»   » ನಿನ್ನೆ ಉದಯ್ ಶವ, ಇಂದು ಅನಿಲ್ ಶವ ಪತ್ತೆ

ನಿನ್ನೆ ಉದಯ್ ಶವ, ಇಂದು ಅನಿಲ್ ಶವ ಪತ್ತೆ

Written By:
Subscribe to Filmibeat Kannada

'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾಗಿದ್ದ ಇಬ್ಬರು ಖಳ ನಟರ ಪೈಕಿ, ಇಂದು (ನವೆಂಬರ್ 10) ಮತ್ತೋರ್ವ ನಟನ ಶವ ಪತ್ತೆಯಾಗಿದೆ. ಇಂದು ಬೆಳಿಗ್ಗೆ 5.50ರ ವೇಳೆಗೆ ನಟ ಅನಿಲ್ ಮೃತದೇಹ ಪತ್ತೆಯಾಗಿದ್ದು, ಹೆಲಿಕಾಫ್ಟರ್ ನಿಂದ ಹಾರಿದ್ದ 50 ಮೀಟರ್ ಪಕ್ಕದಲ್ಲೇ ಶವ ಸಿಕ್ಕಿದೆ. ಎನ್.ಡಿ.ಆರ್.ಎಫ್ ಹಾಗೂ ಮುಳುಗು ತಜ್ಞರು ಅನಿಲ್ ಮೃತದೇಹವನ್ನ ತಿಪ್ಪಗೊಂಡನಹಳ್ಳಿ ಕೆರೆಯ ದಡಕ್ಕೆ ತಂದಿದ್ದಾರೆ.

'Maasti Gudi' Tragedy: Actor Anil body found

ಮೂರು ದಿನಗಳಾದರೂ ಅನಿಲ್ ಮೃತ ದೇಹ ಪತ್ತೆಯಾಗದ ಹಿನ್ನಲೆಯಲ್ಲಿ, ನಿನ್ನೆ ತಡ ರಾತ್ರಿ 1.30 ರವರೆಗೂ ಶವಕ್ಕಾಗಿ ಕಾರ್ಯಚರಣೆ ನಡೆಸಲಾಗಿತ್ತು. ಆದ್ರೆ, ಯಾವುದೇ ಕುರುಹು ಸಿಕ್ಕರಲಿಲ್ಲ. ಇಂದು ಬೆಳಗ್ಗಿನ ಜಾವದಲ್ಲಿ ಅನಿಲ್ ಮೃತದೇಹ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ತೇಲಿದ ಪರಿಣಾಮ ಎನ್.ಡಿ.ಆರ್.ಎಫ್ ಸಿಬ್ಬಂದಿಗಳಿಗೆ ಶವ ಸಿಕ್ಕಿದೆ. ನಿನ್ನೆ (ನವೆಂಬರ್ 9) ಮಧ್ಯಾಹ್ನದ ವೇಳೆಗೆ ನಟ ಉದಯ್ ಅವರ ಮೃತದೇಹ ಸಿಕ್ಕಿತ್ತು. ['ಮಾಸ್ತಿಗುಡಿ' ದುರಂತ: 2 ದಿನಗಳ ಬಳಿಕ ಓರ್ವ ನಟನ ಶವ ಪತ್ತೆ]


'Maasti Gudi' Tragedy: Actor Anil body found

ಸದ್ಯ ತಿಪ್ಪಗೊಂಡನಹಳ್ಳಿ ಕೆರೆಯ ದಡದಲ್ಲೇ ಅನಿಲ್ ರವರ ಶವಪರೀಕ್ಷೆ ನಡೆಯುತ್ತಿದೆ. ತದನಂತರ ಬೆಂಗಳೂರಿನ ಕದಿರೇನಹಳ್ಳಿಯಲ್ಲಿರುವ ಅನಿಲ್ ನಿವಾಸಕ್ಕೆ ಮೃತದೇಹ ರವಾನಿಸಲಾಗುತ್ತದೆ. ಇಂದೇ ಅನಿಲ್ ಮತ್ತು ಉದಯ್ ರವರ ಅಂತಿಮ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

English summary
Body of another actor Anil, who drowned in T G Halli during a shoot has been found today (Nov 10th) by search teams. Teams of NDRF, Fire and safety personnel along with the help of local fishermen had been scouting the T G Halli reservoir waters since Monday evening for bodies of actors Uday and Anil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada