ನಾಪತ್ತೆ ಆಗಿದ್ದ 'ಮಸಣ ಗುಡಿ' ಸೂತ್ರಧಾರ ನಾಗಶೇಖರ್ ಪೊಲೀಸರ ವಶಕ್ಕೆ.!
ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಹೆಲಿಕಾಫ್ಟರ್ ನಿಂದ ಹಾರುವ ದುಸ್ಸಾಹಸದ ದೃಶ್ಯದಲ್ಲಿ ಪಾಲ್ಗೊಂಡು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಪ್ರಕರಣದ ಎ-2 ಆರೋಪಿಯ ಬಂಧನವಾಗಿದೆ. [ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]
'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ಅವರನ್ನು ತಾವರೆಕೆರೆ ಪೊಲೀಸರು ಇಂದು (ನವೆಂಬರ್ 9) ಮಧ್ಯಾಹ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯಾಯಾಧೀಶರ ಮುಂದೆ ಸದ್ಯದಲ್ಲೇ ಹಾಜರು
'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ರವರನ್ನು ರಾಮನಗರ ನ್ಯಾಯಾಧೀಶರ ಮುಂದೆ ಸದ್ಯದಲ್ಲೇ ತಾವರೆಕೆರೆ ಪೊಲೀಸರು ಹಾಜರುಪಡಿಸಲಿದ್ದಾರೆ. ['ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!]

ನ್ಯಾಯಾಂಗ ಬಂಧನದಲ್ಲಿ ನಿರ್ಮಾಪಕ ಸುಂದರ್
'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್.ಪಿ.ಗೌಡ ಅವರನ್ನು ತಾವರೆಕೆರೆ ಪೊಲೀಸರು ಮಂಗಳವಾರ (ನವೆಂಬರ್ 8) ಸಂಜೆ ಬಂಧಿಸಿದ್ದರು. ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ಮೇಲೆ, ಸುಂದರ್.ಪಿ.ಗೌಡ ರವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಲಾಗಿದೆ. ['ರವಿ ವರ್ಮ ಈಡಿಯೆಟ್, ಕಪಾಳಕ್ಕೆ ಹೊಡೆಯಬೇಕು.!']

ರವಿವರ್ಮ ಇನ್ನೂ ಪತ್ತೆ ಆಗಿಲ್ಲ.!
ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಬಳಿಕ, ಕಳೆದ ಎರಡು ದಿನಗಳಿಂದ ಸಾಹಸ ನಿರ್ದೇಶಕ ರವಿವರ್ಮ ನಾಪತ್ತೆ ಆಗಿದ್ದಾರೆ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ['ಮಾಸ್ತಿ ಗುಡಿ' ದುಸ್ಸಾಹಸದ ಸೃಷ್ಟಿಕರ್ತ ರವಿವರ್ಮ ನಾಪತ್ತೆ.!]

ಎ-4 ಆರೋಪಿ ರವಿವರ್ಮ.!
ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ. ಸಾಹಸ ಸಹ ನಿರ್ದೇಶಕ ಎ-5 ಆರೋಪಿಯಾಗಿದ್ದು, ಚಿತ್ರದ ನಾಯಕ ನಟ ದುನಿಯಾ ವಿಜಯ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಓರ್ವ ನಟನ ದೇಹ ಪತ್ತೆ ಆಗಿದೆ
ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಇಬ್ಬರು ನಟರ ಪೈಕಿ, ಓರ್ವ ನಟನ ಮೃತದೇಹ ಪತ್ತೆ ಆಗಿದೆ. ಪತ್ತೆ ಆದ ಮೃತದೇಹ ಉದಯ್ ರವರದ್ದು ಅಂತ ನಟ ದುನಿಯಾ ವಿಜಯ್ ಗುರುತಿಸಿದ್ದಾರೆ. ಇನ್ನೋರ್ವ ನಟನ ಶವಕ್ಕಾಗಿ ಶೋಧ ಕಾರ್ಯಚರಣೆ ಮುಂದುವರೆದಿದೆ. ['ಮಾಸ್ತಿಗುಡಿ' ದುರಂತ: 2 ದಿನಗಳ ಬಳಿಕ ಓರ್ವ ನಟನ ಶವ ಪತ್ತೆ]


Click it and Unblock the Notifications











