twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ

    By Harshitha
    |

    ಯಾರೂ ಊಹಿಸದ ದೊಡ್ಡ ಅನಾಹುತವೊಂದು ಇಂದು 'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ನಲ್ಲಿ ನಡೆದಿದೆ. ರೋಚಕ ಸಾಹಸ ದೃಶ್ಯವನ್ನು ಚಿತ್ರೀಕರಿಸಲು ಹೋಗಿ, ಇಬ್ಬರು ಖಳನಟರು ಪ್ರಾಣ ಕಳೆದುಕೊಂಡಿರುವ ದುರ್ಘಟನೆ ಇಂದು ರಾಮನಗರದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಜರುಗಿದೆ. ['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]

    ಹೆಲಿಕಾಫ್ಟರ್ ನಿಂದ 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಹಾರಿದ 'ಮಾಸ್ತಿ ಗುಡಿ' ಚಿತ್ರದ ವಿಲನ್ ಗಳಾದ ಅನಿಲ್ ಮತ್ತು ಉದಯ್, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ.

    ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿತ್ತು

    ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿತ್ತು

    ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಚಿತ್ರದ ಚಿತ್ರೀಕರಣ ಇಂದು ಬೆಳಗ್ಗಿನಿಂದ ರಾಮನಗರ ಜಿಲ್ಲೆಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆಯುತ್ತಿತ್ತು. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

    ಅದ್ಧೂರಿ ಕ್ಲೈಮ್ಯಾಕ್ಸ್ ದೃಶ್ಯ

    ಅದ್ಧೂರಿ ಕ್ಲೈಮ್ಯಾಕ್ಸ್ ದೃಶ್ಯ

    'ಮಾಸ್ತಿ ಗುಡಿ' ಚಿತ್ರದ ರೋಚಕ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಹೆಲಿಕಾಫ್ಟರ್ ಒಂದನ್ನ ಬಾಡಿಗೆಗೆ ತರಲಾಗಿತ್ತು. ಹೆಲಿಕಾಫ್ಟರ್ ನಲ್ಲಿ ಹೀರೋ ದುನಿಯಾ ವಿಜಯ್ ಜೊತೆ ವಿಲನ್ ಗಳಾದ ಅನಿಲ್ ಮತ್ತು ಉದಯ್ ಕಾದಾಡುವ ಹಾಗೂ ಎತ್ತರದಿಂದ ನದಿಗೆ ಹಾರುವ ದೃಶ್ಯಗಳ ಚಿತ್ರೀಕರಣ ಇಂದು ನಿಗದಿ ಆಗಿತ್ತು.

    ನಡೆದದ್ದು ಏನು?

    ನಡೆದದ್ದು ಏನು?

    ಅನಿಲ್, ಉದಯ್ ಹಾಗೂ ದುನಿಯಾ ವಿಜಯ್ ನಡುವೆ ಫೈಟ್ ನಡೆಯುತ್ತಿರುವಾಗ ಅನಿಲ್ ಮತ್ತು ಉದಯ್ ಓಡಿ ಹೋಗಿ ಹೆಲಿಕಾಫ್ಟರ್ ಹತ್ತುತ್ತಾರೆ. ಅವರನ್ನ ಬೆನ್ನಟ್ಟುವ ದುನಿಯಾ ವಿಜಯ್ ಕೂಡ ಹೆಲಿಕಾಫ್ಟರ್ ಏರುತ್ತಾರೆ. ತಿಪ್ಪಗೊಂಡನಹಳ್ಳಿ ಕೆರೆ ಮಧ್ಯೆ ಹೆಲಿಕಾಫ್ಟರ್ ಹೋದಾಗ, ಸುಮಾರು 100ಕ್ಕೂ ಹೆಚ್ಚು ಅಡಿ ಮೇಲಿಂದ ಅನಿಲ್ ಮತ್ತು ಉದಯ್ ರನ್ನ ದುನಿಯಾ ವಿಜಯ್ ಕೆರೆಗೆ ತಳ್ಳುತ್ತಾರೆ. ನಂತರ ಅವರೂ ಕೂಡ ಕೆರೆಗೆ ಹಾರುತ್ತಾರೆ.[ಮಾಸ್ತಿಗುಡಿ ಚಿತ್ರದ ಗ್ಯಾಲರಿ]

    ಮೇಲೆ ಎದ್ದು ಬಂದ ದುನಿಯಾ ವಿಜಯ್

    ಮೇಲೆ ಎದ್ದು ಬಂದ ದುನಿಯಾ ವಿಜಯ್

    ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿದ ಮೂವರ ಪೈಕಿ ದುನಿಯಾ ವಿಜಯ್ ಮೇಲೆದ್ದು ಬರುವಲ್ಲಿ ಯಶಸ್ವಿ ಆಗುತ್ತಾರೆ. ಆದರೆ ನಿಮಿಷಗಳು ಕಳೆದರೂ ಅನಿಲ್ ಹಾಗೂ ಉದಯ್ ಮೇಲೆ ಬಾರದೇ ಇದ್ದಾಗ ದುನಿಯಾ ವಿಜಯ್ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಚಿತ್ರತಂಡ ಸೇರಿದಂತೆ ಅಕ್ಕ ಪಕ್ಕದ ಊರಿನ ಜನರು ಸೇರಿ ಬೋಟಿನ ಮೂಲಕ ಅನಿಲ್ ಮತ್ತು ಉದಯ್ ಗಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶೋಧಕಾರ್ಯ ನಡೆಸಿದರೂ ಇಬ್ಬರು ಪತ್ತೆ ಆಗ್ಲಿಲ್ಲ.

    ಸ್ವಿಮ್ಮಿಂಗ್ ಬಾರದೇ ಇದ್ದರೂ ಸಾಹಸ.!

    ಸ್ವಿಮ್ಮಿಂಗ್ ಬಾರದೇ ಇದ್ದರೂ ಸಾಹಸ.!

    ಸ್ವಿಮ್ಮಿಂಗ್ ನಲ್ಲಿ ಖಳನಟರಾದ ಅನಿಲ್ ಮತ್ತು ಉದಯ್ ರವರಿಗೆ ನೈಪುಣ್ಯ ಇರಲಿಲ್ಲ. ಕೊಂಚ ಸ್ವಿಮ್ಮಿಂಗ್ ಬಂದರೂ, ಅದರಲ್ಲಿ ಅಂಥದ್ದೇನೂ ಪರಿಣತಿ ಹೊಂದಿರಲಿಲ್ಲ. ಇದರ ಬಗ್ಗೆ ಅರಿವಿದ್ದರೂ, 'ಮಾಸ್ತಿ ಗುಡಿ' ಚಿತ್ರದ ಸಾಹಸ ನಿರ್ದೇಶಕ ರವಿಮರ್ಮ ಹಾಗೂ ನಾಗಶೇಖರ್ ದುಸ್ಸಾಹಸಕ್ಕೆ ಕೈಹಾಕಿದರು.

    ಡ್ಯೂಪ್ ಹಾಕಿರಲಿಲ್ಲ

    ಡ್ಯೂಪ್ ಹಾಕಿರಲಿಲ್ಲ

    ಸ್ವಿಮ್ಮಿಂಗ್ ನಲ್ಲಿ ಇಬ್ಬರೂ ಅಷ್ಟಕಷ್ಟೆ ಅಂತ ಗೊತ್ತಿದ್ದರೂ, ಡ್ಯೂಪ್ ಬಳಕೆ ಮಾಡಿಕೊಂಡಿರಲಿಲ್ಲ.

    ಸೇಫ್ಟಿ ಇರಲಿಲ್ಲ.!

    ಸೇಫ್ಟಿ ಇರಲಿಲ್ಲ.!

    ಕೆರೆಗೆ ಹಾರುವಾಗ ಹಗ್ಗ ಬಳಸದೆ, ಲೈಫ್ ಜ್ಯಾಕೆಟ್ ಸೇರಿದಂತೆ ಯಾವುದೇ ಸೇಫ್ಟಿ ಕಲಾವಿದರಿಗೆ ನೀಡಿರಲಿಲ್ಲ.

    ಉತ್ಸಾಹ ತೋರಿದ್ದ ಅನಿಲ್-ಉದಯ್

    ಉತ್ಸಾಹ ತೋರಿದ್ದ ಅನಿಲ್-ಉದಯ್

    ಸ್ವಿಮ್ಮಿಂಗ್ ಬಾರದೇ ಇದ್ದರೂ ಅನಿಲ್ ಮತ್ತು ಉದಯ್ ಉತ್ಸಾಹ ತೋರಿದ್ದರು. ''ಎತ್ತರದಿಂದ ಜಿಗಿಯುತ್ತಿರುವುದಕ್ಕೆ ನರ್ವಸ್ ಆಗಿದೆ. ಬಾವಿಯಲ್ಲಿ ಸ್ವಿಮ್ ಮಾಡಿ ಮಾತ್ರ ಅಭ್ಯಾಸ. ಎರಡು ಸಲಿ ಮೇಲೆ ಬರ್ತೀನಿ. ಮೂರನೇ ಬಾರಿ ಬರಲಿಲ್ಲ ಅಂದ್ರೆ ಭಗವಂತ ಕೈಹಿಡಿಯುತ್ತಾನೆ'' ಅಂತ ಶೂಟಿಂಗ್ ನಲ್ಲಿ ಭಾಗವಹಿಸುವ ಮುನ್ನ ಅನಿಲ್ ಹೇಳಿಕೆ ನೀಡಿದ್ದರು.

    ಇಬ್ಬರೂ ಊಟ ಮಾಡಿರಲಿಲ್ಲ.!

    ಇಬ್ಬರೂ ಊಟ ಮಾಡಿರಲಿಲ್ಲ.!

    ಶೂಟಿಂಗ್ ನಲ್ಲಿ ಚಾಪರ್ ಬಳಸಿದ ಕಾರಣ ಕತ್ತಲಾಗುವ ಮುನ್ನ ಪ್ಯಾಕಪ್ ಮಾಡಬೇಕು ಎಂಬ ಕಾರಣಕ್ಕೆ ಬೆಳಗ್ಗಿನಿಂದ ಬ್ರೇಕ್ ಇಲ್ಲದೇ 'ಮಾಸ್ತಿ ಗುಡಿ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಹೀಗಾಗಿ, ಅನಿಲ್ ಮತ್ತು ಉದಯ್ ಊಟ ಮಾಡಿರಲಿಲ್ಲ. ಹಣ್ಣು ಮಾತ್ರ ಸೇವಿಸಿದ್ದರಿಂದ ಇಬ್ಬರೂ ಸುಸ್ತಾಗಿದ್ದರು.

    ಕೈ ಕೊಟ್ಟ ಮೋಟರ್ ಬೋಟ್

    ಕೈ ಕೊಟ್ಟ ಮೋಟರ್ ಬೋಟ್

    ತಿಪ್ಪಗೊಂಡನಹಳ್ಳಿ ಕೆರೆಗೆ ಮೂವರು ಹಾರಿದ ಬಳಿಕ, ಮೂವರನ್ನೂ ಮೋಟರ್ ಬೋಟ್ ಮೂಲಕ ರಕ್ಷಿಸುವ ಪ್ಲಾನ್ ಚಿತ್ರತಂಡದ್ದಾಗಿತ್ತು. ಆದ್ರೆ, ಕೆರೆಗೆ ಮೂವರು ಹಾರಿದ ಮೇಲೆ ಮೋಟರ್ ಬೋಟ್ ನ ಡೀಸೆಲ್ ಎಂಜಿನ್ ಆನ್ ಆಗಲಿಲ್ಲ. ದಡದಿಂದ ಚಿತ್ರತಂಡದವರು ತೆಪ್ಪದಲ್ಲಿ ಕೆರೆ ಮಧ್ಯ ಭಾಗಕ್ಕೆ ತಲುಪುವಷ್ಟರಲ್ಲಿ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿದ್ದರು.

    ಆಳ ಎಷ್ಟಿತ್ತು?

    ಆಳ ಎಷ್ಟಿತ್ತು?

    ಸುದ್ದಿ ವಾಹಿನಿಗಳು ವರದಿ ಮಾಡುತ್ತಿರುವ ಪ್ರಕಾರ, ತಿಪ್ಪಗೊಂಡನಹಳ್ಳಿ ಕೆರೆಯ ಆಳ 30 ಅಡಿಗಳಿಗೂ ಹೆಚ್ಚು.

    ರಿಹರ್ಸಲ್ ಮಾಡಿರಲಿಲ್ಲ.!

    ರಿಹರ್ಸಲ್ ಮಾಡಿರಲಿಲ್ಲ.!

    'ಮಾಸ್ತಿ ಗುಡಿ' ಶೂಟಿಂಗ್ ನಲ್ಲಿ ಚಾಪರ್ ಬಳಕೆ ಮಾಡಿದ ಕಾರಣ, ಹೆಲಿಕಾಫ್ಟರ್ ನಿಂದ ಕೆರೆಗೆ ಹಾರುವ ದೃಶ್ಯದ ರಿಹರ್ಸಲ್ ಮಾಡಿರಲಿಲ್ಲ. ಒಂದೇ ಟೇಕ್ ನಲ್ಲಿ ಮುಗಿಸುವುದಕ್ಕೆ ಸಾಹಸ ನಿರ್ದೇಶಕ ಹಾಗೂ ನಿರ್ದೇಶಕರು ಪ್ಲಾನ್ ಮಾಡಿದ್ದರು.

    ಇಬ್ಬರು ದುರ್ಮರಣ

    ಇಬ್ಬರು ದುರ್ಮರಣ

    'ಮಾಸ್ತಿ ಗುಡಿ' ಚಿತ್ರತಂಡದ ನಿರ್ಲಕ್ಷ್ಯ ಹಾಗೂ ದುಸ್ಸಾಹಸಕ್ಕೆ ಅನಿಲ್ ಹಾಗೂ ಉದಯ್ ಎಂಬ ಇಬ್ಬರು ಉದಯೋನ್ಮುಖ ನಟರು ದುರಂತ ಸಾವಿಗೀಡಾಗಿದ್ದಾರೆ.

    ಮೃತದೇಹಕ್ಕಾಗಿ ಶೋಧ

    ಮೃತದೇಹಕ್ಕಾಗಿ ಶೋಧ

    ಅನಿಲ್ ಹಾಗೂ ಉದಯ್ ರವರ ಮೃತದೇಹ ಇನ್ನೂ ಪತ್ತೆ ಆಗಿಲ್ಲ. ಶೋಧ ಕಾರ್ಯ ಇನ್ನೂ ನಡೆಯುತ್ತಿದೆ. ದುನಿಯಾ ವಿಜಯ್ ಕೂಡ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

    ಕ್ರಿಮಿನಲ್ ಕೇಸ್ ದಾಖಲು

    ಕ್ರಿಮಿನಲ್ ಕೇಸ್ ದಾಖಲು

    ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಶೂಟಿಂಗ್ ಮಾಡುವ ಮುನ್ನ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ, 'ಮಾಸ್ತಿ ಗುಡಿ' ಚಿತ್ರತಂಡಕ್ಕೆ ನೀರು ಸರಬರಾಜು, ಒಳ ಚರಂಡಿ ಕುರಿತು ಕೆಲ ಷರತ್ತುಗಳನ್ನು ವಿಧಿಸಿದ್ದರು. ಅದನ್ನು 'ಮಾಸ್ತಿ ಗುಡಿ' ಚಿತ್ರತಂಡ ಉಲ್ಲಂಘಿಸಿದೆ. ಇದರಿಂದ ಆಪತ್ತು ಎದುರಾಗಿರುವ ಕಾರಣ ರಾಮನಗರ ಪೊಲೀಸರು ಸ್ವಯಂ ಪ್ರೇರಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

    ವಿಡಿಯೋ ನೋಡಿ....

    ವಿಡಿಯೋ ನೋಡಿ....

    'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಆದ ಅವಘಡದ ವಿಡಿಯೋ ಇಲ್ಲಿದೆ ನೋಡಿ....

    English summary
    Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene. Here is the detailed report about the incident.
    Tuesday, November 8, 2016, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X