For Quick Alerts
  ALLOW NOTIFICATIONS  
  For Daily Alerts

  'ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ

  By Harshitha
  |

  ಮನಸ್ಸಿನಲ್ಲಿ ಆತಂಕ ಇದ್ದರೂ, ಏನಾಗುತ್ತೋ ಎಂಬ ಭಯ ಕಾಡುತ್ತಿದ್ದರೂ, ನಟ ಉದಯ್ ಮತ್ತು ಅನಿಲ್ ಮೊಗದಲ್ಲಿ ಮಂದಹಾಸ ಮಾತ್ರ ಕೊಂಚ ಕೂಡ ಕಡಿಮೆ ಆಗಿರಲಿಲ್ಲ. ಅದಕ್ಕೆ ಸಾಕ್ಷಿ ಈ 'ಕೊನೆಯ ಸೆಲ್ಫಿ'.

  ಹೆಲಿಕಾಫ್ಟರ್ ಹತ್ತುವ ಮುನ್ನ ಅನಿಲ್ ಮತ್ತು ಉದಯ್ ಖುಷಿಯಾಗಿದ್ದರು. 'ನಾನು ಜೀವನದಲ್ಲಿ ಹೆಲಿಕಾಫ್ಟರ್ ನೋಡುತ್ತಿರುವುದು ಇದೇ ಮೊದಲು' ಅಂತ ಹೇಳುತ್ತಾ ಉದಯ್ ಸಂಭ್ರಮ ಪಟ್ಟಿದ್ದರು. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

  ಅದೇ ಸಡಗರದಲ್ಲಿ ಹೆಲಿಕಾಫ್ಟರ್ ಮುಂದೆ ನಿಂತು ಉದಯ್ ಸೆಲ್ಫಿ ಕ್ಲಿಕ್ ಮಾಡಿದರು. ಉದಯ್ ಕ್ಲಿಕ್ಕಿಸಿರುವ ಸೆಲ್ಫಿಯಲ್ಲಿ ನಟ ಅನಿಲ್, ಜಿಮ್ ಟ್ರೈನರ್ ಪಾನಿ ಪೂರಿ ಕಿಟ್ಟಿ ಕೂಡ ಇದ್ದಾರೆ. ಇಬ್ಬರ ಸಾಹಸಕ್ಕೆ ಶುಭವಾಗಲಿ ಎಂಬ ಅರ್ಥದಲ್ಲಿ ಎಲ್ಲರೂ ಥಂಬ್ಸ್ ಅಪ್ ಮಾಡಿದ್ದರು. ಆದ್ರೆ...ಬಳಿಕ ನಡೆದದ್ದು ಯಾರೂ ಊಹಿಸಲಾರದ ದುರ್ಘಟನೆ. [ಮಾಸ್ತಿಗುಡಿ ಚಿತ್ರದ ಗ್ಯಾಲರಿ]

  'ಮಾಸ್ತಿ ಗುಡಿ' ಚಿತ್ರದ 'ಶಾಟ್ ಮುಗಿದರೆ ಸಾಕು' ಅಂತ 100 ಅಡಿ ಎತ್ತರದಿಂದ ಹೆಲಿಕಾಫ್ಟರ್ ನಿಂದ ಹಾರಿದ ಅನಿಲ್ ಮತ್ತು ಉದಯ್ ಬಾರದ ಲೋಕಕ್ಕೆ ತೆರಳಿದ್ದಾರೆ. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

  'ಮಾಸ್ತಿ ಗುಡಿ' ಚಿತ್ರದಲ್ಲಿ ಸೂಪರ್ ಹೀರೋ ಆಗಲು ಹೋಗಿ ಇಬ್ಬರೂ 'ಮಸಣ ಗುಡಿ' ಸೇರಿರುವುದು ಮಾತ್ರ ಘೋರ ದುರಂತ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  English summary
  Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene. Here is the last Selfie Picture clicked by Actor Raghava Uday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X