For Quick Alerts
  ALLOW NOTIFICATIONS  
  For Daily Alerts

  'ಮಸಣ' ಗುಡಿ ಕಥೆ: ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಯಾಕೆ?

  By Harshitha
  |

  ಜೀವ ಅಂದ್ರೆ ಎಲ್ಲರದ್ದೂ ಒಂದೇ ಅಲ್ವಾ? ಹೀರೋ ಜೀವ, ವಿಲನ್ ಜೀವ, ಟೆಕ್ನೀಶಿಯನ್ ಜೀವ ಅಂತ ಏನಾದರೂ ವ್ಯತ್ಯಾಸ ಇದ್ಯಾ.? ಎಲ್ಲರ ಮೈಯಲ್ಲೂ ಹರಿಯುವುದು 'ಕೆಂಪು' ರಕ್ತ ತಾನೆ? ದುಡ್ಡು ಇದ್ದೋರ ಮೈಯಲ್ಲಿ ಕಲರ್ ಕಲರ್ ರಕ್ತ ಹರಿಯುತ್ತಾ.?

  ಅಪಾಯದ ಬಗ್ಗೆ ಮುನ್ಸೂಚನೆ ಇದ್ದರೂ, 'ಸ್ವಿಮ್ಮಿಂಗ್ ಬರಲ್ಲ ಸಾರ್' ಅಂತ ಬಾಯಿಬಿಟ್ಟು ಹೇಳಿದ್ದರೂ, 'ನೀವೇ ಮಾಡಬೇಕು'... ಅದರಲ್ಲೂ 'ಬರೀ ಮೈಯಲ್ಲೇ ಹೆಲಿಕಾಫ್ಟರ್ ನಿಂದ ಹಾರಬೇಕು. ಸಿಕ್ಸ್ ಪ್ಯಾಕ್ ಕಾಣಬೇಕು' ಅಂತ ಪ್ರೆಶರ್ ಹಾಕಿ, ಪರೋಕ್ಷವಾಗಿ ಅನಿಲ್ ಮತ್ತು ಉದಯ್ ಎಂಬ ಇಬ್ಬರು ಉದಯೋನ್ಮುಖ ನಟರ ಸಾವಿಗೆ 'ಮಾಸ್ತಿ ಗುಡಿ' ಚಿತ್ರತಂಡ ಕಾರಣವಾಗಿದೆ.

  ಆದ್ರೆ, ಇದೇ ಅನಿಲ್ ಮತ್ತು ಉದಯ್ ಜೊತೆ ಹಾರಿದ ದುನಿಯಾ ವಿಜಯ್ ಮಾತ್ರ ಸಾವಿನ ದವಡೆಯಿಂದ ಬಚಾವ್ ಆಗುತ್ತಾರೆ. ಅದು ಹೇಗೆ ಸಾಧ್ಯ? ಮುಂದೆ ಓದಿ....

  ದುನಿಯಾ ವಿಜಯ್ ಬಚಾವ್ ಆಗಲು ಲೈಫ್ ಜಾಕೆಟ್ ಕಾರಣ

  ದುನಿಯಾ ವಿಜಯ್ ಬಚಾವ್ ಆಗಲು ಲೈಫ್ ಜಾಕೆಟ್ ಕಾರಣ

  ಖಳನಟರಾದ ಅನಿಲ್ ಮತ್ತು ಉದಯ್ ನಂತರ ಹೆಲಿಕಾಫ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ದುನಿಯಾ ವಿಜಯ್ ಕೂಡ ಧುಮುಕುತ್ತಾರೆ. ಈಜಲು ಅನಿಲ್ ಮತ್ತು ಉದಯ್ ಹೆಣಗಾಡುತ್ತಿದ್ದರೆ, ದುನಿಯಾ ವಿಜಯ್ ಸರಾಗವಾಗಿ ಮೇಲೆ ಬರುತ್ತಾರೆ. ಅದಕ್ಕೆ ಕಾರಣ ದುನಿಯಾ ವಿಜಯ್ ಧರಿಸಿದ್ದ ಲೈಫ್ ಜಾಕೆಟ್.! ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ಧರಿಸಿದ್ದರು.!

  ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ಧರಿಸಿದ್ದರು.!

  ಹೆಲಿಕಾಫ್ಟರ್ ನಿಂದ ಮೂವರೂ ನೀರಿಗೆ ಹಾರಬೇಕಾದ ದೃಶ್ಯದ ಚಿತ್ರೀಕರಣದಲ್ಲಿ ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ಧರಿಸಿದ್ದರು ಅಂತ ಸುವರ್ಣ ನ್ಯೂಸ್ ವರದಿ ಮಾಡಿದೆ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

  ವಿಲನ್ ಗಳಿಗೆ ಸಿಗಲಿಲ್ಲ ಲೈಫ್ ಜಾಕೆಟ್.!

  ವಿಲನ್ ಗಳಿಗೆ ಸಿಗಲಿಲ್ಲ ಲೈಫ್ ಜಾಕೆಟ್.!

  ದುನಿಯಾ ವಿಜಯ್ ಲೈಫ್ ಜಾಕೆಟ್ ಧರಿಸಿ ನೀರಿಗೆ ಹಾರಿದರೆ, ವಿಲನ್ ಗಳಾದ ಅನಿಲ್ ಮತ್ತು ಉದಯ್ ಲೈಫ್ ಜಾಕೆಟ್ ಇಲ್ಲದೇ ನೀರಿಗೆ ಜಿಗಿಯುತ್ತಾರೆ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

  ಲೈಫ್ ಜಾಕೆಟ್ ಇದ್ದಿದ್ದರೆ....

  ಲೈಫ್ ಜಾಕೆಟ್ ಇದ್ದಿದ್ದರೆ....

  ಒಂದ್ವೇಳೆ ಲೈಫ್ ಜಾಕೆಟ್ ಬಳಸಿದ್ದರೆ, ದುನಿಯಾ ವಿಜಯ್ ರಂತೆ ಅನಿಲ್ ಮತ್ತು ಉದಯ್ ಕೂಡ ಪ್ರಾಣಾಪಾಯದಿಂದ ಪಾರಾಗುತ್ತಿದ್ದರೋ..ಏನೋ.!

  ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಯಾಕೆ ಸ್ವಾಮಿ?

  ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಯಾಕೆ ಸ್ವಾಮಿ?

  ಹೀರೋಗೆ ಮಾತ್ರ ಸೇಫ್ಟಿ, ವಿಲನ್ ಗಳಿಗೆ ಬೇಕಾಬಿಟ್ಟಿ ಯಾಕೆ? ದೊಡ್ಡ ನಟರ ಜೀವಕ್ಕೆ ಇರುವ ಬೆಲೆ ಕಿರಿಯ ನಟರ ಜೀವಕ್ಕೆ ಇಲ್ವಾ? ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ.

  'ಮಾಸ್ತಿ ಗುಡಿ' ಚಿತ್ರತಂಡ ಕೊಟ್ಟ ಕಾರಣ ಏನು?

  'ಮಾಸ್ತಿ ಗುಡಿ' ಚಿತ್ರತಂಡ ಕೊಟ್ಟ ಕಾರಣ ಏನು?

  ಅನಿಲ್ ಮತ್ತು ಉದಯ್ ರವರ ಸಿಕ್ಸ್ ಪ್ಯಾಕ್ ಕಾಣಬೇಕು. ಹೀಗಾಗಿ ಅವರಿಗೆ ಲೈಫ್ ಜಾಕೆಟ್ ತೊಡಸಲಿಲ್ಲ ಎಂಬ ಕಾರಣ ನೀಡಿದೆ 'ಮಾಸ್ತಿ ಗುಡಿ' ಚಿತ್ರತಂಡ.

  ಕನಿಷ್ಟ ರೋಪ್ ಕೂಡ ಬಳಸಲಿಲ್ಲ.!

  ಕನಿಷ್ಟ ರೋಪ್ ಕೂಡ ಬಳಸಲಿಲ್ಲ.!

  ಎಂತಹ ಕ್ಲೋಸಪ್ ಶಾಟ್ ಆಗಿದ್ದರೂ..ರೋಪ್ ಬಳಸಿದ್ದರೆ..ಈಗಿನ ತಂತ್ರಜ್ಞಾನದಲ್ಲಿ..ಅದನ್ನ ಎಡಿಟ್ ಮಾಡಬಹುದಿತ್ತು. ಟಾಲಿವುಡ್, ಬಾಲಿವುಡ್ಡೆಲ್ಲಾ ಜಾಲಾಡಿ ಬಂದಿರುವ ಸ್ಟಂಟ್ ಡೈರೆಕ್ಟರ್ ರವಿವರ್ಮ ರವರಿಗೆ ಇದರ ಕನಿಷ್ಟ ಜ್ಞಾನ ಕೂಡ ಇಲ್ಲದೇ ಹೋಯ್ತಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ['ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ]

  ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆ.!

  ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆ.!

  ರಿಯಲ್ ಸ್ಟಾರ್ ಉಪೇಂದ್ರ ಹೇಳಿರುವಂತೆ, 'ಸಾಧನೆಗಿಂತ ಜೀವ ಮುಖ್ಯ' ಎಂಬ ಪಾಠವನ್ನ ಅನಿಲ್ ಮತ್ತು ಉದಯ್ ಕಲಿಸಿಕೊಟ್ಟಿದ್ದಾರೆ. ಇನ್ನಾದರೂ, ಚಿತ್ರರಂಗ ಎಚ್ಚೆತ್ತುಕೊಂಡು ಚಿತ್ರೀಕರಣ ಸಮಯದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಎಲ್ಲರ ಜೀವಕ್ಕೂ ಬೆಲೆ ಕೊಟ್ಟರೆ ಒಳಿತು.

  ವಿಡಿಯೋ ನೋಡಿ....

  ವಿಡಿಯೋ ನೋಡಿ....

  'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಆದ ಅವಘಡದ ವಿಡಿಯೋ ಇಲ್ಲಿದೆ ನೋಡಿ....

  English summary
  According to Suvarna News Report, It was only Kannada Actor Duniya Vijay who wore Life Jacket during 'Maasti Gudi' dangerous stunt in which Anil and Uday, lost their lives attempting an action sequence on Monday afternoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X