'ಕಿಂಗ್' 35ನೇ ವರ್ಷಕ್ಕೆ ನನ್ನ 50ನೇ ಸಿನಿಮಾ ಡೆಬ್ಯೂ.. ಇನ್ಮುಂದೆ ನೋಡುವ ಯೋಗಿನೇ ಬೇರೆ"
ಲೂಸ್ ಮಾದ ಯೋಗಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ದುನಿಯಾ ವಿಜಯ್‌ಗೆ ಹೀರೋ ಆಗಿ ಬ್ರೇಕ್ ಕೊಟ್ಟಿದ್ದ 'ದುನಿಯಾ'ದಲ್ಲಿ ನಟಿಸಿದ್ದ ಒಂದು ಚಿಕ್ಕ ಪಾತ್ರ 50ನೇ ಸಿನಿಮಾದವರೆಗೂ ಕರೆದುಕೊಂಡು ಬಂದಿದೆ. ಹೌದು ಲೂಸ್ ಮಾದ ಯೋಗಿಯ 50ನೇ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಸ್ಯಾಂಡಲ್‌ವುಡ್‌ನ ಕಿಂಗ್ ಶಿವಣ್ಣ 'ಕಿಂಗ್' ಟೈಟಲ್ ಅನ್ನು ಲಾಂಚ್ ಮಾಡಿದ್ದಾರೆ.
ಇಂದು (ಫೆಬ್ರವರಿ 12) ಲೂಸ್ ಮಾದ ಯೋಗಿಯ 50ನೇ ಸಿನಿಮಾ ಅದ್ಧೂರಿಯಾಗಿ ಲಾಂಚ್ ಆಗಿದೆ. ಜಾಕ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡಿರುವ ಜಾಕ್ ಮೂಲತ: ಮೈಸೂರಿನವರು. ಇವರು ಯೋಗಿಯ 50ನೇ ಸಿನಿಮಾವನ್ನು ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.

50ನೇ ಸಿನಿಮಾ ಲಾಂಚ್ ಆದ ಖುಷಿಯಲ್ಲಿದ್ದ ಯೋಗಿ ಈ ಪ್ರಾಜೆಕ್ಟ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. 'ಕಿಂಗ್' ಟೀಸರ್ ರಿಲೀಸ್ ಮಾಡಿ ಸಿನಿಮಾ ಹೇಗಿರುತ್ತೆ ಅನ್ನೋದರ ಒಂದು ಝಲಕ್ ತೋರಿಸಿದ್ದಾರೆ. ಇದೇ ವೇಳೆ ಇಲ್ಲಿವರೆಗಿನ ಯೋಗಿನೇ ಬೇರೆ.. ಇನ್ಮುಂದೆ ನೋಡುವ ಯೋಗಿನೇ ಬೇರೆ" ಎಂದು ಖಡಕ್ ಡೈಲಾಗ್ ಬಿಟ್ಟಿದ್ದಾರೆ. ಅದ ಝಲಕ್ ಇಲ್ಲಿದೆ.
"ಕಿಂಗ್ ದೊಡ್ಡ ಸಿನಿಮಾ ಆಗುವ ತಾಕತ್ತಿದೆ"
"ಜಾಕ್ ಬಂದು ಕಥೆ ಹೇಳಿದಾಗ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಎಲ್ಲಾ ತಾಕತ್ತು ಇದೆ. ಆದರೆ, ಅದನ್ನು ಹೇಗೆ ಸಾಧಿಸೋದು ಅನ್ನೋ ಪ್ರಶ್ನೆ ಬಂತು. ತಲೆ ಕೆಡಿಸಿಕೊಳ್ಳಬೇಡಿ. ನನ್ನ ಮೇಲೆ ನಂಬಿಕೆ ಇಡಿ ಅಂದರು. ಈ ಸಿನಿಮಾ ಟೀಸರ್ ಅನ್ನು ನನಗೆ ತೋರಿಸಿರಲಿಲ್ಲ. ನಾನು ಇಲ್ಲೇ ನೋಡಿದ್ದು. ಯಾಕಂದ್ರೆ, ಮುಂಚೆ ಒಂದು ಟೀಸರ್ ಅನ್ನು ಕೊಟ್ಟಿದ್ದ. ಯಾರು ಹೇಳಿದರೋ ಗೊತ್ತಿಲ್ಲ. ಯೋಗಿ ಎಲ್ಲಾ ಕಡೆ ತೋರಿಸಿಕೊಂಡು ಓಡಾಡ್ತಿದ್ದಾನೆ ಅಂತ. ನಾವು ಮಾಡಿರೋ ಕೆಲಸ ಖುಷಿ ಇರುತ್ತಲ್ಲ. ಒಂದಿಷ್ಟು ಜನಕ್ಕೆ ತೋರಿಸಿರುತ್ತೇನೆ. ಅದಕ್ಕೆ ಇವತ್ತು ಇಲ್ಲಿ ಬಂದು ಕೂರುವವರೆಗೂ ತೋರಿಸಿಲ್ಲ." ಎನ್ನುತ್ತಾರೆ.
"ಬಿಗ್ ಬಜೆಟ್ ಸಿನಿಮಾ"
"ಜಾಕ್ ಕಥೆ ಏನೋ ಹೇಳಿದ. ಒಂದಿಷ್ಟು ನಂಬರ್ ಅನ್ನೂ ಹೇಳಿದ. ನನಗೆ ತಲೆ ತಿರುಗಿತು. ಅಷ್ಟೊಂದೆಲ್ಲ ಹಾಕೊಂಡ್ರೆ ಹೇಗಮ್ಮ ಅಂದೆ. ಇವಾಗಿನ ಪರಿಸ್ಥಿತಿ ಯೋಚನೆ ಮಾಡಿ ಹೇಳಿದಾಗ ನಿರ್ಮಾಪಕರು ಯಾರೂ ತಲೆ ಕೆಡಿಸಿಕೊಂಡಿಲ್ಲ. ಮಾಡೋಣ ಅಂತ ಹೇಳಿ ಸಿನಿಮಾ ಮಾಡುತ್ತಿದ್ದಾರೆ." ಎಂದು ನಿರ್ಮಾಪಕರ ಬಗ್ಗೆ ಹೇಳಿದ್ದಾರೆ.

