»   » ಹೀರೋ ಹೀರೋಯಿನ್ ಆಗೂಂದ್ರೆ ಮದ್ವೆನೇ ಆಗ್ ಬಿಟ್ರು!

ಹೀರೋ ಹೀರೋಯಿನ್ ಆಗೂಂದ್ರೆ ಮದ್ವೆನೇ ಆಗ್ ಬಿಟ್ರು!

Posted By:
Subscribe to Filmibeat Kannada

ಬೆಳ್ಳಿಪರದೆಯ ಮೇಲೆ ಸುಂದರವಾಗಿ ಮತ್ತು ಆದರ್ಶ ಪ್ರಾಯವಾಗಿ ಕಾಣಿಸುವ ತಾರಾ ಜೋಡಿಗಳು ನಿಜ ಜೀವನದಲ್ಲೂ ಜೋಡಿಯಾಗಲಿ ಎಂದು ಕೆಲವು ಸಿನಿರಸಿಕರು ಆಶಿಸುವುದು ಸಾಮಾನ್ಯ.

ಅದರಂತೇ, ಭಾರತೀಯ ಚಿತ್ರೋದ್ಯಮದಲ್ಲಿ ಹಲವು ತಾರಾ ಜೋಡಿಗಳು ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ ಹಾಗೇ ವಿಚ್ಚೇದನ ಪಡೆದ ಉದಾಹರಣೆಗಳೂ ನಮ್ಮ ಮುಂದಿದೆ. ಈಗ ವಿಷ್ಯ ಅದಲ್ಲ..

ಬಾಲಿವುಡ್ ನಲ್ಲಿ ದಿಲೀಪ್ ಕುಮಾರ್ ಮತ್ತು ಸಾಯಿರಾಬಾನು, ಧರ್ಮೇಂದ್ರ ಮತ್ತು ಹೇಮಾಮಾಲಿನಿ, ಅಮಿತಾಬ್ ಬಚ್ಚನ್ ಮತ್ತು ಜಯಾಬಾಧುರಿ, ರಾಜ್ ಬಬ್ಬರ್ ಮತ್ತು ದಿ.ಸ್ಮಿತಾ ಪಾಟೀಲ್,

ಮುಂದುವರಿಯುತ್ತಾ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ, ಅಜಯ್ ದೇವಗನ್ ಮತ್ತು ಕಾಜೋಲ್, ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್..ಹೀಗೆ ಪಟ್ಟಿ ಸಾಗುತ್ತದೆ.

ಇನ್ನು ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ, ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್, ನಾಗಾರ್ಜುನ ಮತ್ತು ಅಮಲಾ ಹೀಗೆ ಆನ್ ಸ್ಕ್ರೀನ್ ಜೋಡಿಗಳು ಸಪ್ತಪದಿ ತುಳಿದ ಉದಾಹರಣೆಗಳೂ ಇವೆ.

ದಕ್ಷಿಣಭಾರತದ ಚಿತ್ರೋದ್ಯಮಕ್ಕೆ ಹೋಲಿಸಿದರೆ, ಕನ್ನಡ ಚಿತ್ರೋದ್ಯಮದಲ್ಲಿ ತಾರಾಜೋಡಿಗಳ ಕಂಕಣಭಾಗ್ಯದ ಪಟ್ಟಿ ದೊಡ್ಡದು. ಅದರಲ್ಲಿ ಕೆಲವೊಂದು ಪ್ರಮುಖರ ಹೆಸರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸುದರ್ಶನ್ - ಶೈಲಾಶ್ರೀ

ಕನ್ನಡ ಚಿತ್ರರಂಗದ ಹಿರಿಯ ನಟ ಸುದರ್ಶನ್ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತನ್ನ ಜೊತೆ ದಶಕಗಳ ಹಿಂದೆ ನಟಿಸಿದ್ದ ನಟಿ ಶೈಲಾಶ್ರೀ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರು ನಟಿಸಿದ ಪ್ರಮುಖ ಚಿತ್ರಗಳೆಂದರೆ ಕಾಡಿನ ರಹಸ್ಯ, ಮಾಲತಿ ಮಾಧವ, ಕಳ್ಳರ ಕಳ್ಳ.. ಈಗ ಸುದರ್ಶನ್ ಟಿವಿ ಧಾರವಾಹಿಯಲ್ಲೂ ನಟಿಸುತ್ತಿದ್ದಾರೆ.

ದಿ.ಡಾ ವಿಷ್ಣು - ಭಾರತಿ

ಕನ್ನಡ ಚಿತ್ರೋದ್ಯಮದ ಮತ್ತೊಂದು ಹೆಸರಾಂತ ತಾರಾಜೋಡಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ಭಾರತಿ. 1975ರಲ್ಲಿ ಮದುವೆಯಾದ ಈ ಜೋಡಿ ಮಕ್ಕಳ ಭಾಗ್ಯ, ಬಂಗಾರದ ಜಿಂಕೆ, ನಾಗರಹೊಳೆ, ದೇವರ ಗುಡಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

ರೆಬೆಲ್ ಸ್ಟಾರ್ - ಸುಮಲತಾ

ಮತ್ತೊಂದು ತಾರಾ ಜೋಡಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ. 1991ರಲ್ಲಿ ಮದುವೆಯಾದ ಇವರು ನ್ಯೂಡೆಲ್ಲಿ ಮುಂತಾದ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.

