ಏನೋ ಮಾಡಲು ಹೋಗಿ ಏನೋ ಮಾಡಿದ 'ಮಾಸ್ತಿಗುಡಿ' ನಾಗಶೇಖರ್

ನಿರ್ದೇಶಕ ನಾಗಶೇಖರ್ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ನಿಂದ ಇಡೀ ದಕ್ಷಿಣ ಭಾರತವನ್ನೇ ತಮ್ಮತ್ತ ಸೆಳೆಯುವ ಕನಸು ಕಾಣುತ್ತಿದ್ದರು. ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸವನ್ನ ಸೃಷ್ಠಿಸಲು ಹೋಗಿ, ಎಡವಟ್ಟು ಮಾಡಿಕೊಂಡರು.

By Bharathkumar

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಸಾವಿಗೀಡಾದ ಇಬ್ಬರು ಖಳ ನಟರ ಅಂತ್ಯ ಸಂಸ್ಕಾರ ನಿನ್ನೆ (ನವೆಂಬರ್ 10) ಬನಶಂಕರಿಯ ರುದ್ರಭೂಮಿಯಲ್ಲಿ ನೆರವೇರಿತು. ನಿರ್ದೇಶಕರ ಆಸೆಯನ್ನ ಈಡೇರಿಸಲು ಹೋಗಿ ಅನಿಲ್ ಮತ್ತು ಉದಯ್ ದುರಂತಕ್ಕೆ ಬಲಿಯಾಗಿದ್ದು ಮಾತ್ರ ವಿಷಾದನೀಯ.

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ನಿರ್ದೇಶಕ ನಾಗಶೇಖರ್ ತಮ್ಮದೇ ಕಲ್ಪನೆಯಲ್ಲಿದ್ದರು. ಈ ಕ್ಲೈಮ್ಯಾಕ್ಸ್ ನಿಂದ ಇಡೀ ದಕ್ಷಿಣ ಭಾರತವನ್ನೇ ತಮ್ಮತ್ತ ಸೆಳೆಯುವ ಕನಸು ಕಾಣುತ್ತಿದ್ದರು. ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸವನ್ನ ಸೃಷ್ಠಿಸುವ ಹಾದಿಯಲ್ಲಿದ್ದರು. ಇದೊಂದು ದೃಶ್ಯದ ಚಿತ್ರೀಕರಣ ಯಶಸ್ವಿಯಾಗಿ ಮುಗಿದು ಹೋಗಿದ್ದರೇ, ನಿರ್ದೇಶಕ ನಾಗಶೇಖರ್ ಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿತ್ತೇನೋ... ಗೊತ್ತಿಲ್ಲ.! ಆದ್ರೆ, ನಾಗಶೇಖರ್ ಅಂದುಕೊಂಡಿದ್ದೇ ಒಂದು. ಅಲ್ಲಿ ನಡೆದದ್ದೇ ಇನ್ನೊಂದು.! ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

'ಮಾಸ್ತಿ ಗುಡಿ' ಚಿತ್ರದಿಂದ ಖ್ಯಾತಿ ಪಡೆಯಬೇಕು ಎಂಬ ಹುಮ್ಮಸ್ಸಿನಲ್ಲಿದ್ದ ನಾಗಶೇಖರ್, ಅದೇ 'ಮಾಸ್ತಿ ಗುಡಿ' ಚಿತ್ರದ ದುರಂತದಿಂದ 'ಅಪಖ್ಯಾತಿ' ಪಡೆದಿದ್ದಾರೆ. ನಿಮಗೆ ಇನ್ನೊಂದು ವಿಷ್ಯ ಗೊತ್ತಿರಲಿ, ಚಿತ್ರೀಕರಣಕ್ಕೂ ಮುನ್ನ ನಾಗಶೇಖರ್ ಅವರ ಮಾತಿನಲ್ಲೂ ದುರ್ಘಟನೆ ನಡೆಯುವ ಮುನ್ಸೂಚನೆ ಎದ್ದು ಕಾಣುತ್ತಿತ್ತು. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

