'ಡೆಡ್ಲಿ' ಡೈರೆಕ್ಟರ್ ನಾಗಶೇಖರ್ ಬಗ್ಗೆ ಹಬ್ಬಿದ ಸುದ್ದಿ ಶುದ್ಧ ಸುಳ್ಳು.!

By Harshitha

ಶೀರ್ಷಿಕೆ ಓದಿದ ತಕ್ಷಣ 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಳ್ಳುವ ಮುನ್ನ ಪೂರ ಮ್ಯಾಟರ್ ಓದಿರಿ...

''ನಮ್ಮಂತ ಸಿನಿಮಾಗಳನ್ನ ಕೋಟಿ ಮಾಡಿ ಬಿಸಾಕಿದ್ದಾರೆ. ಅದನ್ನ ಮೀರಿ ಕ್ಲೈಮ್ಯಾಕ್ಸ್ ಅಂದ್ರೆ ಒಂದು ಥ್ರಿಲ್ ಇರಬೇಕು. ನಿಜವಾಗಿರುವುದನ್ನ ನಿಜವಾಗಲೂ ಮಾಡಿ ಆಡಿಯೆನ್ಸ್ ಗೆ ತೋರಿಸಬೇಕು. ಕೂತಿರುವ ಜನ ಎದ್ದು ನಿಂತುಕೊಂಡಿರಬೇಕು'' ಅಂತೆಲ್ಲಾ ಹೇಳಿ, ನಿಜವಾಗಲೂ ವಿಲನ್ ಗಳ ಜೀವ ನುಂಗುವ 'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಸ್ಕೆಚ್ ರೆಡಿಮಾಡಿದ್ದ ನಾಗಶೇಖರ್ ಅರೆಸ್ಟ್ ಆಗಿದ್ದಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. ಆದ್ರೆ, ಆ ಸುದ್ದಿ ಶುದ್ಧ ಸುಳ್ಳು.

ನಾಗಶೇಖರ್ ಬಂಧನ ಆಗಿಲ್ಲ.!

ನಾಗಶೇಖರ್ ಬಂಧನ ಆಗಿಲ್ಲ.!

ಕೆಲ ಕನ್ನಡ ಸುದ್ದಿ ವಾಹಿನಿಗಳಲ್ಲಿ ವರದಿ ಆದ ಹಾಗೆ, 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಅರೆಸ್ಟ್ ಆಗಿಲ್ಲ. ದುರ್ಘಟನೆ ನಡೆದ ಬಳಿಕ ನಾಗಶೇಖರ್ ಎಸ್ಕೇಪ್ ಆಗಿದ್ದಾರೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

ನಾಗಶೇಖರ್ ನಾಪತ್ತೆ.!

ನಾಗಶೇಖರ್ ನಾಪತ್ತೆ.!

ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ದುರ್ಘಟನೆ ನಡೆದ ಬಳಿಕ ನಾಗಶೇಖರ್ ತಲೆಮರೆಸಿಕೊಂಡಿದ್ದಾರೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

ಫೋನ್ ಸ್ವಿಚ್ ಆಫ್.!

ಫೋನ್ ಸ್ವಿಚ್ ಆಫ್.!

ದುರಂತ ನಡೆದ ದಿನದಿಂದ ಇಂದಿನವರೆಗೂ ನಾಗಶೇಖರ್ ರವರ ಫೋನ್ ಸ್ವಿಚ್ ಆಗಿದೆ. ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]

ರವಿವರ್ಮ ಕೂಡ ಎಸ್ಕೇಪ್.!

ರವಿವರ್ಮ ಕೂಡ ಎಸ್ಕೇಪ್.!

ಭಾರತದ ನಂಬರ್.1 ಸಾಹಸ ನಿರ್ದೇಶಕ ಅಂತ ಹೇಳಿಕೊಳ್ಳುವ ರವಿವರ್ಮ ಕೂಡ ಎಲ್ಲಿದ್ದಾರೆ ಎಂಬುದರ ಕುರಿತು ಮಾಹಿತಿ ಇಲ್ಲ. [ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!]

ಅಂತ್ಯಕ್ರಿಯೆಯಲ್ಲೂ ಭಾಗವಹಿಸಲಿಲ್ಲ

ಅಂತ್ಯಕ್ರಿಯೆಯಲ್ಲೂ ಭಾಗವಹಿಸಲಿಲ್ಲ

ನಟರಾದ ಅನಿಲ್ ಹಾಗೂ ಉದಯ್ ರವರ ಅಂತ್ಯಕ್ರಿಯೆಯಲ್ಲೂ ನಿರ್ದೇಶಕ ನಾಗಶೇಖರ್ ಹಾಗೂ ರವಿವರ್ಮ ಭಾಗವಹಿಸಲಿಲ್ಲ. ಇಬ್ಬರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

ಕೇಸ್ ದಾಖಲಾಗಿದೆ

ಕೇಸ್ ದಾಖಲಾಗಿದೆ

ಜಲಮಂಡಳಿ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ, 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿ, ಸಾಹಸ ಸಹ ನಿರ್ದೇಶಕ ಎ-5 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯವರೆಗೂ ನಿರ್ಮಾಪಕರ ಸುಂದರ್.ಪಿ.ಗೌಡ ರವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. [ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]

More from Filmibeat

English summary
Kannada Director Nagashekar is still missing after 'Maasti Gudi' Tragedy. 2 Actors (Anil and Uday) had lost their lives attempting an action sequence on Monday afternoon. The FIR was filed after T G Halli reservoir dam's director filed a formal complaint with the local police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X