»   » ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ ಎಂದ ನಟ ದುನಿಯಾ ವಿಜಯ್.!

ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ ಎಂದ ನಟ ದುನಿಯಾ ವಿಜಯ್.!

Posted By:
Subscribe to Filmibeat Kannada

ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆದ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ನಡೆದ ದುರಂತ ಪ್ರಕರಣದಲ್ಲಿ ನಿರ್ಮಾಪಕ ಸುಂದರ್.ಪಿ.ಗೌಡ ರವರ ತಪ್ಪೇನೂ ಇಲ್ಲ ಅಂತ ನಟ ದುನಿಯಾ ವಿಜಯ್ ಹೇಳಿದ್ದಾರೆ. [ಕಡೆಗೂ ಪೊಲೀಸರ ಮುಂದೆ ಶರಣಾದ ನಾಗಶೇಖರ್, ರವಿವರ್ಮ.!]

ಮಾಗಡಿ ಪೊಲೀಸ್ ಠಾಣೆಯಲ್ಲಿ 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮ ಸರೆಂಡರ್ ಆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದುನಿಯಾ ವಿಜಯ್, ''ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ'' ಎಂದರು.


ಮಾಧ್ಯಮಗಳ ಮುಂದೆ ದುನಿಯಾ ವಿಜಯ್ ಹೇಳಿದ್ದೇನು.?

''ನಿರ್ಲಕ್ಷ್ಯದಲ್ಲಿ ಈ ದುರ್ಘಟನೆ ನಡೆದಿದೆ. ಸುಂದರ್ ಎ-1 ಆರೋಪಿ ಅಲ್ಲ. ಅವರನ್ನ ಎ-1 ಆರೋಪಿ ಮಾಡಿರುವುದು ಸರಿ ಅಲ್ಲ'' ಅಂತ ಮಾಧ್ಯಮಗಳ ಜೊತೆ ಮಾತನಾಡುವಾಗ ನಟ ದುನಿಯಾ ವಿಜಯ್ ಹೇಳಿದರು. ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]


ಸುಂದರ್.ಪಿ.ಗೌಡ ದುಡ್ಡು ಹಾಕಿದ್ದಾರೆ ಅಷ್ಟೇ.!

''ಸುಂದರ್ ದುಡ್ಡು ತಂದು ಹಾಕಿದ್ದಾರೆ. ಅಷ್ಟು ಬಿಟ್ಟರೆ, ಅವರು ಈ ಘಟನೆಯಲ್ಲಿ ಅಮಾಯಕ'' - ದುನಿಯಾ ವಿಜಯ್ ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


ಶರಣಾಗಿ ಎಂದು ಹೇಳಿದೆ.!

''ಇಂದು ಬೆಳಗ್ಗೆ ನನ್ನ ಮನೆಗೆ ನಾಗಶೇಖರ್ ಹಾಗೂ ರವಿವರ್ಮ ಬಂದಿದ್ದರು. ಅವರು ಬಂದ ಕೂಡಲೆ, ಸರೆಂಡರ್ ಆಗಿ ಅಂತ ಹೇಳಿದೆ. ನನ್ನ ಕೆಲಸ ನಾನು ಮಾಡಿದ್ದೇನೆ'' - ದುನಿಯಾ ವಿಜಯ್ [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]


ಮ್ಯಾನೇಜರ್ ಭರತ್ ಎಲ್ಲಿದ್ದರೂ, ಬರಬೇಕು.!

''ಮ್ಯಾನೇಜರ್ ಭರತ್ ಎಲ್ಲಿದ್ದರೂ, ಬಂದು ಸರೆಂಡರ್ ಆಗಬೇಕು. ಕಾನೂನು ಕಣ್ಣಿನಿಂದ ತಪ್ಪಿಸಿಕೊಂಡರೆ ಭಾರಿ ಅನಾಹುತ ಎದುರಿಸಬೇಕಾಗುತ್ತೆ'' - ದುನಿಯಾ ವಿಜಯ್.


ಎದುರಿಸಲು ಸಿದ್ಧ

''ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ನನ್ನನ್ನೂ ವಿಚಾರಣೆ ಮಾಡಲಿ. ಎಲ್ಲದಕ್ಕೂ ನಾನು ರೆಡಿ ಇದ್ದೀನಿ. ಫೇಸ್ ಮಾಡುತ್ತೇನೆ'' - ದುನಿಯಾ ವಿಜಯ್


English summary
Kannada Movie 'Maasti Gudi' Producer Sundar.P.Gowda is innocent says Kannada Actor Duniya Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada