15th BIFFes Movie List: ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ ಮಾರ್ಚ್ 4ರಂದು ಯಾವ್ಯಾವ ಸಿನಿಮಾ ನೋಡ್ಬಹುದು?
15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮಾರ್ಚ್ 1ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಚಲನ ಚಿತ್ರೋತ್ಸವ ಆರಂಭ ಆಗಿದೆ. 8 ದಿನಗಳ ಕಾಲ ನಡೆಯೋ ಈ ಚಲನ ಚಿತ್ರೋತ್ಸವದಲ್ಲಿ ಜಗತ್ತಿನ ಕೆಲವು ಅದ್ಭುತ ಸಿನಿಮಾಗಳನ್ನು ಈಗಾಗಲೇ ಸಿನಿಪ್ರಿಯರು ಕಣ್ತುಂಬಿ ಕೊಟ್ಟಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಿ ಪ್ರದರ್ಶನ ಕಂಡಿವೆ.
ಪ್ರತಿ ವರ್ಷದಂತೆ ಬೆಂಗಳೂರಿನಲ್ಲಿ ಮೂರು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿವೆ. ಬೆಂಗಳೂರಿನ ಒರಾಯನ್ ಮಾಲ್, ಡಾ. ರಾಜ್‌ಕುಮಾರ್ ಭವನ, ಬನಶಂಕರಿಯ ಸುಚಿತ್ರಾ ಫಿಲ್ಮ್ ಸಿಟಿಯಲ್ಲಿ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಓರಾಯನ್ ಮಾಲ್‌ನಲ್ಲಿ ಪ್ರತಿ ದಿನ 40ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಹಾಗೇ ಮಾರ್ಚ್ 4ರಂದು ಹೆಚ್ಚು ಕಡಿಮೆ 43 ಸಿನಿಮಾಗಳು ಒರಾಯನ್ ಮಾಲ್ ಒಂದರಲ್ಲೇ ಪ್ರದರ್ಶನ ಕಾಣುತ್ತಿವೆ.

ಡಾ.ರಾಜ್‌ಕುಮಾರ್ ಭವನ, ಸುಚಿತ್ರಾದಲ್ಲಿ ಮೂರು ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಹಾಗಿದ್ದರೆ ಮಾರ್ಚ್ 4ರಂದು ಪ್ರದರ್ಶನ ಕಾಣುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಒರಾಯನ್ ಮಾಲ್ - ರಾಜಾಜಿನಗರ
ಸ್ಕ್ರೀನ್ 1 ಮಾಂಗಲ್ಯ ಬಂಧನ (ಜ್ಯೂರಿ ಸ್ಕ್ರೀನಿಂಗ್)
ಸ್ಕ್ರೀನ್ 2 ಮುನ್ನುಡಿ (ಜ್ಯೂರಿ ಸ್ಕ್ರೀನಿಂಗ್)
ಸ್ಕ್ರೀನ್ 3 ಭುವನ್ ಶೋಮೆ, ಆಕಲೇರ್ ಸಂದನೇ
ಸ್ಕ್ರೀನ್ 4 ಡ್ಯಾಮೇಜ್, ಹಾಫ್ ಮ್ಯಾನ್ಸ್ ಫೆರಿ ಟೇಲ್ಸ್, ಗರ್ಲ್, ದ ಡ್ರೀಮರ್, ಇವಿಲ್ ಡಸ್ ನಾಟ್ ಎಕ್ಸಿಸ್ಟ್,
ಸ್ಕ್ರೀನ್ 5 ಎಂಬ್ರಿಯೋ ಲಾರ್ವಾ ಬಟರ್‌ಫ್ಲೈ, ಟೋಲ್, ರಾಡಿಕಲ್, ದ ಟೀಚರ್ಸ್ ಲಾಂಜ್, ಅನಾಟಮಿ ಆಫ್ ಎ ಫಾಲ್,
ಸ್ಕ್ರೀನ್ 6 ಲಾಸ್ಟ್ ಸೋಲ್ಜ್, ಗರುಡ ಪುರಾಣ, ಒಮೆನ್, #ನಾನು ಇವಳ ಅಭಿಮಾನಿ, ಇನ್‌ಸೈಡ್ ದ ಎಲ್ಲೋ ಕಕೂನ್ ಶಲ್,
ಸ್ಕ್ರೀನ್ 7 ಸ್ವೀಟ್ ಡ್ರೀಮ್ಸ್, ಲೆಟ್ ಮಿ ಹೋ, ಅಮಲ್, ಪರ್ಫೆಕ್ಟ್ ಡೇಸ್, ದಿ ಟೇಸ್ಟ್ ಆಫ್ ಥಿಂಗ್ಸ್,
ಸ್ಕ್ರೀನ್ 8 ನಾಂಗಲ್, ದ ರೆಡ್ ಸೂಟ್‌ಕೇಸ್, ದ ಬರ್ಡನ್ಡ್, ತಡವು,
ಸ್ಕ್ರೀನ್ 9 ಅಯೋತಿ, ದೂರದರ್ಶನ, ಲೂಸಿಯಾ, ಔಟ್ ಹೌಸ್, ಶವೇರ್,
ಸ್ಕ್ರೀನ್ 10 ಇಂಜೆಬೋರ್ ಬ್ಯಾಚ್‌ಮನ್(Ingeborg Bachmann-Journey into the desert), ಟೆಂಪೊರರೀಸ್, ಪ್ಯಾರಡೈಸ್, ಮಿ ಕ್ಯಾಪ್ಟನ್, ಇನ್‌ಶಾ ಅಲ್ಲ ಎ ಬಾಯ್,
ಸ್ಕ್ರೀನ್ 11 ಸಮರ್ಪಣ್, ಸಿಸಿ ಅಂಡ್ ಐ, ಕ್ರಾಂತಿ, ಆಲ್ ಇಯರ್ಸ್, ಕ್ಲೋಸಪ್,
ಡಾ.ರಾಜ್‌ಕುಮಾರ್ ಭವನ - ಚಾಮರಾಜಪೇಟೆ
ತತ್ಸಮ ತದ್ಬವ, ರಂಗ ಸಮುದ್ರ, ನಿರ್ವಾಣ
ಸುಚಿತ್ರಾ - ಬನಶಂಕರಿ
ಜಗಜ್ಯೋತಿ ಬಸವೇಶ್ವರ, ಮುಂಗಾರು ಮಳೆ, ಭಕ್ತ ಕನಸದಾಸ,


Click it and Unblock the Notifications