ಅನಂತ್ ನಾಗ್ - ಗಾಯತ್ರಿ

ಮಕ್ಕಳಿರಲವ್ವ ಮನೆತುಂಬಾ ಚಿತ್ರದಲ್ಲಿ ನಟಿಸಿದ್ದ ಅನಂತ್ ನಾಗ್ ಮತ್ತು ಗಾಯತ್ರಿ 1987ರಲ್ಲಿ ಸಪ್ತಪದಿ ತುಳಿದಿದ್ದರು.

ದಿ.ಶಂಕರ್ ನಾಗ್ - ಆರುಂಧತಿ ನಾಗ್

ಕನ್ನಡ ಚಿತ್ರೋದ್ಯಮದ ಮತ್ತೊಂದು ಸುಂದರ ಜೋಡಿ ಶಂಕರ್ ನಾಗ್ - ಆರುಂಧತಿ ನಾಗ್.

ಟೈಗರ್ ಪ್ರಭಾಕರ್ - ಜಯಮಾಲ

ಟೈಗರ್ ಪ್ರಭಾಕರ್ ಮೂರು ಬಾರಿ ಮದುವೆಯಾಗಿದ್ದರು. ಪ್ರಭಾಕರ್ ಮತ್ತು ಜಯಮಾಲ ದಂಪತಿಗಳ ಮಗಳು ನಟಿ ಸೌಂದರ್ಯ ಜಯಮಾಲ. ಜಯಮಾಲ, ಪ್ರಭಾಕರ್ ಅವರಿಗೆ ವಿಚ್ಚೇದನ ನೀಡಿ ಸಿನಿಮಾಟೋಗ್ರಾಫರ್ ಎಚ್ ಎಂ ರಾಮಚಂದ್ರ ಅವರನ್ನು ಮದುವೆಯಾದರು.

ಸುಂದರ್ ರಾಜ್ - ಪ್ರಮೀಳಾ ಜೋಷಾಯಿ

ಎಂಬತ್ತರ ದಶಕದ ಖ್ಯಾತ ಜೋಡಿಯಾದ ಸುಂದರ್ ರಾಜ್ - ಪ್ರಮೀಳಾ ಜೋಷಾಯಿ ಕನ್ನಡ ಚಿತ್ರೋದ್ಯಮದ ಮತ್ತೊಂದು ಹೆಸರಾಂತ ತಾರಾ ದಂಪತಿಗಳು.

ಉಪೇಂದ್ರ - ಪ್ರಿಯಾಂಕ

ರಿಯಲ್ ಸ್ಟಾರ್ ಉಪೇಂದ್ರ 'ಮಿಸ್ ಕೋಲ್ಕತ್ತಾ' ಆಗಿದ್ದ ಪ್ರಿಯಾಂಕ ಅವರನ್ನು ಡಿಸೆಂಬರ್ 2003ರಲ್ಲಿ ಮದುವೆಯಾದರು. H2O ಚಿತ್ರದಲ್ಲಿ ಉಪ್ಪಿ ಮತ್ತು ಪ್ರಿಯಾಂಕ ಜೊತೆಯಾಗಿ ನಟಿಸಿದ್ದರು. ಮದುವೆಯಾದ ನಂತರ ಶ್ರೀಮತಿ ಎನ್ನುವ ಚಿತ್ರದಲ್ಲೂ ಇಬ್ಬರೂ ಜೊತೆಯಾಗಿ ನಟಿಸಿದ್ದರು.

ಜೋಗಿ ಪ್ರೇಮ್ - ರಕ್ಷಿತಾ

ನಿರ್ದೇಶಕ ಕಮ್ ನಟ ಪ್ರೇಮ್, ರಕ್ಷಿತಾ ಅವರನ್ನು 2007ರಲ್ಲಿ ಮದುವೆಯಾದರು.

ಅವಿನಾಶ್ - ಮಾಳವಿಕ

ಅವಿನಾಶ್ ಮತ್ತು ಮಾಳವಿಕ 2001ರಲ್ಲಿ ಸಂಸಾರ ಜೀವನಕ್ಕೆ ಕಾಲಿಟ್ಟರು.

ಶೃತಿ - ಮಹೇಂದರ್

ನಟಿ ಶೃತಿ ಮತ್ತು ನಿರ್ದೇಶಕ ಮಹೇಂದರ್ 1998ರಲ್ಲಿ ಮದುವೆಯಾದರು, ನಂತರ 2009ರಲ್ಲಿ ವಿಚ್ಚೇದನ ಪಡೆದರು.

ಸ್ಪೂರ್ಥಿ - ವಿಶ್ವಾಸ್

ಈ ಇಬ್ಬರು ಜೋಡಿಗಳಿಗೆ ಜಾಲಿ ಡೇಸ್ ಜೋಡಿಗಳೆಂದೇ ಹೆಸರು. ಇಬ್ಬರೂ 2014ರಲ್ಲಿ ಮದುವೆಯಾದರು.

English summary
List of Sandalwood film industries celebrity couples.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada