನತೆ ಯಾರೆಲ್ಲ ವಿಜಯ್ ಸರ್ ಅವರನ್ನು ಗೆಲ್ಲಿಸಿದ್ದೀರ ಅವರಿಗೆ ನನ್ನ ಪರವಾಗಿ, ನನ್ನ ಇಂಡಸ್ಟ್ರಿಯ ಪರವಾಗಿ ನಿಮ್ಮೆಲ್ಲರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ವಿಜಯ್ ಸರ್ ಅವರನ್ನು ಗೆಲ್ಲಿಸಿದ್ದಕ್ಕೆ ನನಗೂ ತುಂಬಾನೇ ಖುಷಿಯಿದೆ." ಎಂದು ದುನಿಯಾ ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ.

Like TVK Vijay in Karnataka Duniya Vijay will enter politics here is his reaction

ನಮ್ಮಲ್ಲೂ ಬದಲಾವಣೆ ಬೇಕು

ತಮಿಳುನಾಡಿನಲ್ಲಿ ಆದಂತೆ ನಮ್ಮ ರಾಜ್ಯದಲ್ಲಿಯೂ ಬದಲಾವಣೆ ಆಗಬೇಕು. ಎರಡು ಪಕ್ಷಗಳ ಜೊತೆ ಇನ್ನೊಂದು ಪಕ್ಷ ಬರಬೇಕು ಅನ್ನೋದು ವಿಜಯ್ ವಾದ. "ಇಲ್ಲಿ ಬದಲಾವಣೆ ಅಂತೂ ಬೇಕು. ಆ ಬದಲಾವಣೆಗೆ ಯಾರೆಲ್ಲ ಆಧಾರ ಆಗುತ್ತಾರೋ ಅವರೆಲ್ಲ ಬರಬಹುದು. ಇವತ್ತು ಅದೇ ತಮಿಳುನಾಡಿನಲ್ಲಿ ನಡೆದಿರೋದು. ತಮಿಳುನಾಡಿನಲ್ಲಿ ಎರಡೇ ಪಕ್ಷ ಇದೆ ಅಂತ ಯೋಚನೆ ಮಾಡುತ್ತಿದ್ವಿ. ಈಗ ಮೂರನೆಯದ್ದು ಇನ್ನೊಂದು ಹೊಸ ಪಕ್ಷ ಹುಟ್ಟಿಕೊಂಡಿದೆ. ಈ ಬದಲಾವಣೆಗೆ ಜೆನ್‌ಝೀ (Gen Z)ಗಳು ಕಾರಣರಾಗುತ್ತಾರೆ. ನಮ್ಮಲ್ಲೂ ಆ ಬದಲಾವಣೆ ಆಗಬಹುದು. ಯಾಕಂದ್ರೆ ಜೆನ್‌ಝೀ (Gen Z) ತುಂಬಾನೇ ಗಮನ ಹರಿಸುತ್ತಿದ್ದಾರೆ. ಒಂದು ಕ್ರಾಂತಿಯನ್ನಂತೂ ಮಾಡುತ್ತಾರೆ" ಎಂದು ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ್ ರಾಜಕೀಯಕ್ಕೆ ಬರುತ್ತಾ?

ದುನಿಯಾ ವಿಜಯ್ ರಾಜಕೀಯಕ್ಕೆ ಬರುತ್ತಾರಾ? ತಮಿಳುನಾಡಿನಲ್ಲಿ ದಳಪತಿ ವಿಜಯ್ ಇದ್ದಂತೆ, ಕರ್ನಾಟಕದಲ್ಲಿ ದುನಿಯಾ ವಿಜಯ್ ಆಗುತ್ತಾರಾ? ಇದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. "ನನ್ನ ಆಸಕ್ತಿ ಏನಂದರೆ, ಬದಲಾವಣೆ ಬೇಕು ಅಂತ ಅಷ್ಟೇ ಹೇಳುತ್ತಿದ್ದೇನೆ. ರಾಜಕೀಯಕ್ಕೆ ಬರೋದರ ಬಗ್ಗೆ ಟೈಮ್ ಬರಲಿ ಹೇಳುತ್ತೇನೆ." ಎಂದು ಹೇಳಿದ್ದಾರೆ.

English summary
Like TVK Vijay in Karnataka Duniya Vijay will enter politics? here is his reaction.
Read more about: vijay duniya vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X