»   » ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!

ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!

Posted By:
Subscribe to Filmibeat Kannada

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಾಯಕರಾದ ಅನಿಲ್ ಹಾಗೂ ಉದಯ್ ದುರಂತ ಸಾವಿಗೀಡಾಗಿದ್ದಾರೆ. ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಕೆರೆಗೆ ಹಾರಿದ್ದ ಅನಿಲ್ ಹಾಗೂ ಉದಯ್ ಈಜಲಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹೆಲಿಕಾಫ್ಟರ್ ನಿಂದ ಕೆರೆಗೆ ಹಾರುವ ಸನ್ನಿವೇಶದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಮುನ್ನ ಉದಯ್ ಹಾಗೂ ಅನಿಲ್ ರವರ ಮನಸ್ಸಲ್ಲಿ ಆತಂಕ ಹಾಗೂ ಭಯ ಇದ್ದದ್ದು ಸತ್ಯ. ಅದಕ್ಕೆ ಕನ್ನಡ ಸುದ್ದಿ ವಾಹಿನಿಗಳ ಜೊತೆ ಇಬ್ಬರೂ ಮಾತನಾಡಿರುವ ವಿಡಿಯೋ ಬೈಟ್ಸ್ ಸಾಕ್ಷಿ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


'ಏನೂ ಪ್ರಿಪರೇಷನ್ ಮಾಡಿಲ್ಲ. ಮುಖ ನೋಡ್ಕೊಂಡ್ ಬೀಳ್ತೀನಿ. ಅದಾದ ಮೇಲೆ ದೇವರ ಪಾದ' ಅಂತ ಚಿತ್ರೀಕರಣಕ್ಕೆ ಹೋಗುವ ಮುನ್ನ ಉದಯ್ ಹಾಗೂ ಅನಿಲ್ ಹೇಳಿರುವುದನ್ನು ನೋಡಿದರೆ, ಇಬ್ಬರಿಗೂ ಸಾವಿನ ಮುನ್ಸೂಚನೆ ಇತ್ತಾ ಎಂಬ ಅನುಮಾನ ಕಾಡದೇ ಇರಲ್ಲ. ಕನ್ನಡ ಸುದ್ದಿ ವಾಹಿನಿಗಳ ಜೊತೆ ಉದಯ್ ಹಾಗೂ ಅನಿಲ್ ನೀಡಿರುವ ಹೇಳಿಕೆಗಳು ಹೀಗಿವೆ....


ಸಾವಿಗೂ ಮೊದಲು ಅನಿಲ್ ನೀಡಿದ್ದ ಹೇಳಿಕೆ

''ಸ್ವಿಮಿಂಗ್ ಬರುತ್ತೆ. ಆದ್ರೆ, ಫಸ್ಟ್ ಟೈಮ್ ಅಷ್ಟು ಎತ್ತರದಿಂದ ಜಿಗಿಯುತ್ತಿದ್ದೇವೆ. ಸ್ವಲ್ಪ ನರ್ವಸ್ ಆಗಿ ಏನೂ ಈಜು ಹೊಡಿತೀವೋ ಅಂತ ಗೊತ್ತಿಲ್ಲ. ನನಗೆ ಬಾವಿಯಲ್ಲಿ ಈಜು ಹೊಡೆದಿರುವ ಅನುಭವ ಅಷ್ಟೇ ಇರೋದು. 20-30 ಅಡಿ ಉದ್ದ ಸ್ವಿಮ್ ಮಾಡಿ ಅಭ್ಯಾಸವಿಲ್ಲ. ಎರಡೇ ಸಲ ಮೇಲೆ ಬರೋದು, ಮೂರನೇ ಸಲ ಬಂದಿಲ್ಲ ಅಂದ್ರೆ ಭಗವಂತ ಹಿಡಿದುಕೊಳ್ತಾನೆ ಅಷ್ಟೇ'' - ಅನಿಲ್, ಖಳನಟ ['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]


