ಲವ್ಲಿ ಸ್ಟಾರ್ ಪ್ರೇಮ್–ಮಾನ್ವಿತಾ ಸಿನಿಮಾ ಶೂಟಿಂಗ್ ಫಿನಿಶ್: ಟೈಟಲ್ ಯಾವಾಗ?

ನೆನಪಿರಲಿ ಪ್ರೇಮ್ 25ನೇ ಸಿನಿಮಾದ ಬಳಿಕ ರಿಯಾಲಿಟಿ ಶೋನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಯೋಚನೆ ಮಾಡಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರುವ ಪ್ರೇಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದರು. ಅದೇ ಸಿನಿಮಾದ ಶೂಟಿಂಗ್ ಈಗ ಕಂಪ್ಲೀಟ್ ಆಗಿದೆ.

ಲವ್ಲೀ ಸ್ಟಾರ್ ಪ್ರೇಮ್ ಹಿಂದೆಂದೂ ಇಂತಹದ್ದೊಂದು ಪಾತ್ರದಲ್ಲಿ ಕಂಡಿರಲಿಲ್ಲ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಸಿನಿಪ್ರೇಮಿಗಳಿಗೆ ಕುತೂಹಲ ಹೆಚ್ಚಾಗಿದೆ.

Lovely Star Prem And Manvitha Kamath Combination Movie Shooting Completed

ಈ ಸಿನಿಮಾದ ಇನ್ನೊಂದು ವಿಶೇಷ ಅಂದ್ರೆ, ನೆನಪಿರಲಿ ಪ್ರೇಮ್ ಹಾಗೂ ನಟಿ ಮಾನ್ವಿತಾ ಕಾಮತ್ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾವಿದೆ. ಇವರಿಬ್ಬರ ಕಾಂಬಿನೇಷನ್ ತೆರೆಮೇಲೆ ವರ್ಕ್‌ ಆಗುತ್ತೆ ಅನ್ನೋ ಬಗ್ಗೆ ಸಿನಿಮಾ ಮಂದಿ ಈಗಾಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.

'ಜೂಟಾಟ', 'ಗುಬ್ಬಚ್ಚಿ' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಅಥರ್ವ್ ಆರ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಸಿನಿಮಾದ ಚಿತ್ರೀಕರಣ ಈಗ ಮುಕ್ತಾಯಗೊಂಡಿದೆ. ಈ ಸಿನಿಮಾವನ್ನು ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ಕಾದು ಕೂತಿದ್ದಾರೆ. ಇವರೊಂದಿಗೆ ತಬಲಾ ನಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Lovely Star Prem And Manvitha Kamath Combination Movie Shooting Completed

ಇವರೊಂದಿಗೆ ಸಂಜಯ್, ಜೀವಿತಾ, ರಂಗಿತರಂಗ ಖ್ಯಾತಿಯ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಕನ್ನಡ ಕಲಾವಿದರ ದೊಡ್ಡ ತಂಡವೇ ಸೇರಿಕೊಂಡಿದೆ.

ವಿಶೇಷ ಅಂದ್ರೆ, ನೆನಪಿರಲಿ ಪ್ರೇಮ್ ಹಾಗೂ ಮಾನ್ವಿತಾ ಜೋಡಿಯ ಈ ಸಿನಿಮಾವನ್ನು ತಬಲಾನಾಣಿ ಅವರ ಸ್ನೇಹಿತರೊಂದಿಗೆ ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಇದು ತಬಲ ನಾಣಿ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ.

ಇದು ತಂದೆಯ ಮಹತ್ವ ಸಾರುವ ಸಿನಿಮಾ. ತಂದೆಯನ್ನು ಕುಟುಂಬ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಅನ್ನೋದೇ ಕಥೆಯ ತಿರುಳು. ಇಲ್ಲಿ ತಬಲಾನಾಣಿ ತಂದೆಯಾಗಿ ನಟಿಸುತ್ತಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ಈ ಸಿನಿಮಾ ಇನ್ನೂ ಹೆಸರಿಟ್ಟಿಲ್ಲ. ಈಗತಾನೇ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಟೈಟಲ್ ಅನೌನ್ಸ್ ಮಾಡಿದ್ದಾರೆ. ನಾಗಾರ್ಜುನ್ ಆರ್ ಡಿ ಕ್ಯಾಮರಾ, ವೇದಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ.

More from Filmibeat

English summary
Lovely Star Prem And Manvitha Kamath Combination Movie Shooting Completed, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X