"ದಯವಿಟ್ಟು ಕ್ಷಮೆ ಇರಲಿ.. ಅವಮಾನ ಮಾಡ್ಬೇಕು ಅಂತ ತಮಿಳನ್ನು ಮಾತಾಡಿಲ್ಲ" - ಲೂಸ್ ಮಾದ ಯೋಗಿ

ಲೂಸ್ ಮಾದ ಯೋಗಿ ನಟಿಸುತ್ತಿರುವ ಮುಂದಿನ ಸಿನಿಮಾ 'ರೋಸಿ'. 'ಹೆಡ್‌ಬುಷ್' ನಿರ್ದೇಶಿಸಿದ್ದ ಶೂನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇದೇ ಸಿನಿಮಾ ಫಸ್ಟ್ ಲುಕ್ ಲಾಂಚ್ ಮಾಡುವ ವೇಳೆ ತಮಿಳಿನಲ್ಲಿ ಮಾತಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಸಂಬಂಧ ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ.

ಲೂಸ್ ಮಾದ ಯೋಗಿಯ 'ರೋಸಿ' ಸಿನಿಮಾದಲ್ಲಿ ತಮಿಳಿನ ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಸ್ಯಾಂಡಿ ಫಸ್ಟ್ ಲುಕ್ ರಿವೀಲ್ ಮಾಡಲಾಗಿತ್ತು. ಈ ವೇಳೆ ಕನ್ನಡದಲ್ಲಿಯೇ ಮಾತು ಆರಂಭಿಸಿದ್ದ ಲೂಸ್ ಮಾದ ಯೋಗಿ ಮಧ್ಯದಲ್ಲಿ ತಮಿಳಿನಲ್ಲಿ ಮಾತಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

loose-maada-yogi-apology

ಯೋಗಿ ಬೆಂಗಳೂರಿನಲ್ಲೇ ತಮಿಳು ಮಾತನಾಡಿದ್ದು, ಯೋಗಿ ಮೇಲೆ ಕನ್ನಡಿಗರು ಸಿಡಿಮಿಡಿಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ಬಗ್ಗೆ ಚರ್ಚೆ ಆರಂಭ ಆಗುತ್ತಿದ್ದಂತೆ ಲೂಸ್ ಮಾದ ಯೋಗಿ ಕ್ಷಮೆ ಹೇಳಿದ್ದಾರೆ. ವಿಡಿಯೋ ಮೂಲಕ ತಾನೇಕೆ ಅಲ್ಲಿ ತಮಿಳಿನಲ್ಲಿ ಮಾತಾಡಿದೆ ಅನ್ನೋದನ್ನು ವಿವರಿಸಿದ್ದಾರೆ.

"ನಿನ್ನ ರೋಸಿ ಸಿನಿಮಾದ ಒಂದು ಪೋಸ್ಟರ್ ಲಾಂಚ್ ಮಾಡಿದೆ. ಆ ಒಂದು ಜಾಗದಲ್ಲಿ ತಮಿಳು ಮಾತಾಡಿದ್ದೀನಿ ಅಂತ ಸಾಕಷ್ಟು ಜನರಿಗೆ ಬೇಜಾರಾಗಿದೆ. ನಿಜ ಏನು ಅಂದರೆ, ನಾನು ಕನ್ನಡದಲ್ಲಿ ಶುರು ಮಾಡಿ, ತಮಿಳಿನಲ್ಲಿ ಮಾತಾಡಿ ಕನ್ನಡದಲ್ಲಿಯೇ ಮುಗಿಸಿದ್ದೇನೆ." ಎಂದು ಲೂಸ್ ಮಾದ ಯೋಗಿ ಆ ಸಂದರ್ಭವನ್ನು ವಿವರಿಸಿದ್ದಾರೆ.

ಹಾಗೇ ಯಾರಿಗೂ ಅವಮಾನ ಮಾಡಬೇಕು ಅಂತ ಮಾಡಿಲ್ಲ. ಅಲ್ಲಿ ತಮಿಳರು ಹೆಚ್ಚಿದ್ದರು. ಅದಕ್ಕೆ ತಮಿಳಿನಲ್ಲಿ ಮಾತಾಡಿದೆ ಎಂದಿದ್ದಾರೆ. "ಆದರೂ ಕೂಡ ತುಂಬಾ ಜನಕ್ಕೆ ನೋವಾಗಿದ್ದರೆ, ದಯವಿಟ್ಟು ಕ್ಷಮೆ ಇರಲಿ. ನಾನು ಯಾರಿಗೂ ಅವಮಾನ ಮಾಡಬೇಕು ಅಂತ ಆಗಲಿ. ಬೇಜಾರು ಮಾಡಬೇಕು ಅಂತಾಗಲಿ ಅಂತ ನಾನು ತಮಿಳನ್ನು ಉಪಯೋಗಿಸಲಿಲ್ಲ. ಅಲ್ಲಿ ಸಾಕಷ್ಟು ಜನ ತಮಿಳಿನವರು ಇದ್ದರು. ಹಾಗಾಗಿ ತಮಿಳು ಮಾತಾಡಿದೆ." ಎಂದಿದ್ದಾರೆ.

'ರೋಸಿ' ಸಿನಿಮಾವನ್ನು ಮೂರು ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಹೀಗಾಗಿ ತಮಿಳಿನಲ್ಲಿ ಮಾತಾಡುವುದಕ್ಕೆ ಅದೂ ಒಂದು ಕಾರಣ ಎಂದಿದ್ದಾರೆ. "ಈ ಸಿನಿಮಾವನ್ನು ತೆಲುಗು, ತಮಿಳು, ಕನ್ನಡ ಮೂರು ಭಾಷೆಯಲ್ಲಿ ಮಾಡುತ್ತಿರೋದ್ರಿಂದ ಆ ಜಾಗದಲ್ಲಿ ಹಂಗೆ ಮಾತಾಡಿದ್ದೀನಿ. ಆದರೂ ಕೂಡ ತಪ್ಪು ಅಂತ ಅನಿಸಿದರೆ ಕ್ಷಮೆ ಇರಲಿ." ಎಂದು ಹೇಳಿದ್ದಾರೆ.

ಇದೇ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರೊಬ್ಬರು "ಈ ನಟ ಬೆಳೆಯಲು ಕನ್ನಡ ಸಿನಿಮಾ ಬೇಕು. ಬೆಂಗಳೂರಿನ ವಿವೇಕನಗರದಲ್ಲಿ ಈ ನಟ ತಮಿಳಿನಲ್ಲಿ ಮಾತಾಡಿದ್ದಾರೆ. ಸ್ಥಳೀಯ ಕನ್ನಡಿಗರು ಕನ್ನಡ ಮಾತಾಡಿ ಎಂದರು. ಇಲ್ಲಿ ತಮಿಳರು ಜಾಸ್ತಿ ಇದ್ದಾರೆ ಎಂದು ತಮಿಳು ಮಾತಾಡಿದ್ದಾರಂತೆ.. ಈ ಮೂಲಕ ಇಲ್ಲಿನ ತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿತಿವಿ ಅನ್ನೋ ಸಂದೇಶ ನೀಡಲು ಹೊರಟ್ರಾ ನೀವು.?" ಎಂದು ಆಕ್ರೋಶ ಹೊರ ಹಾಕಿದ್ದರು.

More from Filmibeat

English summary
Loose Maada apologised for his Tamil speech
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X