ಹೌದು, 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ ಚಿತ್ರೀಕರಣಕ್ಕೂ ಮುಂಚೆ ನಿರ್ದೇಶಕ ನಾಗಶೇಖರ್ ಅವರು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ 'ಅನಿಲ್ ಮತ್ತು ಉದಯ್' ಸಾವಿನ ಕುರಿತ ಮುನ್ಸೂಚನೆ ನೀಡಿದ್ದರು. ಹಾಗಾದ್ರೆ, 'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಗೂ ಮುನ್ನ ನಿರ್ದೇಶಕ ನಾಗಶೇಖರ್ ಏನೆಲ್ಲಾ ಬಡಾಯಿ ಕೊಚ್ಚಿಕೊಂಡಿದ್ದರು ಅಂತ ಅವರ ಮಾತುಗಳಲ್ಲೇ ಓದಿರಿ....

ಮಾಸ್ತಿ ಗುಡಿ ಕ್ಲೈಮ್ಯಾಕ್ಸ್ ಬಗ್ಗೆ ದೊಡ್ಡ ಕನಸು

ಮಾಸ್ತಿ ಗುಡಿ ಕ್ಲೈಮ್ಯಾಕ್ಸ್ ಬಗ್ಗೆ ದೊಡ್ಡ ಕನಸು

''ಇದು ಜೀವನ ಮತ್ತು ಮರಣದ ನಡುವೆ ನಡೆಯುವ ರೋಮಾಂಚನಕಾರಿ ಸೀಕ್ವೆನ್ಸ್. ನಮ್ಮ ಚಿತ್ರದ ನಾಯಕ ನಟ ದುನಿಯಾ ವಿಜಯ್ ಮತ್ತು ವಿಲನ್ ಗಳಾದ ಅನಿಲ್, ಉದಯ್ ಓಡುತ್ತಿರುವ ಹೆಲಿಕಾಫ್ಟರ್ ನಲ್ಲಿ ಹತ್ತಿ, 100 ಅಡಿ ಎತ್ತರದಿಂದ ನೀರಿಗೆ ಧುಮುಕುತ್ತಾರೆ. ಇದು ಬಹಳ ರಿಸ್ಕಿಯಲ್ಲಿ ರಿಸ್ಕಿ ಅಂತ ಹೇಳಬಹುದು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದು ಮೊದಲು, ಸೌತ್ ಇಂಡಿಯಾದಲ್ಲೇ ಇದು ಮೊದಲು ಅಂತ ಹೇಳೋಕೆ ಇಷ್ಟ ಪಡ್ತೀನಿ'' - ನಾಗಶೇಖರ್, ಮಾಸ್ತಿಗುಡಿ ಚಿತ್ರದ ನಿರ್ದೇಶಕ ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

ಎಲ್ಲರೂ ಮಾಡುವುದು ನಾವು ಮಾಡಲ್ಲ

ಎಲ್ಲರೂ ಮಾಡುವುದು ನಾವು ಮಾಡಲ್ಲ

''ತೆಲುಗಿನಲ್ಲಿ 'ಮಗಧೀರ', 'ಬಾಹುಬಲಿ' ಚಿತ್ರಗಳನ್ನ ನೀವು ನೋಡಿರಬಹುದು, ಎಲ್ಲರೂ ಏನ್ ಮಾಡ್ತಾರೆ ಅಂದ್ರೆ..ಗ್ರೀನ್ ಮ್ಯಾಟ್ ಹಾಕಿ, ಸಿ.ಜಿ ಕ್ರಿಯೆಟ್ ಮಾಡಿ, ಅಲ್ಲಿಂದ ನೆಗೆದ್ರು ಅಂತ ಹೇಳ್ತಾರೆ. ಅದನ್ನ ನಾವು ಮಾಡೋದು ಬೇಡ. ನಾವು ನೇರವಾಗಿ ಮಾಡೋಣ ಅಂತ ಅನ್ಕೊಂಡ್ವಿ. ಅದಕ್ಕೆ ನಮ್ಮ ಹೀರೋ ದುನಿಯಾ ವಿಜಯ್ ಅವರು ಇನ್ಸ್ ಪೈರ್ ಮಾಡಿದ್ರು'' - ನಾಗಶೇಖರ್, ಮಾಸ್ತಿಗುಡಿ ಚಿತ್ರದ ನಿರ್ದೇಶಕ [ನಾಪತ್ತೆ ಆಗಿದ್ದ 'ಮಸಣ ಗುಡಿ' ಸೂತ್ರಧಾರ ನಾಗಶೇಖರ್ ಪೊಲೀಸರ ವಶಕ್ಕೆ.!]

