"ನಮ್ಮಿಬ್ಬರನ್ನು ಯಾರೂ ನಂಬದೇ ಇರುವ ಟೈಮ್‌ನಲ್ಲಿ ಸಿದ್ಲಿಂಗು 2 ಸಿನಿಮಾ ಮಾಡ್ತಿದ್ದಾರೆ"; ಲೂಸ್ ಮಾದ ಯೋಗಿ

ಸುಮಾರು 12 ವರ್ಷಗಳ ಹಿಂದೆ ಲೂಸ್ ಮಾದ ಯೋಗಿ ಹಾಗೂ ರಮ್ಯಾ ಅಭಿನಯದ 'ಸಿದ್ಲಿಂಗು' ಸಿನಿಮಾ ಬಂದಿತ್ತು. ಆ ಟೈಮ್‌ನಲ್ಲಿ ಇದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೊಸ ಅನುಭವವನ್ನು ನೀಡಿತ್ತು. ಲೂಸ್ ಮಾದ ಈ ಸಿನಿಮಾದಲ್ಲಿ ಪ್ರಬುದ್ಧರಾಗಿ ಕಾಣಿಸಿಕೊಂಡಿದ್ದರು. ಇನ್ನೊಂದು ಕಡೆ ನಿರ್ದೇಶಕ ವಿಜಯ್ ಪ್ರಸಾದ್ ಡೈಲಾಗ್ ಡಿಲೇವರಿ ಸಿನಿ ಪ್ರಿಯರಿಗೆ ಇಷ್ಟ ಆಗಿತ್ತು. ಅದರಲ್ಲೂ ರಮ್ಯಾ ಮತ್ತು ಯೋಗಿ ಕಾಂಬಿನೇಷನ್ ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ನುಗ್ಗಿದ್ದರು.

ಈಗ 12 ವರ್ಷಗಳ ಬಳಿಕ ಮತ್ತೆ ಲೂಸ್ ಮಾದ ಯೋಗಿ ಹಾಗೂ ವಿಜಯ್ ಪ್ರಸಾದ್ ಒಟ್ಟಿಗೆ ಸೇರಿಕೊಂಡಿದ್ದಾರೆ. ಅದೂ 'ಸಿದ್ಲಿಂಗು 2' ಸಿನಿಮಾಗಾಗಿಯೇ ಅನ್ನೋದು ವಿಶೇಷ. 12 ವರ್ಷಗಳ ಹಿಂದೆ ಸಿದ್ಲಿಂಗು ಕಥೆ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಪಾರ್ಟ್ 2 ಆರಂಭ ಆಗುತ್ತೆ ಅನ್ನೋದನ್ನು ನಿರ್ದೇಶಕರು ಈಗಾಗಲೇ ಹೇಳಿಕೊಂಡಿದ್ದಾರೆ.

Loose Mada Yogi thanks Sidlingu 2 producer for trusting actor and director when nobody did

'ಸಿದ್ಲಿಂಗು 2' ಸೆಟ್ಟೇರಿದ ದಿನವೇ ಲೂಸ್ ಮಾದ ಯೋಗಿ ಓಪನ್ ಆಗಿ ಮಾತಾಡಿದ್ದಾರೆ. ತಮ್ಮ ಸಿನಿಮಾಗಳು ಗೆಲ್ಲುತ್ತಿಲ್ಲ. ಹೀಗಾಗಿ ಯಾರೂ ನಂಬದೇ ಇರುವ ಸಮಯದಲ್ಲಿ 'ಸಿದ್ಲಿಂಗು 2'ಗೆ ತಮ್ಮಿಬ್ಬರನ್ನು ಹಾಕಿಕೊಂಡು ನಿರ್ಮಾಪಕರು ಸಿನಿಮಾ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಲೂಸ್ ಮಾದ ಯೋಗಿ ಅದ್ಯಾಕೆ ಹೀಗಂದ್ರು? ಅನ್ನುವುದನ್ನು ತಿಳಿಯಲು ಮುಂದೆ ಓದಿ..

ಯೋಗಿ 'ಸಿದ್ಲಿಂಗು' ಸಿನಿಮಾ ಮಾಡುವಾಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಕೆಲವು ಸಿನಿಮಾ ಗೆದ್ದಿದ್ದವು. ಅಲ್ಲದೆ ಅದೇ ಮೊದಲ ಬಾರಿಗೆ ಲಕ್ಕಿ ಗರ್ಲ್ ರಮ್ಯಾ ಹಾಗೂ ಯೋಗಿ ಜೊತೆಗೆ ನಟಿಸಿದ್ದರು. ವಿಜಯ್ ಪ್ರಸಾದ್ ಡೈಲಾಗ್ಸ್ ಕ್ರೇಜ್ ಹುಟ್ಟಾಕಿತ್ತು. ಅದೇ 12 ವರ್ಷಗಳ ಬಳಿಕ ಕಾಲ ಬದಲಾಗಿದೆ. ಯೋಗಿ ಸೋಲಿನ ಕಹಿ ಕಂಡಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು 'ಸಿದ್ಲಿಂಗು 2' ಮುಹೂರ್ತದ ವೇಳೆ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

