Lok Sabha Election 2024: ಕಾವೇರಿದ ಮಂಡ್ಯದಲ್ಲಿ ರಮ್ಯಾ Vs ಸುಮಲತಾ; ಯಾರ ಕೈ ಮೇಲಾಗುತ್ತೆ?

ಈ ಬಾರಿ ಲೋಕಸಭಾ ಚುನಾವಣೆ ರಾಜ್ಯದ ಕೆಲವು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮೈಸೂರು, ಮಂಡ್ಯ ಕ್ಷೇತ್ರಗಳು ತೀವ್ರ ಕುತೂಹಲವನ್ನು ಕೆರಳಿಸಿವೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಮಂಡ್ಯ ಕ್ಷೇತ್ರದ ಚುನಾವಣಾ ಕಣದಿಂದ ಸುಮಲತಾ ಹಿಂದೆ ಸರಿದಿದ್ದರಿಂದ ಮೈತ್ರಿ ಅಭ್ಯರ್ಥಿ ಎಚ್‌ ಡಿ ಕುಮಾರಸ್ವಾಮಿ ಬಲ ಬಂದಂತಾಗಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಕೂಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಮುಖಂಡರಾದ ಡಿಕೆ ಶಿವಕುಮಾರ್, ಸಿಎಂ ಸಿದ್ಧರಾಮಯ್ಯ ಮಂಡ್ಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

Lok Sabha election 2024 Ramya to campaign in Mandya congress Sumalatha to HDK

ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿಯನ್ನು ಸೋಲಿಸಲೇಬೇಕು ಅಂತ ಪಣ ತೊಟ್ಟಿದ್ದಾರೆ. ಹೀಗಾಗಿ ಮಾಸ್ಟರ್ ಪ್ಲಾನ್ ಮಾಡಿದ್ದು, ಪ್ರಚಾರಕ್ಕೆ ಮಂಡ್ಯದ ಮಾಜಿ ಸಂಸದೆ ಹಾಗೂ ನಟಿ ರಮ್ಯಾರನ್ನು ಕರೆತರುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಇತ್ತ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಸುಮಲತಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಮೋಹಕ ತಾರೆ ರಮ್ಯಾ ಪ್ರಚಾರ ಮಾಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಮತ್ತೆ ಮಂಡ್ಯಗೆ ರಮ್ಯಾರನ್ನು ಕರೆತರುವುದರಿಂದ ಸ್ಟಾರ್ ಚಂದ್ರು ಅವರಿಗೆ ಸ್ಟಾರ್ ಪ್ರಚಾರ ಸಿಕ್ಕಂತೆ ಆಗುತ್ತೆ. ಮಂಡ್ಯದ ಜನರನ್ನು ಸೆಳೆಯುವುದು ಸುಲಭ ಆಗುತ್ತೆ ಅನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ.

Lok Sabha election 2024 Ramya to campaign in Mandya congress Sumalatha to HDK

ಇನ್ನೊಂದು ಕಡೆ ರಮ್ಯಾ ಮಂಡ್ಯ ಸಂಸದೆಯಾಗಿದ್ದಾಗ, ಅಲ್ಲಿನ ಜನರೊಂದಿಗೆ ಒಡನಾಟ ಹೊಂದಿದ್ದರು. ಹೀಗಾಗಿ ರಮ್ಯಾ ಪ್ರಚಾರಕ್ಕೆ ಬರುವುದರಿಂದ ಮಹಿಳೆಯರ ಮತಗಳನ್ನು ಸುಲಭವಾಗಿ ಸೆಳೆಯುವ ಲೆಕ್ಕಾಚಾರವನ್ನು ಕಾಂಗ್ರೆಸ್ ಇಟ್ಟುಕೊಂಡಿದ್ದೆ ಎನ್ನಲಾಗಿದೆ. ಇದೇ ವೇಳೆ ರಾಹುಲ್ ಗಾಂಧಿ, ಡಿ ಕೆ ಶಿವಕುಮಾರ್, ಸಿಎಂ ಸಿದ್ಧರಾಮಯ್ಯ ಕೂಡ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್‌ಗೆ ಟಕ್ಕರ್ ಕೊಡುವುದಕ್ಕೆ ಮೈತ್ರಿ ಕೂಟಗಳು ಮಾಸ್ಟರ್ ಪ್ಲಾನ್ ಮಾಡಿವೆ ಎನ್ನಲಾಗಿದ್ದು, ಹಾಲಿ ಸಂಸದೆ ಸುಮಲತಾರನ್ನು ಪ್ರಚಾರಕ್ಕೆ ಕರೆತರಬಹುದು. ಸುಮಲತಾ ಪ್ರಚಾರಕ್ಕೆ ಬರುವುದರಿಂದ ಅಂಬರೀಶ್ ಅಭಿಮಾನಿಗಳನ್ನು ಎಚ್‌ಡಿ ಕುಮಾರಸ್ವಾಮಿ ಕಡೆ ಸೆಳೆಯುವ ತಂತ್ರ ಹೂಡಿದೆ. ಇನ್ನೊಂದು ಕಡೆ ಸುಮಲತಾ ಪ್ರಚಾರಕ್ಕೆ ಬರುವುದರಿಂದ ದರ್ಶನ್ ಸೇರಿದಂತೆ ಇನ್ನು ಕೆಲ ಸಿನಿಮಾ ತಾರೆಯರು ಸೇರಿಕೊಳ್ಳಬಹುದು.

ಹೀಗಾಗಿ ಮಂಡ್ಯದಲ್ಲಿ ಸ್ಟಾರ್ ಚಂದ್ರು ವರ್ಸಸ್ ಎಚ್‌ ಡಿ ಕುಮಾರಸ್ವಾಮಿ ಅಂತ ಹೇಗಾಗಿದೆಯೋ? ಈಗ ರಮ್ಯಾ ವರ್ಸಸ್ ಸುಮಲತಾ ಅನ್ನುವಂತೆಯೂ ಆಗಿದೆ. ಹೀಗಾಗಿ ಮಂಡ್ಯ ಲೋಕಸಭೆ ಚುನಾವಣೆ ಕುತೂಹಲದಿಂದ ಕೂಡಿದೆ. ಇಲ್ಲಿ ರಮ್ಯಾ ಪ್ರಚಾರ ವರ್ಕೌಟ್ ಆಗುತ್ತಾ? ಇಲ್ಲ ಸುಮಲತಾ ಪ್ರಚಾರ ಕೆಲಸ ಮಾಡುತ್ತಾ? ಅನ್ನು ಕುತೂಹಲ ರಾಜಕೀಯದಲ್ಲಿದೆ.

More from Filmibeat

English summary
Lok Sabha election 2024; Ramya Vs Sumalatha in Mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X