ರವಿವರ್ಮಗಾಗಿ ಮೂರು ತಿಂಗಳು ಕಾದರಂತೆ.!

ರವಿವರ್ಮಗಾಗಿ ಮೂರು ತಿಂಗಳು ಕಾದರಂತೆ.!

''ಆದ್ರೆ, ಇದು ಮಾಡೋದಕ್ಕೆ ಸಾಧ್ಯ. ಯಾವಾಗ ಅಂದ್ರೆ, ಒಬ್ಬ ಏಬಲ್ ಫೈಟ್ ಮಾಸ್ಟರ್ ಇದ್ದಾಗ ಮಾತ್ರ ಅಂತ ಡಿಸೈಡ್ ಮಾಡಿದ್ವಿ. ಅದಕ್ಕಾಗಿ ಡಾ.ರವಿವರ್ಮ ಅವರನ್ನ ಕರೆತಂದ್ವಿ. ರವಿವರ್ಮ ಅವರು ಇಂಡಿಯಾದ ನಂಬರ್ ಒನ್ ಫೈಟ್ ಮಾಸ್ಟರ್. ಶಾರುಖ್ ಖಾನ್ ಇಂದ ಹಿಡಿದು ಸಲ್ಮಾನ್ ಖಾನ್, ಚಿರಂಜೀವಿ.. ಎಲ್ಲ ದೊಡ್ಡ ನಟರಿಗೆ ಸ್ಟಂಟ್ ಮಾಡುವಂತಹ ರವಿವರ್ಮ ಅವರಗಾಗಿ 3 ಮೂರು ತಿಂಗಳು ಕಾದು ಈ ಸ್ಟಂಟ್ ಮಾಡುತ್ತಿದ್ದೇವೆ''- ನಾಗಶೇಖರ್, ಮಾಸ್ತಿಗುಡಿ ಚಿತ್ರದ ನಿರ್ದೇಶಕ [ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!]

ಚಿತ್ರತಂಡದ ಬಗ್ಗೆ ಕಾಳಜಿ ಹೆಚ್ಚಿದೆ

ಚಿತ್ರತಂಡದ ಬಗ್ಗೆ ಕಾಳಜಿ ಹೆಚ್ಚಿದೆ

''ಕ್ಯಾಪ್ಟನ್ ಆಗಿ ಯಾರಿಗೂ ಸಾವು-ನೋವು ಆಗದೆ, ಇಲ್ಲಿಯವರೆಗೂ ಸಿನಿಮಾ ಮಾಡ್ಕೊಂಡು ಬಂದಿದ್ದೀನಿ. ಒಂದು ನಿಜವಾದ ಡೆನ್ ನಲ್ಲಿ ಶೂಟ್ ಮಾಡಬೇಕು ಅಂದಾಗ, ಒಂದು ನಿಜವಾದ ಗುಹೆಯನ್ನ ನೋಡಿದ್ವಿ. ಆ ಗುಹೆಯಲ್ಲಿದ್ದ ಹಾವು, ಚೇಳು, ಬಾವುಲಿಗಳಿಗೆ ಹೆದರಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ನಮ್ಮ ಪ್ರೊಡ್ಯುಸರ್ ಸುಂದರ್ ಗೌಡ್ರು, 'ಬೇಡ ಇಲ್ಲಿ 150 ಜನ ಕೆಲಸ ಮಾಡ್ತಿದ್ದೀವಿ, ಯಾರಿಗಾದ್ರೂ ಹೆಚ್ಚು ಕಡಿಮೆ ಆದ್ರೆ, ಅವರ ಪ್ರಾಣಕ್ಕೆ ಹೆಚ್ಚು ಕಡಿಮೆ ಆಗುತ್ತೆ' ಅಂತ 50 ಲಕ್ಷ ರೂಪಾಯಿ ಬಂಡವಾಳದ ಸೆಟ್ ಹಾಕಿದರು'' - ನಾಗಶೇಖರ್, ಮಾಸ್ತಿಗುಡಿ ಚಿತ್ರದ ನಿರ್ದೇಶಕ

