»   » ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!

ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!

Posted By:
Subscribe to Filmibeat Kannada

ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿರುವ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಹೆಲಿಕಾಫ್ಟರ್ ನಿಂದ ಹಾರುವ ರೋಚಕ ದೃಶ್ಯದಲ್ಲಿ ಪಾಲ್ಗೊಂಡು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಪ್ರಕರಣದ ಎ-1 ಆರೋಪಿಯ ಬಂಧನವಾಗಿದೆ. ['ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!]

'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್.ಪಿ.ಗೌಡ ಅವರನ್ನು ತಾವರೆಕೆರೆ ಪೊಲೀಸರು ಮಂಗಳವಾರ (ನವೆಂಬರ್ 8) ಸಂಜೆ ಬಂಧಿಸಿದ್ದಾರೆ.


ನ್ಯಾಯಾಂಗ ಬಂಧನದಲ್ಲಿ ನಿರ್ಮಾಪಕ

'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್.ಪಿ.ಗೌಡ ಅವರನ್ನು ರಾಮನಗರದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ಶಿಕ್ಷೆ ಲಭಿಸಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]


ಉಳಿದವರು ಎಲ್ಲಿ.?

'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ ನಾಪತ್ತೆ ಆಗಿದ್ದು, ಹುಡುಕಾಟ ಜಾರಿಯಲ್ಲಿದೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


ಮೊನ್ನೆಯೇ ಎಸ್ಕೇಪ್ ಆದ ರವಿವರ್ಮ

ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಬಳಿಕ ತಿಪ್ಪಗೊಂಡನಹಳ್ಳಿ ಕೆರೆಯ ಆಸುಪಾಸಿನಲ್ಲಿ ರವಿವರ್ಮ ಕಾಣಿಸಿಕೊಳ್ಳಲ್ಲೇ ಇಲ್ಲ. ದುನಿಯಾ ವಿಜಯ್ ಸೇರಿದಂತೆ 'ಮಾಸ್ತಿ ಗುಡಿ' ಚಿತ್ರತಂಡದವರು ಅನಿಲ್ ಮತ್ತು ಉದಯ್ ಮೃತದೇಹಕ್ಕಾಗಿ ಶೋಧ ನಡೆಸಲು ಆರಂಭಿಸಿದರೂ, ಆ ಕಾರ್ಯಕ್ಕೆ ರವಿವರ್ಮ ಕೈ ಜೋಡಿಸಲಿಲ್ಲ. Infact, ಅದ್ಯಾವಾಗ ರವಿವರ್ಮ ಎಸ್ಕೇಪ್ ಆದರೋ, ಅಲ್ಲಿರುವವರಿಗೆ ಗೊತ್ತೇ ಆಗಲಿಲ್ಲ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]


ನಾಗಶೇಖರ್ ರವರದ್ದು ಅದೇ ಕಥೆ

ದುರ್ಘಟನೆ ನಡೆದ ಬಳಿಕ 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಕೂಡ ಮಿಸ್ಸಿಂಗ್. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]


ಇಬ್ಬರ ಫೋನ್ ಸ್ವಿಚ್ ಆಫ್.!

ಯಾರ ಕೈಗೂ ಸಿಗದ ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮ ರವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ['ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ]


ಎಲ್ಲರ ಮೇಲೂ ಕೇಸ್ ದಾಖಲಾಗಿದೆ.!

ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿದೆ. ಸಾಹಸ ಸಹ ನಿರ್ದೇಶಕ ಎ-5 ಆರೋಪಿಯಾಗಿದ್ದು, ಚಿತ್ರದ ನಾಯಕ ನಟ ದುನಿಯಾ ವಿಜಯ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.


ದುನಿಯಾ ವಿಜಯ್ ಮಾತ್ರ ಇದ್ದಾರೆ.!

ಸದ್ಯ ಲೈಫ್ ಜಾಕೆಟ್ ತೊಟ್ಟು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ಹಾಗೂ ಸ್ಥಳೀಯ ನುರಿತ ಈಜುಪಟುಗಳ ಜೊತೆ ಅನಿಲ್ ಹಾಗೂ ಉದಯ್ ರವರ ಮೃತದೇಹಗಳ ಶೋಧಕಾರ್ಯದಲ್ಲಿ ದುನಿಯಾ ವಿಜಯ್ ನಿರತರಾಗಿದ್ದಾರೆ.


ಇನ್ನೂ ಪತ್ತೆ ಆಗಿಲ್ಲ

ದುರ್ಘಟನೆ ನಡೆದು 2 ದಿನಗಳು ಕಳೆದರೂ ಇನ್ನೂ ಅನಿಲ್ ಹಾಗೂ ಉದಯ್ ರವರ ಮೃತದೇಹ ಪತ್ತೆ ಆಗಿಲ್ಲ.['ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!]


English summary
Tavarekere Police on Tuesday arrested Sundar.P.Gowda, Producer of 'Maasti Gudi', After 2 of its actors lost their lives attempting an action sequence on Monday afternoon. The FIR was filed after T G Halli reservoir dam's director filed a formal complaint with the local police.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada