February 2024: ಫೆಬ್ರವರಿಯಲ್ಲಾದ್ರೂ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಾ? ಲಿಸ್ಟ್‌ನಲ್ಲಿ ಇರೋದೇನು?

2023 ಡಿಸೆಂಬರ್ 29ಕ್ಕೆ ದರ್ಶನ್ ನಟನೆಯ 'ಕಾಟೇರ' ರಿಲೀಸ್ ಆಗಿತ್ತು. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಷು ಕೊಟ್ಟಿದೆ. ವಿತರಕರು, ಪ್ರದರ್ಶಕರು ಹಾಗೂ ನಿರ್ಮಾಪಕರ ಜೇಬನ್ನು ತುಂಬಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಿಗಾಗಿಯೇ ಕಾದು ಕೂತಿದ್ದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದೇ ಜೋಷ್‌ನಲ್ಲಿ ಜನವರಿಯಲ್ಲಿ 'ಬ್ಯಾಚುಲರ್ ಪಾರ್ಟಿ' ಹಾಗೂ 'ಉಪಾಧ್ಯಕ್ಷ' ಅಂತಹ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. ಈ ಎರಡೂ ಸಿನಿಮಾಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಕಾಟೇರ' ರಿಲೀಸ್ ಆಗಿ 25 ದಿನಗಳಾಗಿದ್ದರೂ, ಥಿಯೇಟರ್‌ನಲ್ಲಿ ಇನ್ನೂ ಸದ್ದು ಮಾಡುತ್ತಲೇ ಇದೆ.

List of Kannada Movies releasing in February 2024

ಇದೇ ಜೋಷ್‌ನಲ್ಲಿ 2024ರ ಮೊದಲ ತಿಂಗಳು ಮುಗಿಯುವುದರೊಳಗೆ ಸುಮಾರು 15ಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿವೆ. ಈಗ ಜನವರಿ ಮುಗಿಸಿ, ಫೆಬ್ರವರಿಯಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಹಾಗಿದ್ದರೆ, ಫೆಬ್ರವರಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳ್ಯಾವುವು? ಆ ಪಟ್ಟಿ ಇಲ್ಲಿದೆ.

'ಸಪ್ಲೇಯರ್ ಶಂಕರ'

'ಗಂಟೂಮೂಟೆ', 'ಟಾಮ್ ಅಂಡ್ ಜೆರ್ರಿ'ಯಲ್ಲಿ ನಟಿಸಿರೋ ನಿಶ್ಚಿತ್ ಕರೋಡಿಯ ಮೂರನೇ ಸಿನಿಮಾ 'ಸಪ್ಲೇಯರ್ ಶಂಕರ'. ರಂಜಿತ್ ಸಿಂಗ್ ರಜಪೂತ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಇದು ಬಾರ್ ಸಪ್ಲೇಯರ್ ಒಬ್ಬನ ಬದುಕಿನ ಕಥೆಯನ್ನು ತೆರೆಮೇಲೆ ತರಲಾಗಿದೆ. 2022ರಲ್ಲಿ 'ಲಗೋರಿ' ಸಿನಿಮಾದಲ್ಲಿ ನಟಿಸಿರುವ ದೀಪಿಕಾ ಆರಾಧ್ಯ ಈ ಸಿನಿಮಾಗೂ ನಾಯಕಿ. ಹಾಗೇ ಗೋಪಾಲಕೃಷ್ಣ ದೇಶಪಾಂಡೆ, ಜ್ಯೋತಿ ರೈ ಹಾಗೂ ನವೀನ್ ಡಿ ಪಡಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಫೆಬ್ರವರಿ 2ರಂದು ರಿಲೀಸ್ ಆಗುತ್ತಿದೆ.

ಒಂದು ಸರಳ ಪ್ರೇಮಕಥೆ

ನಿರ್ದೇಶಕ ಸಿಂಪಲ್ ಸುನಿ ಹಾಗೂ ವಿನಯ್ ರಾಜ್‌ಕುಮಾರ್ ಮೊದಲ ಕಾಂಬಿನೇಷನ್ ಸಿನಿಮಾ 'ಒಂದು ಸರಳ ಪ್ರೇಮಕಥೆ'. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದರೂ, ಇಲ್ಲೊಂದು ಮ್ಯೂಸಿಕಲ್ ಜರ್ನಿ ಇರಲಿದೆ. ವಿನಯ್ ರಾಜ್‌ಕುಮಾರ್ ಜೊತೆ ಮಲ್ಲಿಕಾ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಸ್ವಾತಿಷ್ಠ ಕೃಷ್ಣನ್, ಸಾಧುಕೋಕಿಲಾ ಹಾಗೂ ಅರುಣ್ ಬಾಲರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಫೆಬ್ರವರಿ 8ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

List of Kannada Movies releasing in February 2024

ಜಸ್ಟ್ ಪಾಸ್

'ಇರುವುದೆಲ್ಲವ ಬಿಟ್ಟು', 'ಗಜಾನನ & ಸನ್ಸ್' ಹಾಗೂ 'ಹೊಂದಿಸಿ ಬರೆಯಿರಿ' ಸಿನಿಮಾಗಳಲ್ಲಿ ನಟಿಸಿರುವ ಶ್ರೀ ಮಹಾದೇವ್ 'ಜಸ್ಟ್ ಪಾಸ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಕೆ ಎಂ ರಘುನಾಥ್ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಪ್ರಣತಿ ನಟಿಸಿದ್ದು, ಗೋವಿಂದೇ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಜಸ್ಟ್ ಪಾಸ್' ಸಿನಿಮಾ ಫೆಬ್ರವರಿ 9 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

'5D'

ಎಸ್‌.ನಾರಾಯಣ್ ನಿರ್ದೇಶನದ '5D' ಸಿನಿಮಾ ಫೆಬ್ರವರಿ 16ರಂದು ರಿಲೀಸ್ ಆಗುತ್ತಿದೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಎಸ್‌.ನಾರಾಯಣ್ ನಿರ್ದೇಶನದ 50ನೇ ಸಿನಿಮಾ.

ಪ್ರಥ್ವಿ ಅಂಬರ್-'ಜೂನಿ'

ಪೃಥ್ವಿ ಅಂಬರ್ ನಟನೆಯ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ ಮೊದಲನೇ ಸಿನಿಮಾ 'ಜೂನಿ'. ಶೆಫ್ ಆಗಿ ನಟಿಸಿರುವ ಪೃಥ್ಚಿ ಅಂಬರ್ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ರಿಷಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ಫೆಬ್ರವರಿ 9ರಂದು ರಿಲೀಸ್ ಆಗುತ್ತಿದೆ.

'ಮತ್ಸ್ಯಗಂಧ' Vs 'ಫಾರ್ ರಿಜಿಸ್ಟ್ರೇಷನ್'

ಇದೇ ತಿಂಗಳು ಬಹಳ ದಿನಗಳ ಬಳಿಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟನೆಯ 'ಮತ್ಸ್ಯಗಂಧ' ಹಾಗೂ 'ಫಾರ್ ರಿಜಿಸ್ಟ್ರೇಷನ್' ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿದೆ. ಫೆಬ್ರವರಿ 23 ಈ ಎರಡೂ ಸಿನಿಮಾಗಳು ಬಿಡುಗಡೆಯಾಗುತ್ತಿವೆ. 'ಫಾರ್ ರಿಜಿಸ್ಟ್ರೇಷನ್‌'ನಲ್ಲಿ ಪೃಥ್ವಿ ಅಂಬರ್ ಜೊತೆ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೇವರಾಜ್ ಪೂಜಾರಿ ನಿರ್ದೇಶಿಸಿದ 'ಮತ್ಸ್ಯಗಂಧ' ಸಿನಿಮಾದಲ್ಲಿ ಪೃಥ್ವಿ ಅಂಬರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ಸಿದ್ಧಿ ಸಂಗೀತ ನಿರ್ದೇಶನ ಮಾಡಿರೋದು ಮತ್ತೊಂದು ವಿಶೇಷ.

More from Filmibeat

English summary
February 2024 releasing Kannada movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X