"12 ವರ್ಷಗಳಾದ್ಮೇಲೆ ಮತ್ತೆ ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ಸಿದ್ಲಿಂಗು 2 ಮಾಡುತ್ತಿರುವುದು ಭಾರಿ ಖುಷಿಯಿದೆ. ಇಡೀ ತಂಡಕ್ಕೆ ತುಂಬಾನೇ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಮುಖ್ಯವಾಗಿ ನಾನು ನಿರ್ಮಾಪಕ ಹರಿಯವರಿಗೆ ಥ್ಯಾಂಕ್ಸ್ ಹೇಳಬೇಕು. ಏನಕ್ಕೆ ಅಂದ್ರೆ, ನಮ್ಮಿಬ್ಬರನ್ನು ಯಾರೂ ನಂಬದೇ ಇರುವ ಟೈಮ್‌ನಲ್ಲಿ ನಂಬಿ ಸಿನಿಮಾ ಮಾಡ್ತಿದ್ದಾರೆ. ಮಾರ್ಕೆಟ್ ಇಲ್ಲದವರನ್ನು ಹಾಕಿಕೊಂಡು ಸಿನಿಮಾ ಮಾಡುವ ಧೈರ್ಯ ಮಾಡಿದ್ದಾರೆ. ಇವರಿಗೆ ಥ್ಯಾಂಕ್ಸ್ ಹೇಳಬೇಕು." ಎಂದು ಯೋಗಿ ಹೇಳಿದ್ದಾರೆ.

Loose Mada Yogi thanks Sidlingu 2 producer for trusting actor and director when nobody did

ಇದೇ ಸಂದರ್ಭದಲ್ಲಿ 'ಸಿದ್ದಿಂಗು 2' ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇರುವುದಿಲ್ಲ ಅನ್ನೋದನ್ನೂ ಕನ್ಫರ್ಮ್ ಮಾಡಿದ್ದಾರೆ. "ನಾವು ಎಲ್ಲೇ ಪೋಸ್ಟ್ ಹಾಕಿದ್ರೂ, ನಮಗೆ ಬರುತ್ತಿದ್ದ ಕಮೆಂಟ್‌ಗಳನ್ನು ನೋಡಿದ್ದಾಗ, ಖುಷಿ ಆಗ್ತಿತ್ತು. ಜನರು ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಯ್ತು. ಖಂಡಿತವಾಗಿಯೂ ಇದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಯಾವುದೇ ರೀತಿಯಾದ ಡಬಲ್ ಮೀನಿಂಗ್ ಡೈಲಾಗ್‌ಗಳಂತೂ ಇರುವುದೇ ಇಲ್ಲ. ಸಾಧ್ಯನೇ ಇಲ್ಲ. ಇದನ್ನು ಹೇಳಲೇಬೇಕು." ಎಂದು ಯೋಗಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ 'ಸಿದ್ಲಿಂಗು 2' ಬಗ್ಗೆ ಕಮೆಂಟ್ ಹಾಕಿದಾಗ ನೆಟ್ಟಿಗರು ಏನೆಲ್ಲ ಕಮೆಂಟ್ ಮಾಡುತ್ತಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಸಿದ್ದಿಂಗು ಪೋಸ್ಟ್ ಹಾಕಿದ್ರೆ ಕಮೆಂಟ್ ಬರೋದು. ಡಬಲ್ ಮೀನಿಂಗ್ ಡೈಲಾಗ್ ಬೇಡ. ನೋಡಿ ಬೇಜಾರ್ ಆಗಿದೆ. ಈತರ ಮಾಡುವ ಹಾಗಿದ್ದರೆ ಸಿನಿಮಾ ಮಾಡಬೇಡಿ. ಇಂಡಸ್ಟ್ರಿ ಬಿಟ್ಟು ಬಿಡಿ ಈತರ ಎಲ್ಲಾ ಕಮೆಂಟ್ ಬಂದಿತ್ತು. ನಾವು ಹುಷಾರಾಗಿ ಇಂಡಸ್ಟ್ರಿಯಲ್ಲಿ ಇರಬೇಕು ಅನ್ನುವ ಮೈಂಡ್ ಸೆಟ್‌ನಿಂದ ಯಾರ ಮನಸ್ಸಿಗೂ ಬೇಜಾರಾಗದೇ ಇರುವ ಹಾಗೆ ಡೈಲಾಗ್‌ಗಳನ್ನು ಬರೆದಿದ್ದಾರೆ ನಿರ್ದೇಶಕರು." ಎಂದು ಯೋಗಿ ಭರವಸೆ ಕೊಟ್ಟಿದ್ದಾರೆ.

More from Filmibeat

English summary
Loose Mada Yogi thanks Sidlingu 2 Producer for trusting him:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X