»   » ಅರ್ಥವಾರ್ಷಿಕ ರಿಪೋರ್ಟ್; ಹಿಟ್ ಚಿತ್ರಗಳ ಪಟ್ಟಿ

ಅರ್ಥವಾರ್ಷಿಕ ರಿಪೋರ್ಟ್; ಹಿಟ್ ಚಿತ್ರಗಳ ಪಟ್ಟಿ

Posted By:
Subscribe to Filmibeat Kannada

ಜನವರಿಯಿಂದ ಜೂನ್ ವರೆಗೆ ಒಟ್ಟು 53 ಚಿತ್ರಗಳು ಬಿಡುಗಡೆಯಾದವು. ಇದಲ್ಲದೇ ರಾಜ್ ಅಭಿನಯದ ಎರಡು ಕನಸು ಮತ್ತು ಶಿವಣ್ಣ ಅಭಿನಯದ ಓಂ ಚಿತ್ರಗಳು ಡಿಜಿಟಲೀಕರಣಗೊಂಡು ಮರು ಬಿಡುಗಡೆಯಾದವು.

ಜನವರಿ ಒಂದರಂದು ಬಿಡುಗಡೆಯಾದ ಗಣೇಶ್ ಅಭಿನಯದ ಖುಷಿ ಖುಷಿಯಾಗಿ ಚಿತ್ರದಿಂದ ಜೂನ್ 26ರಂದು ಬಿಡುಗಡೆಯಾದ ಮೂರು ಚಿತ್ರಗಳ ತನಕ, ಕನ್ನಡ ಚಿತ್ರಗಳ ಪರ್ಫಾರ್ಮೆನ್ಸ್ ಆರಕ್ಕೇರದೇ ಮೂರಕ್ಕಿಳಿಯದೇ ಇದ್ದರೂ ತಕ್ಕ ಮಟ್ಟಿಗೆ ಆಶಾದಾಯಕವಾಗಿಯಂತೂ ಇತ್ತು. (6 ತಿಂಗಳ ರಿಪೋರ್ಟ್: ಸೋತ ಚಿತ್ರಗಳು)

ಜನವರಿ ತಿಂಗಳಲ್ಲಿ ಹನ್ನೊಂದು, ಫೆಬ್ರವರಿ ತಿಂಗಳಲ್ಲಿ ಏಳು, ಮಾರ್ಚ್ ತಿಂಗಳಲ್ಲಿ ಹನ್ನೊಂದು, ಏಪ್ರಿಲ್ ತಿಂಗಳಲ್ಲಿ ಹನ್ನೊಂದು ಚಿತ್ರಗಳು ಬಿಡುಗಡೆಯಾದವು. (ಅರ್ಧವಾರ್ಷಿಕ ರಿಪೋರ್ಟ್ : ರಿಮೇಕ್ ಚಿತ್ರಗಳಿಗೆ ಪೆಟ್ಟು)

ಇನ್ನು ಮೇ ತಿಂಗಳಲ್ಲಿ ಏಳು ಮತ್ತು ಜೂನ್ ತಿಂಗಳಲ್ಲಿ ಆರು ಚಿತ್ರಗಳು ರಿಲೀಸ್ ಆದವು. ಮೊದಲ ಆರು ತಿಂಗಳಲ್ಲಿ ಹಿಟ್/ಸೂಪರ್ ಹಿಟ್ ಆದ ಚಿತ್ರಗಳಾವು ಸ್ಲೈಡ್ ಕ್ಲಿಕ್ಕಿಸಿ..

ಸಿದ್ದಾರ್ಥ

ರಾಜ್ ತಲೆಮಾರಿನ ಮೂರನೇ ಕುಡಿ ವಿನಯ್ ರಾಜಕುಮಾರ್ ಅಭಿನಯದ ಸಿದ್ದಾರ್ಥ ಚಿತ್ರ ಜನವರಿ ತಿಂಗಳಲ್ಲಿ ಬಿಡುಗಡೆಯಾಯಿತು. ಚಿತ್ರ ಕೆಲವು ಸೆಂಟರುಗಳಲ್ಲಿ ಅರ್ಥ ಶತಕ ಪೂರೈಸಿದವು. ಪ್ರಕಾಶ್ ನಿರ್ದೇಶನದ ಈ ಚಿತ್ರವನ್ನು ರಾಜ್ ಹೋಂ ಬ್ಯಾನರಿನಲ್ಲಿ ನಿರ್ಮಿಸಲಾಗಿತ್ತು. ಚಿತ್ರದ ಪ್ರಮುಖ ತಾರಾಗಣದಲ್ಲಿ ವಿನಯ್ ರಾಜಕುಮಾರ್, ಅಪೂರ್ವ ಆರೋರ ಮತ್ತು ಸುಧಾರಾಣಿ ಮುಂತಾದವರಿದ್ದರು.

