'ಮಾಸ್ತಿಗುಡಿ' ದುರಂತ: 2 ದಿನಗಳ ಬಳಿಕ ಓರ್ವ ನಟನ ಶವ ಪತ್ತೆ

By Bharath Kumar

'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಆದ ದುರಂತದಲ್ಲಿ ಸಾವಿಗೀಡಾಗಿದ್ದ ಇಬ್ಬರು ಖಳ ನಟರ ಪೈಕಿ, ಇಂದು ಮಧ್ಯಾಹ್ನ ಒರ್ವ ನಟನ ಶವ ಪತ್ತೆಯಾಗಿದೆ.

ಸತತ ಎರಡು ದಿನಗಳಿಂದ ಅನಿಲ್ ಹಾಗೂ ಉದಯ್ ಅವರ ಮೃತದೇಹಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಕೆಲವೇ ನಿಮಿಷಗಳ ಹಿಂದೆ ಓರ್ವ ನಟನ ಶವ ಪತ್ತೆಯಾಗಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

'Maasti Gudi' Tragedy: One of the Actor body found

'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದ ಸ್ಪಾಟ್ ನಲ್ಲೇ ಶವ ತೇಲಿ ಬಂದ ಪರಿಣಾಮ, ಎನ್.ಡಿ.ಆರ್.ಎಫ್ ಸಿಬ್ಬಂದಿಯವರಿಗೆ ಮೃತದೇಹ ಸಿಕ್ಕಿದೆ. ಪತ್ತೆಯಾದ ಮೃತದೇಹ ಉದಯ್ ರವರದ್ದು ಅಂತ ನಟ ದುನಿಯಾ ವಿಜಯ್ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ. ಆದ್ರೆ, ಎನ್.ಡಿ.ಆರ್.ಎಫ್ ಸಿಬ್ಬಂದಿ, ಜಿಲ್ಲಾಧಿಕಾರಿ ವಿ.ಶಂಕರ್ ಹಾಗೂ ಅಗ್ನಿಶಾಮಕದಳದ ಮುಖ್ಯಸ್ಥ ರೇವಣ್ಣ ಅವರು ಹೇಳುವ ಪ್ರಕಾರ, ಪತ್ತೆಯಾದ ಶವ ಅನಿಲ್ ರದ್ದು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

ತಿಪ್ಪಗೊಂಡನಹಳ್ಳಿ ಕೆರೆಯ ಪಕ್ಕದಲ್ಲೇ ಶವಪರೀಕ್ಷೆ ನಡೆಯಲಿದ್ದು, ನಂತರ ಮೃತದೇಹವನ್ನ ಮನೆಗೆ ರವಾನಿಸಲಾಗತ್ತದೆ. ಇನ್ನೋರ್ವ ನಟನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹೆಲಿಕಾಫ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿ ನಟ ಅನಿಲ್ ಹಾಗೂ ರಾಘವ್ ಉದಯ್ ನೀರುಪಾಲಾಗಿದ್ದರು. ಈಗಾಗಲೇ, 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್.ಪಿ.ಗೌಡ ರವರನ್ನ ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.

More from Filmibeat

English summary
Body of one of the actors, who drowned in T G Halli during a shoot has been found by search teams. Teams of NDRF, Fire and safety personnel along with the help of local fishermen had been scouting the T G Halli reservoir waters since Monday evening for bodies of actors Uday and Anil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X