ಈ ರೀತಿ ಕ್ಲೈಮ್ಯಾಕ್ಸ್ ಮಾಡುವುದು ನನ್ನ ಆಸೆ

ಈ ರೀತಿ ಕ್ಲೈಮ್ಯಾಕ್ಸ್ ಮಾಡುವುದು ನನ್ನ ಆಸೆ

''ಎಲ್ಲರ ತರಹ ಸಿನಿಮಾ ನಾವು ಮಾಡಬಾರದು. ಯಾರು ಮಾಡೋಕೆ ಆಗ್ದೆ ಇರೋ ಸಿನಿಮಾ ನಾವು ಮಾಡೋಕಾಗಲ್ಲ. ನಮ್ಮಂತ ಸಿನಿಮಾಗಳನ್ನ ಕೋಟಿ ಮಾಡಿ ಬಿಸಾಕಿದ್ದಾರೆ ಈ ಜಗತ್ತಿನಲ್ಲಿ. ಅದನ್ನ ಮೀರಿ ಕ್ಲೈಮ್ಯಾಕ್ಸ್ ಅಂದ್ರೆ ಒಂದು ಥ್ರಿಲ್ ಇರಬೇಕು. ನಿಜವಾಗಿರುವುದನ್ನ ನಿಜವಾಗಲೂ ಮಾಡಿ ಆಡಿಯೆನ್ಸ್ ಗೆ ತೋರಿಸಿಬೇಕು. ಕೂತಿರುವ ಜನ ಎದ್ದು ನಿಂತುಕೊಂಡಿರಬೇಕು. ಆ ತರಹದ ಒಂದು ಟೆನ್ಷನ್ ಕ್ರಿಯೆಟ್ ಆಗ್ಬೇಕು ಎನ್ನುವುದು ನನ್ನ ಆಸೆ'' - ನಾಗಶೇಖರ್, ಮಾಸ್ತಿಗುಡಿ ಚಿತ್ರದ ನಿರ್ದೇಶಕ

ಕ್ಲೈಮ್ಯಾಕ್ಸ್ ಗಾಗಿ ನಟರ ಪ್ರಾಣ ಒತ್ತೆ ಇಟ್ಟಿದ್ದೀವಿ

ಕ್ಲೈಮ್ಯಾಕ್ಸ್ ಗಾಗಿ ನಟರ ಪ್ರಾಣ ಒತ್ತೆ ಇಟ್ಟಿದ್ದೀವಿ

''ನನ್ನ ಆಸೆಗೆ ಪೂರಕವಾಗಿ ದುನಿಯಾ ವಿಜಯ್, ಅನಿಲ್, ಉದಯ್, ಅವರು ತಮ್ಮ ಜೀವವನ್ನ ಒತ್ತೆಯಿಟ್ಟು, 'ಅಣ್ಣಾ ಏನಾದ್ರೂ ಪರವಾಗಿಲ್ಲ ನಾವು ಮಾಡ್ತೀವಿ, ನೀವೇನೂ ಆಸೆ ಇಟ್ಕೊಂಡಿದ್ದೀರಾ? ಅದು ಸ್ಕ್ರೀನ್ ಮೇಲೆ ಬರಬೇಕು' ಅಂತ ನಿಂತ್ಕೊಂಡು ಮಾಡ್ತಿದ್ದಾರೆ. ಅಷ್ಟು ಪ್ರಾಣ, ಜನರನ್ನ ಪ್ರೀತಿ ಮಾಡುವಂತಹ ನಮ್ಮ ಟೀಮ್ ಇವತ್ತು, ನಮ್ಮ ಹೀರೋ ಮತ್ತು ವಿಲನ್ ಗಳನ್ನ ಒತ್ತೆ ಇಟ್ಟು, ಅವರ ಜೀವನವನ್ನ ಒತ್ತೆಯಿಟ್ಟು ಈ ಸೀಕ್ವೆನ್ಸ್ ಮಾಡ್ತಾ ಇದ್ದೀವಿ'' - ನಾಗಶೇಖರ್, ಮಾಸ್ತಿಗುಡಿ ಚಿತ್ರದ ನಿರ್ದೇಶಕ ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]

More from Filmibeat

English summary
Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene. Here is the Maasti Gudi Movie Director Nagashekar Speech Before the Climax Shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X