ಮೈತ್ರಿ

ಪ್ರೇಕ್ಷಕರಿಂದ ಭಾರೀ ಪ್ರಶಂಸೆಗೊಳಗಾದ ಮೈತ್ರಿ ಚಿತ್ರವನ್ನು ಗಿರಿರಾಜ್ ನಿರ್ದೇಶಿಸಿದ್ದರು. ಓಂಕಾರ್ ಮೂವೀಸ್ ಬ್ಯಾನರಿನಲ್ಲಿ ಮೂಡಿ ಬಂದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪುನೀತ್ ರಾಜಕುಮಾರ್, ಮೋಹನ್ ಲಾಲ್, ಅತುಲ್ ಕುಲ್ಕರ್ಣಿ, ಅರ್ಚನ, ಭಾವನಾ ಮುಂತಾದವರಿದ್ದರು.

ರುದ್ರತಾಂಡವ

ತಮಿಳಿನ ಪಾಂಡ್ಯನಾಡು ಚಿತ್ರದ ರಿಮೇಕ್ ಸಿನಿಮಾ ರುದ್ರತಾಂಡವ. ಚಿರಂಜೀವಿ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಗಿರೀಶ್ ಕಾರ್ನಾಡ್, ಕುಮಾರ್ ಗೋವಿಂದ್, ರವಿಶಂಕರ್ ಮುಂತಾದವರಿದ್ದರು.

ಕೃಷ್ಣಲೀಲಾ

ಶಶಾಂಕ್ ನಿರ್ದೇಶನದ ವರ್ಷದ ಸೂಪರ್ ಹಿಟ್ ಚಿತ್ರ ಕೃಷ್ಣಲೀಲಾ. ಅಜೇಯ್ ರಾವ್ ನಿರ್ಮಿಸಿ, ನಟಿಸಿದ್ದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಮಯೂರಿ ಮತ್ತು ರಂಗಾಯಣ ರಘು ಮುಂತಾದವರಿದ್ದರು.

ರಣವಿಕ್ರಮ

ಪವನ್ ಒಡೆಯರ್ ನಿರ್ದೇಶನದ ರಣವಿಕ್ರಮ ಚಿತ್ರ ಕೂಡಾ ವರ್ಶದ ಹಿಟ್ ಚಿತ್ರಗಳಲ್ಲೊಂದು. ಪುನೀತ್ ರಾಜಕುಮಾರ್, ಅಂಜಲಿ, ಆದಶರ್ಮಾ, ರಂಗಾಯಣ ರಘು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ರನ್ನ

ತೆಲುಗಿನ ಅತ್ತಾರೆಂಟೇಕಿ ದಾರಿಯೇದಿ ಚಿತ್ರದ ರಿಮೇಕ್ ರನ್ನ. ಸುದೀಪ್, ಮಧು, ರಚಿತಾ ರಾಮ್, ಹರಿಪ್ರಿಯ, ಪ್ರಕಾಶ್ ರಾಜ್, ದೇವರಾಜ್ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ರನ್ನ ಚಿತ್ರದ ವರ್ಷದ ಮತ್ತೊಂದು ಹಿಟ್ ಚಿತ್ರ.

ವಜ್ರಕಾಯ

ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಶಿವಣ್ಣ, ಕರುಣ್ಯಾ ರಾಮ್, ನಭಾ ನಟೇಶ್, ಸಾಧು ಕೋಕಿಲ, ಅವಿನಾಶ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದರು.

ಗಣಪ

ಪ್ರಭು ಶ್ರೀನಿವಾಸ್ ನಿರ್ದೇಶನದ ಗಣಪ ಚಿತ್ರದಲ್ಲಿ ಸಂತೋಶ್, ಪ್ರಿಯಾಂಕ, ಪದ್ಮಜಾ ರಾವ್, ಪೆಟ್ರೋಲ್ ಪ್ರಸನ್ನ ಮುಂತಾದವರಿದ್ದರು.

English summary
List of hit movies released from January to June 2015 .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada