ಒಡೆದು ಹಾಕಿದ ಕಾವೇರಿ ಚಿತ್ರಮಂದಿರದಲ್ಲಿ ಅತೀ ಹೆಚ್ಚು ವಾರ ಪ್ರದರ್ಶನ ಕಂಡ ಸಿನಿಮಾಗಳ್ಯಾವುವು ಗೊತ್ತೇ?

ಬೆಂಗಳೂರಿನಲ್ಲಿ ಒಂದೊಂದು ಚಿತ್ರಮಂದಿರಗಳು ಮುಚ್ಚುತ್ತಿವೆ. ಈಗಾಗಲೇ ಬೆಂಗಳೂರಿನ ಪ್ರಮುಖ ಕೆಜಿ ಚಿತ್ರಮಂದಿರದಲ್ಲಿ ಹಲವು ಥಿಯೇಟರ್‌ಗಳು ಮುಚ್ಚಲ್ಪಟ್ಟಿವೆ. ಈಗ ಆ ಸಾಲಿಗೆ ಕಾವೇರಿ ಚಿತ್ರಮಂದಿರ ಕೂಡ ಸೇರಿಕೊಂಡಿದೆ. ಸುಮಾರು 50 ವರ್ಷಗಳಷ್ಟು ಇತಿಹಾಸ ಹೊಂದಿರುವ ಚಿತ್ರಮಂದಿರ ಮುಚ್ಚಲ್ಪಟ್ಟಿರುವುದು ಸಿನಿಮಾ ಮಂದಿಗೆ ಆತಂಕ ಸೃಷ್ಟಿಸಿದೆ.

ಲಾಕ್‌ಡೌನ್ ಬಳಿಕ ಪ್ರೇಕ್ಷಕರು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬರುತ್ತಿಲ್ಲ. ಓಟಿಟಿಯಲ್ಲಿಯೇ ಸಿನಿಮಾಗಳನ್ನು ನೋಡುವುದನ್ನು ಅಭ್ಯಾಸ ಆಗಿ ಹೋಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ ಹಾವಳಿ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಸೂಪರ್‌ಸ್ಟಾರ್ ಸಿನಿಮಾಗಳು ವರ್ಷಕ್ಕೆ ಒಂದು ಸಿನಿಮಾವೂ ರಿಲೀಸ್ ಆಗುತ್ತಿಲ್ಲ.

List of long run movies in recently closed Bengaluru s Iconic theater cauvery

ಈ ಎಲ್ಲಾ ಕಾರಣಕ್ಕೆ 50 ವರ್ಷಗಳಿಂದ ಕನ್ನಡ, ಹಿಂದಿ, ತೆಲುಗು, ತಮಿಳು ಸಿನಿಮಾಗಳನ್ನು ಪ್ರದರ್ಶನ ಮಾಡಿದ್ದ ಕಾವೇರಿ ಥಿಯೇಟರ್‌ ಅನ್ನು ಒಡೆದು ಹಾಕಿ ಕಮರ್ಷಿಯಲ್ ಕಾಂಪ್ಲೆಕ್ಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಹಾಗಿದ್ದರೆ, ಇತಿಹಾಸದ ಪುಟಗಳನ್ನು ಸೇರಿರುವ ಈ ಚಿತ್ರಮಂದಿರದಲ್ಲಿ ಕೆಲವು ಸಿನಿಮಾಗಳು 20 ರಿಂದ 30 ವಾರಗಳು ಪ್ರದರ್ಶನ ಕಂಡಿವೆ. ಆ ಸಿನಿಮಾಗಳ ಪಟ್ಟಿ ಇಲ್ಲಿದೆ.

ಕಾವೇರಿ ಚಿತ್ರಮಂದಿರ 'ಬಂಗಾರದ ಪಂಜರ' ಸಿನಿಮಾ ಪ್ರದರ್ಶನ ಮಾಡುವುದರಿಂದ ಆರಂಭಗೊಂಡಿತ್ತು. ಇಲ್ಲಿಂದ ಸುಮಾರು 50 ವರ್ಷ ಅದ್ಭುತ ಸಿನಿಮಾಗಳನ್ನು ಪ್ರದರ್ಶನ ಮಾಡಿದೆ. ಕೆ ವಿಶ್ವನಾಥ್ ನಿರ್ದೇಶಿಸಿದ ಐಕಾನಿಕ್ ಸಿನಿಮಾ 'ಶಂಕರಾಭರಣಂ' 1980, ಫೆಬ್ರವರಿ 2ರಂದು ತೆರೆಕಂಡಿತ್ತು. ಈ ಸಿನಿಮಾವನ್ನು ಬೆಂಗಳೂರಿನ ಇದೇ ಕಾವೇರಿ ಚಿತ್ರಮಂದಿರಲ್ಲಿ ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಅಂದು ಸುಮಾರು 30 ವಾರಗಳ ಕಾಲ ಪ್ರದರ್ಶನ ಕಂಡಿತ್ತು. ಇದು ಅತೀ ಹೆಚ್ಚು ವಾರ ಪ್ರದರ್ಶನ ಕಂಡ ಸಿನಿಮಾ ಆಗಿತ್ತು.

ಡಾ.ರಾಜ್‌ಕುಮಾರ್ ಅಭಿನಯದ 'ಪ್ರೇಮದ ಕಾಣಿಕೆ' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಣ್ಣಾವ್ರ ಈ ಸಿನಿಮಾವನ್ನು ವಿ ಸೋಮಶೇಖರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಇದೇ ಕಾವೇರಿ ಚಿತ್ರಮಂದಿರಲ್ಲಿ ಸುಮಾರು 12 ವಾರಗಳ ಕಾಲ ಪ್ರದರ್ಶನ ಕಂಡಿತ್ತು. ಹಾಗೇ ರಾಜ್‌ಕುಮಾರ್ ನಟಿಸಿದ 'ರವಿಚಂದ್ರ', 'ವಸಂತಗೀತ' ಅಂತಹ ಸಿನಿಮಾಗಳು ಇಲ್ಲಿಯೇ ಪ್ರದರ್ಶನ ಕಂಡಿವೆ.

List of long run movies in recently closed Bengaluru s Iconic theater cauvery

1995ರಲ್ಲಿ ಕಾವೇರಿ ಚಿತ್ರಮಂದಿರವನ್ನು ನವೀಕರಣ ಮಾಡಲಾಗಿತ್ತು. ಈ ವೇಳೆ ಸ್ವತ: ರಾಜ್‌ಕುಮಾರ್ ಅವರು ಬಂದು ಉದ್ಘಾಟನೆ ಮಾಡಿದ್ದರು. ಈ ವೇಳೆ ಉಪೇಂದ್ರ ಹಾಗೂ ಶಿವಣ್ಣ ನಟಿಸಿದ ಸಿನಿಮಾ 'ಓಂ' ಪ್ರದರ್ಶನ ಕಂಡಿತ್ತು. ಹಾಗೇ ಶಾರುಖ್ ಖಾನ್ ಅಭಿನಯದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸಿನಿಮಾ ಬಿಡುಗಡೆಯಾಗಿತ್ತು. ಅದು ಸುಮಾರು 22 ವಾರಗಳ ಕಾಲ ಇದೇ ಕಾವೇರಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು.

ಶಂಕರ್ ನಿರ್ದೇಶಿಸಿದ ಕಮಲ್ ಹಾಸನ್ ಅಭಿನಯದ ಸಿನಿಮಾ 'ಇಂಡಿಯನ್' ಸುಮಾರು 100 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಹಾಗೇ ಇತ್ತೀಚೆಗೆ ತೆರೆಕಂಡಿದ್ದ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ 'ಕಾಟೇರ' ಕೂಡ ಈ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗಿತ್ತು. ಈ ಚಿತ್ರಮಂದಿರದಲ್ಲಿ ಕೆಲವು ವರ್ಷಗಳಿಂದ ಹೆಚ್ಚಾಗಿ ಹಿಂದಿ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು.

More from Filmibeat

English summary
List of the movie released in recently closed Cauvery theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X