ಸಾವಿಗೂ ಮೊದಲು ಉದಯ್ ನೀಡಿದ್ದ ಹೇಳಿಕೆ

''ಸ್ವಿಮಿಂಗ್ ಬರುತ್ತೆ, ಬಟ್ ಲೈಟಾಗಿ ಅಷ್ಟೆ. ಅಷ್ಟು ದೊಡ್ಡ ಸ್ವಿಮ್ಮರ್ ಗಳು ಅಲ್ಲ. ಬಿದ್ರೆ ಎದ್ದು ಬರುತ್ತೇನೆ ಅಷ್ಟೇ. ನಾನು ಇದಕ್ಕಾಗಿ ಏನೂ ಪ್ರಿಪರೇಶನ್ ಮಾಡಿಲ್ಲ. ಭಯ ಇದೆ. ದುನಿಯಾ ವಿಜಯ್, ಅನಿಲ್ ಮತ್ತು ನಾನು...ಮೂರು ಜನ ಇದ್ದೀವಿ. ಮುಖ ಮುಖ ನೋಡ್ಕೊಂಡು ಬೀಳ್ತೀವಿ. ಅದೊಂದೇ ಗೊತ್ತಿರೋದು. ಅದಾದ ಮೇಲೆ ದೇವರ ಪಾದ'' - ಉದಯ್, ಖಳನಟ


ಸಾವಿನ ಮುನ್ಸೂಚನೆ

ಈಜಿನಲ್ಲಿ ನೈಪುಣ್ಯತೆ ಹೊಂದಿಲ್ಲ ಎಂಬುದನ್ನು ಸ್ವತಃ ಅನಿಲ್ ಹಾಗೂ ಉದಯ್ ರವರೇ ಹೇಳಿಕೊಂಡಿದ್ದಾರೆ. ಇನ್ನೂ ''ನಾವು ನೀರಿಗೆ ಹಾರಿದ ತಕ್ಷಣ, ನಮ್ಮ ರಕ್ಷಣೆಗೆ ಸಿಬ್ಬಂದಿಗಳು ಸಿದ್ದವಾಗಿದ್ದಾರೆ. ಅವರು ಬೋಟಿನಲ್ಲಿ ಬರುತ್ತಾರೆ'' ಎಂಬ ದೃಢವಾದ ನಂಬಿಕೆ ಅವರನ್ನ ಮತ್ತಷ್ಟು ಉತ್ಸಾಹಿಗಳನ್ನಾಗಿ ಮಾಡಿತ್ತು. ಒಂದು ಪಕ್ಷ ಸಿಬ್ಬಂದಿ ಬಾರದೇ ಹೋದರೆ ಸಾವು ಖಚಿತ ಎಂಬ ಆತಂಕ ಅವರನ್ನು ಕಾಡಿತ್ತು ಎನ್ನುವುದಕ್ಕೆ ಅವರ ಮಾತುಗಳೇ ಸಾಕ್ಷಿ.[ಮಾಸ್ತಿಗುಡಿ ಚಿತ್ರದ ಗ್ಯಾಲರಿ]


ಹೇಳಿದಂತೆ ಆಯ್ತು.!

ಉದಯ್ ಹಾಗೂ ಅನಿಲ್...ಇಬ್ಬರೂ ಹೇಳಿದ ಹಾಗೆ, ಅವರಿಬ್ಬರನ್ನ ಜವರಾಯ ಹಿಡಿದುಕೊಂಡೇ ಬಿಟ್ಟ. ತಮ್ಮ ಸಾಮರ್ಥ್ಯದಿಂದ ಸ್ವಲ್ಪ ದೂರ ಬಂದರೂ ಆ ದೇವರು ಕಾಪಾಡಲಿಲ್ಲ. ವಿಧಿ ವಿಪರೀತ.


ವಿಡಿಯೋ ನೋಡಿ....

'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಆದ ಅವಘಡದ ವಿಡಿಯೋ ಇಲ್ಲಿದೆ ನೋಡಿ....


English summary
Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene. Here is the detailed report about the Last words of Anil and Uday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada