For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ

  By Bharathkumar
  |

  'ಮಾಸ್ತಿ ಗುಡಿ' ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿಗೆ ಕನ್ನಡ ಚಿತ್ರರಂಗದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. 'ಮಾಸ್ತಿ ಗುಡಿ' ಚಿತ್ರತಂಡದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರಾಮನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

  ದುರ್ಘಟನೆ ಖಂಡಿಸಿ ನವರಸ ನಾಯಕ ಜಗ್ಗೇಶ್, 'ಮಾಸ್ತಿಗುಡಿ' ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  'Maasti Gudi' Tragedy: Jaggesh Twitter reaction

  ಸಾಹಸ ನಿರ್ದೇಶಕರ ನಿರ್ಲಕ್ಷ್ಯದಿಂದ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಜಗ್ಗೇಶ್ ನೇರವಾಗಿ ರವಿವರ್ಮ ರವರಿಗೆ ಛೀಮಾರಿ ಹಾಕಿದ್ದಾರೆ.[ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.! ]

  ''ರವಿವರ್ಮ ನೀನು ಅಡಿಮಟ್ಟದಿಂದ ಬಂದವನಾಗಿ ಬಡವರ ಮಕ್ಕಳ ತಳ್ಳಿ ಆಳ ನೋಡಿಬಿಟ್ಟೆಯಲ್ಲಾ. ಧಿಕ್ಕಾರವಿರಲಿ ನಿನ್ನ ಡಬ್ಬಾ ಸಾಹಸಕ್ಕೆ! ಅಯ್ಯೋ ದೇವರೆ ನಾನು ಕಂಡ ಬಡ ಮಕ್ಕಳು ಹೋಗಿಬಿಟ್ಟರು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.[ಮಾಸ್ತಿಗುಡಿ ಚಿತ್ರದ ಗ್ಯಾಲರಿ]

  ''ಬಡತನದಿಂದ ಬಂದ ಕಂದಮ್ಮಗಳು..ಎರಡು ತುತ್ತಿಗಾಗಿ ದೇಹ ದಣಿಸಿ ತಯಾರಾಗಿದ್ದ ಬಗೆ ನನ್ನ ಕಣ್ಣ ಮುಂದಿದೆ. ಎದುರಿಗೆ ಸಿಕ್ಕರೆ ಬಾಯ್ತುಂಬ ಅಣ್ಣಾ ಅಂತ ತಬ್ಬುತ್ತಿದ್ದರು. ಹೆಣವಾದರೆ!'' ಅಂತ ನೋವಿನ ಮಾತುಗಳನ್ನಾಡಿದ್ದಾರೆ ಜಗ್ಗೇಶ್

  ''ಅನಿಲ್ ಮತ್ತು ಉದಯ್...ನನ್ನ ಮಗ ಯತಿ ಸ್ನೇಹಿತರು. ಇಬ್ಬರೂ ಇನ್ನಿಲ್ಲ. ಲೈಫು ಇಷ್ಟೇನಾ?'' ಅಂತ ಜಗ್ಗೇಶ್ ಪತ್ನಿ ಪರಿಮಳಾ ಕೂಡ ಟ್ವೀಟ್ ಮಾಡಿದ್ದಾರೆ. ['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]

  'ಮಾಸ್ತಿಗುಡಿ' ಚಿತ್ರಕ್ಕಾಗಿ, ಅನಿಲ್ ಮತ್ತು ಉದಯ್...ಇಬ್ಬರೂ ತುಂಬ ಹಾರ್ಡ್ ವರ್ಕ್ ಮಾಡಿದ್ದರು. ಸತತವಾಗಿ ದೇಹವನ್ನ ದಂಡಿಸಿ, ಸಿಕ್ಸ್ ಪ್ಯಾಕ್ ಮಾಡಿದ್ದರು. ಹೆಚ್ಚು ಸಮಯ ಜಿಮ್ ನಲ್ಲಿ ಕಾಲ ಕಳೆಯುತ್ತಿದ್ದರು. ಇಂದು ಬೆಳಿಗ್ಗೆಯಿಂದ ಕೂಡ ಅನಿಲ್ ಹಾಗೂ ಉದಯ್ ಡಯೆಟ್ ನಲ್ಲಿದ್ದರು. ಖಾಲಿ ಹೊಟ್ಟೆಯಲ್ಲಿ ಶೂಟಿಂಗ್ ಗೆ ಪಾಲ್ಗೊಂಡಿದ್ದರು. ಆದ್ರೆ ವಿಧಿ ಲಿಖಿತ ಬೇರೆ ಆಗಿತ್ತು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  English summary
  Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene. Kannada Actor Jaggesh has taken his twitter account to react on this incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X