ಕೊನೆ ಶಾಟ್‌ನಲ್ಲಿ ರಿಯಲ್ ಕಣ್ಣೀರು
"ನನಗೆ ನಟನೆಗೆ ತುಂಬಾನೇ ಸ್ಪೇಸ್ ಇರುವಂತಹ ಕ್ಯಾರೆಕ್ಟರ್ ಇದು. ಕೊನೆಯ ಶಾಟ್ ತೆಗೆಯುವಾಗಲೂ ಅಷ್ಟೇ ಜಾಕ್ ಕಣ್ಣೀರು ಬರುವ ಕೊನೆಯ ಶಾಟ್ ಅನ್ನು ಹೇಗಾದರೂ ಅಚೀವ್ ಮಾಡಲೇಬೇಕು ಅಂತ ಹೇಳಿದೆ. ಲಾಂಗ್ ಶಾಟ್ ಅದು. ಗ್ಲಿಸರಿನ್ ಹಾಕಿದ್ರೆ, ನಡ್ಕೊಂಡು ಬರೋ ಹೊತ್ತಿಗೆ ಕಣ್ಣಲ್ಲಿ ನೀರು ಬರ್ತಾನೇ ಇರುತ್ತೆ. 5 ಟೇಕ್ ಮಾಡಿದ್ವಿ. ಆಮೇಲೆ ಓಕೆ ಆಯ್ತು." ಎನ್ನುತ್ತಾರೆ ಯೋಗಿ.
"17 ವರ್ಷಕ್ಕೆ ಹೀರೋ ಆದವನು"
"ನಾನು ತುಂಬಾ ಚಿಕ್ಕ ವಯಸ್ಸಿಗೆ ಹೀರೋ ಆದವನು. ಎಲ್ಲರಿಗೂ ಗೊತ್ತಿರೋದೇ. ಆಗ ನಾನು ಹೀರೋ ಆಗ್ಬೇಕು ಅಂತ ಬಂದವನಲ್ಲ. ಆಗ ನಾನು ಚಿತ್ರರಂಗದಲ್ಲಿ ಹೆಸರು ಮಾಡಬೇಕು ಅಂತಾನೂ ಬಂದವನಲ್ಲ. ಆ ವಯಸ್ಸಿನಲ್ಲಿ ನನಗೆ ಏನೂ ಗೊತ್ತಿಲ್ಲ. 17 ವರ್ಷಕ್ಕೆ ಹೀರೋ ಆದವನು. ಆ ಮೇಲೆ ಸೋಲುಗಳನ್ನು ಕಂಡಿದ್ದೀನಿ. ಈಗ ಮತ್ತೆ ಬೌನ್ಸ್ ಬ್ಯಾಕ್ ಮಾಡಿದ್ದೀನಿ. 35ನೇ ವರ್ಷಕ್ಕೆ ನನ್ನ 50ನೇ ಸಿನಿಮಾ ಡೆಬ್ಯೂ. ಇಲ್ಲಿವರೆಗೂ ನೋಡಿರೋ ಯೋಗಿನೇ ಬೇರೆ. ಇನ್ಮುಂದೆ ನೋಡುವ ಯೋಗಿನೇ ಬೇರೆ. ಅಂತಹ ಸಿನಿಮಾ ಇದಾಗುತ್ತೆ." ಎಂದು ಯೋಗಿ ಹೇಳಿದ್ದಾರೆ.


Click it and Unblock the Notifications











